ತಾಲೂಕು ಆಡಳಿತ ವತಿಯಿಂದ ಸೇವಾಲಾಲ್ ಜಯಂತಿ ಆಚರಣೆ | ಚಿತ್ತಾಪುರದ 51 ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರಾಚೀನ ಕಾಲದಿಂದಲೂ ಲಂಬಾಣಿ ಜನಾಂಗದವರು ಗುಂಪುಗಳಾಗಿ ತಾಂಡಾಗಳಲ್ಲಿ ವಾಸಿಸುತ್ತಿದ್ದರೂ ಅವರಿಗೆ ತಮ್ಮ ವಾಸಸ್ಥಳದ ಮೇಲೆ ಕಾನೂನಾತ್ಮಕ ಹಕ್ಕು ಇರಲಿಲ್ಲ. ಇದನ್ನು ಮನಗಂಡ ರಾಜ್ಯ ಸರ್ಕಾರವು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಹಕ್ಕು ಪತ್ರ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪ್ರಜಾ ಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ಪ್ರಗತಿ ಕುರಿತು ಮಾಹಿತಿ ನೀಡಿದ ತಹಸೀಲ್ದಾರರು, ಬಂಜಾರ ಜನಾಂಗಕ್ಕಾಗಿ ಸರ್ಕಾರವು ಕಂದಾಯ ಗ್ರಾಮ ಯೋಜನೆ ಘೋಷಿಸಿದೆ. ಈಗಾಗಲೇ ಚಿತ್ತಾಪುರ ತಾಲೂಕಿನಲ್ಲಿ 51 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗಿದ್ದು, ಸುಮಾರು 5,000 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಇನ್ನು ಕೇವಲ ಎರಡು ಕಂದಾಯ ಗ್ರಾಮಗಳು ಬಾಕಿ ಇದ್ದು, ಬಾಕಿ ಇರುವ 136 ಹಕ್ಕುಪತ್ರಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ತಿಳಿಸಿದರು.
ಬಸವಂತಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಹ ಶಿಕ್ಷಕ ವಸಂತ ಜಾಧವ್ ಅವರು ವಿಶೇಷ ಉಪನ್ಯಾಸ ನೀಡಿದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗೋಪಾಲ್ ರಾಠೋಡ ಮಾತನಾಡಿ, ಬಂಜಾರ ಸಮಾಜದವರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಕರೆ ನೀಡಿದರು. ಪುರಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಜಗದೀಶ್ ಚವ್ಹಾಣ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಅನಿಲ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ತಾಪಂ ಇಒ ಮೊಹಮ್ಮದ್ ಅಕ್ರಂ ಪಾಷಾ, ಪಿಎಸ್ ಐ ಮಂಜುನಾಥರೆಡ್ಡಿ, ಅಧಿಕಾರಿಗಳಾದ ಸಂಜುಕುಮಾರ್ ಮಾನಕರ್, ಪಂಡಿತ್ ಸಿಂಧೆ ಹಾಗೂ ಮುಖಂಡ ರಾಜಣ್ಣ ಕರದಾಳ ಉಪಸ್ಥಿತರಿದ್ದರು.
ಸಮುದಾಯದ ಪ್ರಮುಖರಾದ ಜಯಂತ್ಯುತ್ಸವ ಸಮಿತಿ ಗೌರವ ಅಧ್ಯಕ್ಷ ಚಂದು ಜಾಧವ್, ದೇವದಾಸ್ ಚವ್ಹಾಣ್, ಶ್ರೀಕಾಂತ ರಾಠೋಡ, ಹರೀಷ್ ರಾಠೋಡ, ಆರ್ ಟಿಒ ಮನೋಜ ರಾಠೋಡ, ಸಂತೋಷ ರಾಠೋಡ, ಕಿಶನ್ ನಾಯಕ್, ಭೀಮಸಿಂಗ್ ಚವ್ಹಾಣ್, ಶಂಕರ್ ನಾಯಕ್, ರವೀಂದ್ರ ನಾಯಕ್, ಕಿರಣ್ ಭೀಮಾ ನಾಯಕ್, ತಿರುಪತಿ ತೋಪು ನಾಯಕ್, ಕುಮಾರ ಬಾಬು ನಾಯಕ್, ತುಕಾರಾಂ ನಾಯಕ್, ಪೋಮು ನಾಯಕ್, ಪೋಮು ಚವ್ಹಾಣ್, ಲಕ್ಷ್ಮಣ್ ನಾಯಕ್, ಖೀರು ನಾಯಕ್, ಹನುಮಂತ್ ನಾಯಕ್, ವಿಜಯಕುಮಾರ ಚವ್ಹಾಣ್, ವಿಜಯಕುಮಾರ ರಾಠೋಡ್, ಬಾಬು ನಾಯಕ್, ನೀಲಕಂಠ ಪವಾರ್, ಸುನೀಲ್ ರಾಠೋಡ್, ಸುಭಾಷ ಜಾಧವ್, ರವಿ ರಾಠೋಡ್, ಅನಿಲ್ ರಾಠೋಡ ಹಾಗೂ ಆಕಾಶ ಚವ್ಹಾಣ ಸೇರಿದಂತೆ ನೂರಾರು ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಶಂಕರ್ ನಾಯಕ್ ಪ್ರಾರ್ಥನಾ ಗೀತೆ ಹಾಡಿದರು. ಡಾ. ಶಂಕರ್ ಕಣ್ಣಿ ಕಾರ್ಯಕ್ರಮ ನಿರೂಪಿಸಿದರು. ಸುನೀಲಕುಮಾರ ಯನಗುಂಟಿಕರ್ ವಂದಿಸಿದರು.
ಜಯಂತಿಯ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕೃತ ರಥದಲ್ಲಿ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.

