ದಂಡಗುಂಡ ಬಸವಣ್ಣ ಜಾತ್ರಾ ಮಹೋತ್ಸವ | ಆ.30 ರಂದು ಗಂಗಾಸ್ಥಳ, ಆ.31 ರಂದು ರಥೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಂಡಗುಂಡ ಸುಕ್ಷೇತ್ರದ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಆಗಸ್ಟ್ 30 ರಂದು ಗಂಗಾಸ್ಥಳ ಹಾಗೂ ಆ.31 ರಂದು ರಥೋತ್ಸವ ನಡೆಯಲಿದೆ ಎಂದು ಶ್ರೀ ದಂಡಗುಂಡ ಬಸವೇಶ್ವರ ಟ್ರಸ್ಟ್ ಕಮೀಟಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಚಂದ್ರಶೇಖರ ಅವಂಟಿ, ಭೀಮಣ್ಣ ಸಾಲಿ, ರಾಜಶೇಖರ್ ಗೌಡ ಅವರು ತಿಳಿಸಿದ್ದಾರೆ.
ಆ.30 ರಂದು ಬೆಳಗ್ಗೆ 9 ಗಂಟೆಗೆ ನೂತನ ಕಳಸಾರೋಹಣ, ನಡೆಯಲಿದ್ದು ಈ ಸಮಾರಂಭಕ್ಕೆ ಅಬ್ಬೇತುಮುಕುರ್ ಶ್ರೀ, ನಾಲವಾರ ಶ್ರೀ, ಕಂಬಳೇಶ್ವರ ಶ್ರೀ, ದಿಗ್ಗಾಂವ ಶ್ರೀ, ಹಲಕಟ್ಪಿ ಶ್ರೀ, ಹೊನ್ನಾಳ ಶ್ರೀ ಸೇರಿದಂತೆ ಅನೇಕರು ಮಠಾಧೀಶರು ಆಗಮಿಸಲಿದ್ದಾರೆ. ಸಾಯಂಕಾಲ ಗಂಗಸ್ಥಳ ನಡೆಯಲಿದೆ ಆ.31 ಸೋಮವಾರ ಸಂಜೆ 6 ಗಂಟೆಗೆ ರಥೋತ್ಸವ ನಡೆಯಲಿದೆ ಹಾಗೂ ಸೆಪ್ಟೆಂಬರ್ 1 ಮಂಗಳವಾರ ರಂದು ಕೈ ಕುಸ್ತಿಗಳು ನಡೆಯಲಿದೆ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಬಸವಣ್ಣನ ದೇವರ ಕೃಪೆಗೆ ಪಾತ್ರರಾಗಬೇಕೆಂದು ಎಂದು ಕೋರಿದ್ದಾರೆ.
ಗೂಳಿ ಬಿಡುವ ಬದಲು ರೂ.5 ಸಾವಿರ ದೇಣಿಗೆ ನೀಡಿ:
ದಂಡಗುಂಡ ಬಸವಣ್ಣ ಜಾತ್ರಾ ಮಹೋತ್ಸವ ನಿಮಿತ್ತ ಭಕ್ತಾದಿಗಳು ಗೂಳಿ ಬಿಡುವ ಬದಲು ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಭಕ್ತಾದಿಗಳು ಬೇಡಿಕೊಂಡ ಗೂಳಿಗಳು ದೇವಸ್ಥಾನಕ್ಕೆ ಬೀಡುವುದರಿಂದ ಅವುಗಳು ಕೊನೆಗೆ ಕಸಾಯಿಖಾನೆಗೆ ಹೋಗುತ್ತವೆ. ಹೀಗಾಗಿ ಈ ಬಾರಿ ದೇವಸ್ಥಾನದ ಗೂಳಿಗಳನ್ನು ಬಿಡುವ ಮೂಲಕ 5 ಸಾವಿರ ದೇಣಿಗೆ ನೀಡಿ ರಸೀದಿ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

