ಚಿತ್ತಾಪುರ ಪಟ್ಟಣದಲ್ಲಿ ಕುಂಬಾರ ಸಮಾಜದ ನಾಮಫಲಕ ಅಳವಡಿಕೆಗೆ ಕುಂಬಾರರ ಮಹಾಸಭಾ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅಥವಾ ಸರ್ಕಾರಿ ಜಾಗದಲ್ಲಿ ಕುಂಬಾರ ಸಮಾಜದ ನಾಮಫಲಕ ಅಳವಡಿಸಲು ಅವಕಾಶ ಕಲ್ಪಿಸುವಂತೆ ಅಖಿಲ ಭಾರತ ಕುಂಬಾರರ ಮಹಾಸಭಾ ತಾಲೂಕು ಅಧ್ಯಕ್ಷ ವಿಶ್ವನಾಥ ಎಸ್ ಕುಂಬಾರ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಜಗದೇವ ಎಸ್ ಕುಂಬಾರ ಅವರ ನೇತೃತ್ವದಲ್ಲಿ ಸಮಾಜದ ಮುಖಂಡರು ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
ಚಿತ್ತಾಪುರ ಪಟ್ಟಣದಲ್ಲಿ ನಮ್ಮ ಕುಂಬಾರ ಸಮಾಜದ ಬಾಂಧವರು ಗಣನೀಯ ಸಂಖ್ಯೆಯಲ್ಲಿದ್ದು, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಸಕ್ರಿಯರಾಗಿದ್ದಾರೆ. ಸಮಾಜದ ಗುರುತಿಸುವಿಕೆ ಹಾಗೂ ಸಾರ್ವಜನಿಕ ಅನುಕೂಲಕ್ಕಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಒಂದು ಸೂಕ್ತವಾದ ಜಾಗವನ್ನು ಗುರುತಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಆದ್ದರಿಂದ, ಚಿತ್ತಾಪೂರ ಪಟ್ಟಣದ ಪುರಸಭೆ ವ್ಯಾಪ್ತಿಗೆ ಒಳಪಡುವ ಅಥವಾ ಯಾವುದೇ ಸೂಕ್ತವಾದ ಸರ್ಕಾರಿ ಜಾಗದಲ್ಲಿ “ಕುಂಬಾರ ಸಮಾಜ”ದ ಹೆಸರಿನ ನಾಮಫಲಕವನ್ನು (ಬೋರ್ಡ್) ಅಳವಡಿಸಿಕೊಳ್ಳಲು ಕಾನೂನುಬದ್ದವಾಗಿ ಅವಕಾಶ ಮಾಡಿಕೊಡಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ನಮ್ಮ ಸಮಾಜದ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮಹಾದೇವ ಕುಂಬಾರ, ಉಪಾಧ್ಯಕ್ಷರಾದ ಆನಂದ ಕುಂಬಾರ, ರಾಜಶೇಖರ್ ಕುಂಬಾರ ಮಲಕೂಡ, ಕಾರ್ಯದರ್ಶಿ ಕಾಶಿನಾಥ್ ಕುಂಬಾರ, ಸಹ ಕಾರ್ಯದರ್ಶಿ ಬಸವರಾಜ ಕುಂಬಾರ, ಸಮಾಜದ ಮುಖಂಡರಾದ ಶ್ರೀಮಂತ ಕುಂಬಾರ, ಮೋಗಲಪ್ಪ ಕುಂಬಾರ, ಸುಭಾಷ ಕುಂಬಾರ, ಸಿದ್ದು ಕುಂಬಾರ, ಮಹೇಶ್ ಕುಂಬಾರ, ಮಲ್ಲಿಕಾರ್ಜುನ ಬಿ ಕುಂಬಾರ, ಗುರುಪಾದಪ್ಪ ಕುಂಬಾರ, ಚಿತ್ರಶೇಖರ್ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ತರುಣ್ ಕುಂಬಾರ, ಹಣಮಂತ ಕುಂಬಾರ, ವಿಶ್ವಾರಾಧ್ಯ ಕುಂಬಾರ, ರಾಜಶೇಖರ್ ಎನ್ ಕುಂಬಾರ, ದಶರಥ ಕುಂಬಾರ, ರೇವಣಸಿದ್ದಪ್ಪ ಕುಂಬಾರ ಸೇರಿದಂತೆ ಇತರರು ಇದ್ದರು.

