Oplus_131072

ಭಾಗೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶರಣಬಸಪ್ಪ ಪಾಟೀಲ್, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ದೊಡ್ಡಮನಿ ಅವಿರೋಧ ಆಯ್ಕೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಭಾಗೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶರಣಬಸಪ್ಪ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ದೊಡ್ಡಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.

ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಸುಭಾಶ್ಚಂದ್ರ ಮುತ್ತಣ್ಣ, ಶರಪೋದ್ದಿನ್ ಅಬ್ದುಲ್ ಹಮೀದ್, ಅಂಬಾರಾಯ ಹಣಮಂತರಾಯ, ಸಾಬಣ್ಣ ನರಸಪ್ಪ, ಇಂದುಶೇಖರ ನಾಗಣ್ಣ, ಸಿದ್ರಾಮಪ್ಪ ಕಾಮಣ್ಣ, ದೇವಿಂದ್ರ ಮೈಲಾರಿ, ವಿಶ್ವನಾಥ ರುದ್ರಪ್ಪ, ಶರಣಮ್ಮ ವಿಜ್ಞೇಶ್ವರ, ಲಕ್ಷ್ಮೀಬಾಯಿ ಸಿದ್ರಾಮಪ್ಪ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಪಾಟೀಲ್ ದಳಪತಿ, ಪ್ರದೀಪ್ ಕದ್ದರಗಿ, ಅರುಣ್ ಯಾಗಾಪೂರ, ಮದನ್ ಯಾಗಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಫಲಿತಾಂಶ ಹೊರಬೀಳುತ್ತಿದ್ದಂತೆ ಮುಖಂಡರು ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!