ಚಿತ್ತಾಪುರ ಸರ್ಕಾರಿ ಆದರ್ಶ ವಿದ್ಯಾಲಯ ಖಾಲಿ ಸೀಟುಗಳಿಗಾಗಿ ಅರ್ಜಿ ಆಹ್ವಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ನಾಗಾವಿ ಕ್ಯಾಂಪಸ್ ನಲ್ಲಿನ ಸರ್ಕಾರಿ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ) 2025-26 ನೇ ಸಾಲಿನಲ್ಲಿ ಖಾಲಿ ಇರುವ 7, 8, ಮತ್ತು 9 ನೇ ತರಗತಿಗೆ ಮೀಸಲಾತಿಯ ಪ್ರಕಾರ ಪ್ರವೇಶ ಪರಿಕ್ಷೇಯ ಮೂಲಕ ದಾಖಾಲಾಯಿತಿಯನ್ನು ಮಾಡಿಕೊಳ್ಳಲಾಗುವುದು ಎಂದು ಮುಖ್ಯಶಿಕ್ಷಕ ಸಂತೋಷಕುಮಾರ ತಿಳಿಸಿದ್ದಾರೆ.
2025-26 ನೇ ಸಾಲಿನಲ್ಲಿ 7, 8 ಮತ್ತು 9 ನೇ ತರಗತಿಯಲ್ಲಿ ಖಾಲಿಯಿರುವ ಸೀಟುಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದ್ದು ಜುಲೈ 1 ರಿಂದ 15 ರವರಗೆ ಆಸಕ್ತರು ಅರ್ಜಿಯನ್ನು ಶಾಲೆಯಲ್ಲಿ ಸಲ್ಲಿಸಲು ಕೊರಲಾಗಿದೆ. 7, 8, ಮತ್ತು 9 ನೇ ತರಗತಿಗಳಿಗೆ ಪ್ರವೇಶ ಪರಿಕ್ಷೆಯು ಜುಲೈ 18 ರಂದು ಬೆಳಗ್ಗೆ 10.30 ರಿಂದ 1 ಗಂಟೆಯವರೆಗೆ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ) ಶಾಲೆಯಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವವರು ವಿದ್ಯಾರ್ಥಿಯ ಭಾವಚಿತ್ರ, ವಿದ್ಯಾರ್ಥಿಯ ಆಧಾರ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣ ಪತ್ರಗಳನ್ನು ಅರ್ಜಿಯ ಜೊತೆ ಸಲ್ಲಿಸುವುದು. ವಿದ್ಯಾರ್ಥಿಗಳು ಚಿತ್ತಾಪುರ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ಚಿತ್ತಾಪುರ ತಾಲ್ಲೂಕಿನ (ತಹಸಿಲ್ದಾರರಿಂದ ನಿವಾಸಿ ದೃಢೀಕರಣ ಪತ್ರ ಸಲ್ಲಿಸಬೇಕು) ನಿವಾಸಿಯಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಂತೋಷಕುಮಾರ ಮುಖ್ಯ ಶಿಕ್ಷಕರು ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ) ಚಿತ್ತಾಪುರ ಇವರ ಮೊಬೈಲ್ ಸಂಖ್ಯೆಗೆ 9972775538 ಸಂಪರ್ಕಿಸಬಹುದು.

