Oplus_0

ಕೊಂಚುರಿನಲ್ಲಿ ವಿಶ್ವ ಮಣ್ಣು ದಿನಾಚರಣೆ, ಮಣ್ಣಿನ ಸಂರಕ್ಷಣೆ ಮಾಡುವುದು ಅತ್ಯಗತ್ಯ: ಸಮದ್ ಪಟೇಲ್

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ನಮ್ಮ ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಮಾಡವುದು ಅತ್ಯಗತ್ಯ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಹೇಳಿದರು.

ತಾಲೂಕಿನ ಕೊಂಚುರ್ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವನ ಸ್ವಾರ್ಥ ಚಟುವಟಿಕೆಗಳಿಗೆ ಅತಿಯಾದ ಕೀಟನಾಶಕ ಬಳಕೆ ಸೇರಿದಂತೆ ಇಂತಹ ನೂರಾರು ಕಾರಣಗಳಿಂದಾಗಿ ಮಣ್ಣು ಕಲುಷಿತವಾಗುತ್ತದೆ ಆದರೆ ಮಣ್ಣು ಒಂದು ನವೀಕರಿಸಬಹುದಾದ ನೈಸರ್ಗಿಕ ಸಂಪನ್ಮೂಲ ವಾಗಿದ್ದು ಇದು ಮರ-ಗಿಡಗಳ ಹಾಗೂ ಬೆಳೆಗಳಿಗೆ ಅಗತ್ಯವಾಗಿ ಪೋಷಕಾಂಶ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕೃಷಿ ವಿಜ್ಞಾನಿ ಕೇಂದ್ರದ ಡಾ.ಮಲ್ಲಪ್ಪ ಮಾತನಾಡಿ, ದೇಶದ ಏಳಿಗೆ ಆಗಬೇಕಾದರೆ ಮಣ್ಣಿನ ಸಂರಕ್ಷಣೆ ತುಂಬಾ ಮುಖ್ಯ ಮಣ್ಣು ಉಳಿದರೆ ದೇಶ ಉಳಿಯುವುದು, ವಿಶ್ವ ಮಣ್ಣು ದಿನಾಚರಣೆ 2024ರ ಘೋಷ ವಾಕ್ಯವಾದ ‘ಮಣ್ಣಿನ ಆರೈಕೆ ಮಾಪನ, ಮೇಲ್ವಿಚಾರಣೆ, ನಿರ್ವಹಣೆ ‘ಈ ಒಂದು ಘೋಷ ವಾಕ್ಯವಾದ ವಿವರಣೆಯನ್ನು ಮನಗಟ್ಟು ಮಾಡಿಕೊಟ್ಟರು.

ಮಣ್ಣು ಭೂಮಿ ಮೇಲ್ಪದರವಾಗಿದು ಸಾವಯುವ ಮತ್ತು ಅಜೈವಿಕ ವಸ್ತುಗಳು ಒಳಗೊಂಡಿದ್ದು ಮಣ್ಣಿಲ್ಲದೆ ಜೀವ ಸಂಕುಲವನ್ನು ಊಹಿಸಲು ಅಸಾಧ್ಯ ಹೀಗಾಗಿ ಮಣ್ಣು ಮತ್ತು ನೀರು ಆಹಾರ ಉತ್ಪಾದನೆ ಪರಿಸರ ವ್ಯವಸ್ಥೆಗೆ ಅತ್ಯಗತೆ ಎಂದು ಹೇಳಿದರು.

ಅತಿಥಿಗಳಾಗಿ ಉಪ ಕೃಷಿ ನಿರ್ದೇಶಕಿ ಅನುಸೂಯ ಅವರು ಮಣ್ಣಿನ ಆರೋಗ್ಯ ಚೀಟಿ ಮಹತ್ವ ಮತ್ತು ಉಪಯೋಗದ ಕುರಿತು ಸವಿಸ್ತರವಾಗಿ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ್ ಮಾನಕಾರೆ ಅವರು  ಮಣ್ಣಿನಲ್ಲಿರುವ ಪೋಷಕಾಂಶಗಳು ಮತ್ತು ಅದರ ಕೊರತೆ ಆಧಾರದ ಮೇಲೆ ಮಣ್ಣಿನ ಫಲವತ್ತತೆ ನಿರ್ವಹಣೆ ಬಗ್ಗೆ ಹೇಳಿದರು.ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್ ಮಾಜಿದ್ ಅವರು ವಿಷಯ ತಜ್ಞ ಮಣ್ಣು ಮಾದರಿ ತೆಗೆಯುವ ವಿಧಾನ ಮತ್ತು ಅದರ ಮಹತ್ವದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕೊಂಚುರ್ ಗ್ರಾಮದ ರೈತರಿಗೆ ಮಣ್ಣಿನ ಆರೋಗ್ಯ ಚೀಟಿಯನ್ನು ವಿತರಿಸಿದರು. ಶಾಲಾ ಮುಖ್ಯಸ್ಥ ಸುನೀಲಕುಮಾರ್ ಅವರು ಮಕ್ಕಳಿಗೆ ಮಣ್ಣಿನ ಮಹತ್ವ ಮತ್ತು ಅದರ ಕಾಳಜಿ ಬಗ್ಗೆ ಹೇಳಿ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಶಾಂತಲಿಂಗ, ನಿಖಿಲ್ ಕಟ್ಟೋಳ್ಳಿ, ಸಚಿನ್ ಕುಮಾರ್, ಜಗದೀಶ್ ಸೇರಿದಂತೆ ಶಾಲಾ ಸಿಬ್ಬಂದಿಗಳು ಮಕ್ಕಳು ಉಪಸ್ಥಿತರಿದ್ದರು. ಕಂಚಮಸೇನಿ ನಿರೂಪಿಸಿದರು ನಂತರ ರತ್ನಾಸಾಗರ ಅವರ ವಿಶ್ವ ಮಣ್ಣು ದಿನಾಚರಣೆ ಪ್ರತಿಜ್ಞೆಯನು ಭೋದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!