Oplus_0

ಭೀಮನಹಳ್ಳಿ ಗ್ರಾಮದಲ್ಲಿ ನಾಲವಾರ ಶ್ರೀಗಳಿಗೆ ಗುರುವಂದನೆ ಮತ್ತು ಹಯ್ಯಾಳಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ | ಮಠ ಮಂದಿರಕ್ಕೆ ಹೋಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಪ್ರಾಪ್ತಿ: ನಾಲವಾರ ಶ್ರೀ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರಸ್ತುತ ದಿನಗಳಲ್ಲಿ ಬದುಕಿಗೆ ಶಾಂತಿ ಮತ್ತು ನೆಮ್ಮದಿಗಳ ಅವಶ್ಯಕತೆಯಿದೆ, ದೇವಸ್ಥಾನ, ಮಠ ಮಂದಿರ ಆಧ್ಯಾತ್ಮಿಕ ಕೇಂದ್ರಗಳಿಗೆ ಹೋಗುವುದರಿಂದ ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಪ್ರಾಪ್ತಿಯಾಗಲಿದೆ ಎಂದು ನಾಲವಾರ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಹಾಮಠದ ಪೀಠಾಧಿಪತಿ ಡಾ. ಸಿದ್ಧ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೂತನವಾಗಿ ನಿರ್ಮಾಣಗೊಂಡಿರುವ ಹಯ್ಯಾಳಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಾಗೂ ಗುರುವಂದನಾ ಮತ್ತು ರಜತ್ ಕಿರೀಟ ಸಮರ್ಪಣೆ, ತುಲಾಭಾರ ಸಮಾರಂಭದ ಸಾನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯನು ತನ್ನ ಲೌಕಿಕ ಸುಖಕ್ಕಾಗಿ ದುಡ್ಡು ಗಳಿಸುತ್ತಿದ್ದಾನೆ. ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಒತ್ತಡದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ, ಮನುಷ್ಯನ ಒತ್ತಡ ಮತ್ತು ಮನಸ್ಸಿಗೆ ಶಾಂತಿ ನೆಮ್ಮದಿಗಳು ಇಂತಹ ಧಾರ್ಮಿಕ ಕಾರ್ಯಗಳು ಮಾಡುವುದರಿಂದ ಪ್ರಾಪ್ತಿ ದೊರೆಯುತ್ತದೆ ಎಂದರು.

ದೇವಸ್ಥಾನಗಳು ನಿರ್ಮಾಣ ಮಾಡುವುದು ದೊಡ್ಡ ವಿಷಯವಲ್ಲ ಜೊತೆಗೆ ದೇವಸ್ಥಾನದ ಪವಿತ್ರತೆಯನ್ನು ಕಾಪಾಡಬೇಕು ಅದರ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಬೇಕು ನಿರಂತರ ನಿತ್ಯ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಾಹಿತ್ಯಿಕ ಚಟುವಟಿಕೆಗಳು ನಡೆಯಬೇಕು. ನಾಡಿಗೆ ಮತ್ತು ದೇಶಕ್ಕೆ ಒಳ್ಳೆಯದಾಗುವ ವಿಚಾರಗಳನ್ನು ಬಿತ್ತರಿಸುವ ಕಾರ್ಯಗಳು ನಿರಂತರವಾಗಿ ಸಾಗಬೇಕು ಎಂದು ಹೇಳಿದರು.

ಗುರುವಿನಿಂದ ಗುರು ಭಕ್ತಿ ಶ್ರೇಷ್ಠವಾಗಿದ್ದು ಉಳ್ಳುವವರು ಭಕ್ತರು ತಮ್ಮ ಭಕ್ತಿಯನ್ನು ತೋರಿಸುವ ಮುಖಾಂತರ ಸೇವೆಯನ್ನು ಮಾಡುತ್ತಾರೆ. ಗುರು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರಿಸುತ್ತಾರೆ, ಗುರುವಿನ ಆಶೀರ್ವಾದದ ಫಲದಿಂದ ಅಸಾಧ್ಯವಾದ ಕೆಲಸವನ್ನು ಕೂಡ ಮಾಡಲು ಅವರ ಆಶೀರ್ವಾದದ ಬಲ ಬಲಿಷ್ಠವಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಿವಲಿಂಗ ಕೊಳ್ಳಿ ಬೀಮನಹಳ್ಳಿ ಬೆಂಗಳೂರು ಅವರ ಪರಿವಾರದ ಮತ್ತು ಗ್ರಾಮಸ್ಥರಿಂದ ಶ್ರೀಗಳಿಗೆ ಗುರುವಂದನಾ ಹಾಗೂ ರಜತ್ ಕಿರೀಟ ಸಮರ್ಪಣೆ ಮಾಡಲಾಯಿತು. ಇದಕ್ಕೂ ಪೂರ್ವದಲ್ಲಿ ಗ್ರಾಮಕ್ಕೆ ಆಗಮಿಸಿದ ನಾಲವಾರ ಶ್ರೀಗಳನ್ನು ಸಾರೋಟಿನಲ್ಲಿ ಭವ್ಯವಾಗಿ ಮೆರವಣಿಗೆ ನೆರವೇರಿತು.

ಈ ಸಂದರ್ಭದಲ್ಲಿ ಡೊಳ್ಳು ಹಲೆಗೆ ಬಾಜಿ ಭಜಂತ್ರಿ ಮತ್ತು ಪೂರ್ಣ ಕುಂಬ ಕಳಸಗಳೊಂದಿಗೆ ಭಕ್ತಿ ಪೂರ್ವಕವಾಗಿ ಸಹಸ್ರಾರು ಭಕ್ತರು ಸ್ವಾಗತಿಸಿದರು. ಮೆರವಣಿಗೆ ಉದ್ದಗಲಕ್ಕೂ ಶ್ರೀ ಕೋರಿಸಿದ್ದೇಶ್ವರ ಮಹಾರಾಜಕಿ ಜೈ ಎಂದು ಜೈಂಕಾರ ಮೊಳಗಿಸಿದರು. ತದನಂತರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಹಯ್ಯಾಳಲಿಂಗೇಶ್ವರ ಮಂದಿರ ಉದ್ಘಾಟನೆ ಮತ್ತು ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಓಂಕಾರ ಸಾಹುಕಾರ್, ರವಿ ಶಿಕ್ಷಕರು, ಬಸವರಾಜ್ ಕೊಳ್ಳಿ, ಅಶೋಕ್, ನರಸಪ್ಪ ದಂಡೋತಿ, ಭೀಮರಾಯ ಅಂಬರ್, ಸುಭಾಷ್ ಗೌಡ, ಮಲ್ಲಿಕಾರ್ಜುನ್, ಭೀಮಣ್ಣ ಹಳ್ಳಿ, ನಾಗರೆಡ್ಡಿ ಗೋಪಸೇನ್, ರವಿ ಸಾಹು ರೇಷ್ಮೆ. ಬಸವರಾಜ್ ಗಾರಂಪಳ್ಳಿ, ಮಹಾದೇವ ಗಂವಾರ, ಮಲ್ಲಿಕಾರ್ಜುನ ಎಣ್ಣೆ ನಾಲವಾರ ಸೇರಿದಂತೆ ಇತರರು ಇದ್ದರು. ಕುಮಾರಿ ಪ್ರತಿಕ್ಷಾ ಗಾರಂಪಳ್ಳಿ ಅವರಿಂದ ಭರತನಾಟ್ಯ ನಡೆಯಿತು, ನವಲಿಂಗ ಪಾಟೀಲ್ ಬೀದರ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!