ಚಿತ್ತಾಪುರ ಖಜಾನೆ ಅಧಿಕಾರಿ ಸೈಯದ್ ನಾಸಿರ್ ಹಶ್ಮಿ ಅವರಿಗೆ ಸರ್ಕಾರಿ ನೌಕರರ ಸಂಘದಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಉಪ ಖಜಾನೆ ಕಚೇರಿಗೆ ಸಹಾಯಕ ಖಜಾನೆ ಅಧಿಕಾರಿಯಾಗಿ ಗುರುವಾರ ಹಾಜರಾದ ಸೈಯದ್ ನಾಸಿರ್ ಹಶ್ಮಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ನೇತೃತ್ವದಲ್ಲಿ ನೌಕರರ ಸನ್ಮಾನಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಪದಾಧಿಕಾರಿಗಳಾದ ಪರಶುರಾಮ, ಉದಯಶಂಕರ ಮೋದಿ, ಅಮೃತ ಕ್ಷೀರಸಾಗರ, ಅಬ್ದುಲ್ ಸಲೀಂ, ಶರಣಪ್ಪ ಏಕೂರ, ಹುಸೇನ ಪಾಶಾ, ಬೇಬಿ ಬಿರಾದಾರ ಉಪಸ್ಥಿತರಿದ್ದರು.

