ಚಿತ್ತಾಪುರ ತಾಲೂಕು ಆಡಳಿತ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರಜಾ ಸೌಧದ ಆವರಣದಲ್ಲಿ ಗುರುವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶಿವಾಜಿ ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು, ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಧೈರ್ಯ ಮತ್ತು ದೇಶಭಕ್ತಿ ಕುರಿತು ಮಾತನಾಡಿ ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ವಿಠ್ಠಲ್ ರಾವ್, ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಅನೀಲಕುಮಾರ ಸಿ. ಯೆಂದೆ, ಪ್ರಹ್ಲಾದ್ ವಿಶ್ವಕರ್ಮ, ಉಪಾಧ್ಯಕ್ಷ ಅನೂಪ್ ಉಬಾಳೆ, ರೋಹಿತ್ ಚವ್ಹಾಣ, ಕಾರ್ಯದರ್ಶಿ ಗುರುರಾಜ್ ಉಪ್ಪಾರ, ಸಹ ಕಾರ್ಯದರ್ಶಿ ಮನೋಜ್ ಹರಾಳೆ, ಸಂಯುಕ್ತ ಕಾರ್ಯದರ್ಶಿ ಅಂಬರೀಶ್ ಭೋವಿ, ಖಜಾಂಚಿ ನವೀನ್ ಪಿ. ಚವ್ಹಾಣ್ ಹಾಗೂ ಸದಸ್ಯರಾದ ರೋಹಿತ್ ಯೆಂದೆ, ಸಂತೋಷ್ ಗಾವಲ್ಕರ್, ಸಂಜೀವ್ ಸೂರ್ಯವಂಶಿ, ಆಕಾಶ ಸುಗಂಧಿ ಲಾಡ್, ಗಣೇಶ ಜೀತುರೆ, ಮಹೇಶ್ ಸುಗಂಧಿ, ನಿತೇಶ್ ಸುಗಂಧಿ ಸೇರಿದಂತೆ ಮರಾಠ ಸಮಾಜದ ಮುಖಂಡರು ಅನೇಕರು ಉಪಸ್ಥಿತರಿದ್ದರು.

