ಚಿತ್ತಾಪುರ ಪಟ್ಟಣದ ಮದ್ಯದ ಅಂಗಡಿಗಳ ಮೇಲೆ ತಹಸೀಲ್ದಾರ್ ನೇತೃತ್ವದ ತಂಡ ದಾಳಿ, ಪರಿಶೀಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ನೇತೃತ್ವದ ತಂಡದ ಅಬಕಾರಿ ಸಿಪಿಐ ಸುನೀತಾ ಸೀತಾಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರು ಮಂಗಳವಾರ ಪಟ್ಟಣದ ವೈನ್ ಶಾಪ್ ಗಳ ಮೇಲೆ ದಾಳಿ ನಡೆಸಿ ನಕಲಿ ಮದ್ಯದ ತಪಾಸಣೆ ಮಾಡಿ ಎಲ್ಲಾ ತರಹದ ಮದ್ಯದ ಸ್ಯಾಂಪಲನ್ನು ತಪಾಸಣೆಗೆ ತೆಗೆದುಕೊಂಡು ಹೋಗಲಾಯಿತು.
ತೆಲಂಗಾಣ ರಾಜ್ಯದಲ್ಲಿ ನಕಲಿ ಸಾರಾಯಿ ಪತ್ತೆಯಾಗಿ ಸಾರ್ವಜನಿಕ ತೊಂದರೆಯಾಗಿದ್ದು, ಆದ್ದರಿಂದ ಜಿಲ್ಲೆಯಲ್ಲಿ ಕೂಡ ತಪಾಸಣೆ ಮಾಡಲು ತಂಡ ರಚನೆ ಮಾಡಿ ಕಲಬುರಗಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಪಾಸಣೆ ಕಾರ್ಯ ಮಾಡಲಾಯಿತು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಪ್ರತಿಯೊಂದು ವೈನ ಶಾಪ್ ಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿ, ಎಲ್ಲಾ ತರಹದ ಸರಾಯಿ ಶಾಂಪಲ್ ಅನ್ನು ಜಪ್ತಿ ಮಾಡಿ ತಪಾಸಣೆ ತೆಗೆದುಕೊಂಡು ಹೋಗಲಾಯಿತು ಎಂದು ಅಬಕಾರಿ ಸಿಪಿಐ ವನೀತಾ ತೀತಾಳೆ ಮಾಹಿತಿ ನೀಡಿದ್ದಾರೆ.
ನಕಲಿ ಮಧ್ಯ ಮಾರಾಟ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಆದೇಶದಂತೆ ತಹಸೀಲ್ದಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಸದರಿ ತಂಡದಲ್ಲಿ ತಹಸೀಲ್ದಾರ್, ತಾಲೂಕು ಪಂಚಾಯತ್ ಇಓ, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಅಬಕಾರಿ ಸಿಪಿಐ ಸುನೀತಾ ಸೀತಾಳೆ, ಪಿಎಸ್ಐ ವಿಜಯಲಕ್ಷ್ಮಿ ಲಸ್ಕರ್ ಮೂಲಕ ಬಾರ್, ವೈನ್ ಶಾಪ್ ಗಳನ್ನು ಪರಿಶೀಲನೆ ಮಾಡಲಾಯಿತು.

