Oplus_0

ಚಿತ್ತಾಪುರ ತಾಲೂಕು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಸಂಗನಗೌಡ ಮಲ್ಲೇದ್, ಪ್ರಧಾನ ಕಾರ್ಯದರ್ಶಿಯಾಗಿ ಅಂಬಣ್ಣ ಘಂಟಿ, ಉಪಾಧ್ಯಕ್ಷರಾಗಿ ರಾಜಕುಮಾರ್ ಜಮಾದಾರ್, ಸಂಘಟನೆ ಕಾರ್ಯದರ್ಶಿಯಾಗಿ ಅಮರನಾಥ್, ಖಜಾಂಚಿಯಾಗಿ ಸುರೇಶ ಓಂಕಾರ್ ಅವರು ತಾಲೂಕಿನ ಎಲ್ಲಾ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಮ್ಮುಖದಲ್ಲಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ.

ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ಸದಸ್ಯ ಸಾಬಣ್ಣ ಜಾಕಬೊ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಸೈಯದ್ ಎಸ್. ಇನಾಂದಾರ್,ಪ್ರಧಾನ ಕಾರ್ಯದರ್ಶಿ ಮಾಹದೇವ ಚಿತಲಿ, ಉಪಾಧ್ಯಕ್ಷ ಪ್ರಭಾಕರ್ ಶೀಲವಂತ್, ಶಾಹಾಬಾದ ತಾಲೂಕು ಅಧ್ಯಕ್ಷ ಆನಂದ ಕುಮಾರ್ ಜಾಧವ, ಪ್ರಧಾನ ಕಾರ್ಯದರ್ಶಿ ಭಾಗ್ಯವಂತ ರಾವೂರ ಉಪಸ್ಥಿತರಿದ್ದರು.

ಚಿತಾಪುರ ತಾಲೂಕಿನ ನಿಕಟ ಪೂರ್ವ ಅಧ್ಯಕ್ಷೆ ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮರಾನಾಥ್ ಸ್ವಾಗತಿಸಿದರು, ಸುರೇಶ ಓಂಕಾರ್ ನಿರೂಪಿಸಿದರು, ಸಿದ್ದಣ್ಣ ಹಡಪದ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!