Oplus_0

ಚಿತ್ತಾಪುರ ಡಿಗ್ರಿ ಕಾಲೇಜಿನಲ್ಲಿ ರಾಷ್ಟ್ರೀಯ ಕಣ್ಣಿನ ದಿವಸ ಮತ್ತು ಭಾರತ ಜೋಡೋ ಕಾರ್ಯಕ್ರಮ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಆರ್.ಕೆ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ  ಹಾಗೂ ಪುರಸಭೆ ಚಿತ್ತಾಪುರ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಭಾರತೀಯ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ರಾಷ್ಟ್ರೀಯ ಕಣ್ಣಿನ ದಿವಸವನ್ನು ಮತ್ತು ಭಾರತ ಜೋಡೋ ಎಂಬ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಡಾ. ಪೂಜಾ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುಜ್ಞಾನಿ ಪಾಟೀಲ್, ಕಾಳಮ್ಮ ಮಠಪತಿ, ಗುರುರಾಜ್ ಮೂಲ್ಗೆ, ಡಾ. ವಿಠ್ಠಲ್ ಹಾದಿಮನಿ, ಸುನಿಲ್ ಕುಮಾರ್, ಡಾ. ಕೈಲಾಸ್ಪತಿ ವಿಶ್ವಕರ್ಮ, ಆಶ್ಮಾನಿಕ, ರೋಹಿಣಿ ಕಲ್ಮಠ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ್ ಬಿರಾದರ್ ವಹಿಸಿದರು. ರೆಡ್ ಕ್ರಾಸ್ ಘಟಕದ ಅಧಿಕಾರಿಗಳಾದ ಡಾ. ಸೂಗುರೇಶ್ವರ ಆರ್  ಸ್ವಾಗತಿಸಿದರು, ಡಾ. ಸಂಗಪ್ಪ ವಿ.ಮಾಮನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಲ್ಲಪ್ಪ ಎಸ್ ತೊಟ್ನಳ್ಳಿ ನಿರೂಪಿಸಿದರು, ಡಾ. ಮಂಜುನಾಥ್ ಜಿ ದೇಶಪಾಂಡೆ ವಂದಿಸಿದರು. ಲಕ್ಷ್ಮಿಪುತ್ರ ಪಾಸೋಡಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ಮಕ್ಕಳು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!