Oplus_0

ಚಿತ್ತಾಪುರ ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ ಪೊಲೀಸ್ ಪಾಟೀಲ ಬದಲಾವಣೆಗೆ ಆಗ್ರಹಿಸಿ ಜಿಲ್ಲಾಧ್ಯಕ್ಷರಿಗೆ ಮನವಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ ಪೊಲೀಸ್ ಪಾಟೀಲ ಅವರನ್ನು ತಕ್ಷಣದಿಂದಲೇ ಬದಲಾಯಿಸಬೇಕು ಎಂದು ಆಗ್ರಹಿಸಿ ಕೆಡಿಪಿ ಮಾಜಿ ಸದಸ್ಯ ಭೀಮಣ್ಣ ದಂಡಗುಂಡ, ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ ನಾಗಣ್ಣ ಎಸ್ ವಾರದ್ ಅವರ ನೇತೃತ್ವದಲ್ಲಿ ಜೆಡಿಎಸ್ ಮುಖಂಡರಾದ ಅಂಬಾದಾಸ ಆರ್. ಚವ್ಹಾಣ, ಟೋಟೇಂದ್ರ ಅಲ್ಲೂರ (ಬಿ), ಬಸರೆಡ್ಡಿ ಅಳ್ಳೋಳ್ಳಿ, ಅಬ್ದುಲ್ ಗಫೂರ್ ಚಿತ್ತಾಪುರ, ಹುಸೇನ ಪಟೇಲ ಹುಳಂಡಗೇರಾ, ನಾಗಯಸ್ವಾಮಿ ಹೆಬ್ಬಾಳ, ಬಸವರಾಜ ಯಾಗಾಪುರ, ಬಸಪ್ಪ ಸಂಕನೂರ, ಚಂದ್ರಕಾಂತ ಹಲಕಟ್ಟಾ, ಸೋಮಲಿಂಗಪ್ಪ ಹುಳಂಡಗೇರಾ, ಮಲ್ಲು ಪೂಜಾರಿ ರಾಮತೀರ್ಥ, ಹಣಮಂತ ಬೆಳಗೇರಾ, ರಾಯಪ್ಪ ಕಟ್ಟಿಮನಿ ದಂಡೋತಿ ಅವರು ಸಹಿ ಮಾಡಿದ  ಮನವಿ ಪತ್ರವನ್ನು ಜಿಲ್ಲಾಧ್ಯಕ್ಷರಿಗೆ ಸಲ್ಲಿಸಿದ್ದಾರೆ.

ಪಕ್ಷದ ಕಾರ್ಯಕರ್ತರ ಸಲಹೆ, ಅಭಿಪ್ರಾಯ ಮತ್ತು ಸಹಕಾರವನ್ನು ಪಡೆಯದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಹಾಗೂ ಪಕ್ಷದ ನಿಯಮಗಳನ್ನು ಗಾಳಿಗೆ ತೂರಿ ಅಶಿಸ್ತಿನಂತೆ ವರ್ತಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಚಟುವಟಿಕೆಗಳು ಶೂನ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಈ ರೀತಿಯ ವರ್ತನೆಯಿಂದ ಪಕ್ಷದ ಒಳಗಿನ ಒಗ್ಗಟ್ಟು ಹಾಳಾಗುತ್ತಿದ್ದು ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಾಲೂಕು ಅಧ್ಯಕ್ಷರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರನ್ನು ಕೂಡಲೇ ಬದಲಾಯಿಸಬೇಕು. ಇಲ್ಲದಿದ್ದಲ್ಲಿ ನಾವು ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡಲು ಸಿದ್ಧರಾಗಿದ್ದೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಿಗೆ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!