Oplus_0

ಶಹಾಬಾದ ಮನೆ ಮನೆಯಲ್ಲಿ ವಚನೋತ್ಸವಕ್ಕೆ ಸಾವಿರ ವಾರದ ಸಂಭ್ರಮ | ವಚನ ಸಾಹಿತ್ಯ ಪ್ರಸಾರ ಮಾಡುತ್ತಿರುವ ಕಾರ್ಯ ಶ್ಲಾಘನೀಯ 

ನಾಗಾವಿ ಎಕ್ಸಪ್ರೆಸ್

ಶಹಾಬಾದ: ವಚನೋತ್ಸವ ಸಮಿತಿ ಹಳೆ ಶಹಾಬಾದ ಪ್ರತಿ ರವಿವಾರ ಮನೆ-ಮನೆಯಲ್ಲಿ ವಚನೋತ್ಸವ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು, ಇದೇ ಸೆ.14 ರಂದು 1000 ವಾರವನ್ನು ಪೂರೈಯಿಸಿರುವ ಪ್ರಯುಕ್ತ  ಬಸಣ್ಣಾ ಹಡಪದ ರವರ ಮನೆಯಲ್ಲಿ ಸಾವಿರ ವಾರದ ವಚನೋತ್ಸವ ಸಂಭ್ರಮದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಶಹಾಬಾದ ತಾಲೂಕಿನ ಹಡಪದ ಅಪ್ಪಣ್ಣ ಪಿಠದ ಶ್ರೀ ರಾಜಶಿವಯೋಗಿಗಳು ವಹಿಸಿಕೊಂಡರು. ಮೊದಲಿಗೆ ಬಸವ ಪ್ರಾರ್ಥನೆ ಇದನ್ನು ತುಪ್ಪದ ಪರಿವಾರದವರು ನಡೆಸಿಕೊಟ್ಟರು. ನಂತರದಲ್ಲಿ ಓಂಕಾರ ನಾದ ಬಸವರಾಜ ಶಹಾಪೂರ ರವರು ನಡೆಸಿಕೊಟ್ಟರು, ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಶರಣಗೌಡ ಪಾಟೀಲ ರವರು ವಚನೋತ್ಸವ ಸಮಿತಿ ನಡೆದು ಬಂದ ಹಾದಿಯನ್ನು ಅದರ ಸಾಧನೆ ಮತ್ತು ಉದ್ದೇಶಗಳ ಕುರಿತು ಮಾತನಾಡಿದರು.

ಚಿತ್ತಾಪುರ ತಾಲೂಕು ಹಡಪದ ಸಮಾಜದ ಮಾಜಿ ಅಧ್ಯಕ್ಷ ಭೀಮರಾವ ಹಡಪದವರು ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಯುವಕರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದ್ದು, ಮೊಬೈಲ್ ಸಂಸ್ಕೃತಿಗೆ ಅಂಟಿಕೊಂಡಿದ್ದಾರೆ ಆದರೂ ಕೂಡ ಪ್ರಸ್ತುತ ದಿನಗಳಲ್ಲಿ ವಚನ ಸಾಹಿತ್ಯವನ್ನು ಯುವಕರು ಓದಬೇಕಾಗಿದೆ ಬೇಕಾದರೆ ಮೋಬೈಲನಲ್ಲಿಯೇ ವಚನಗಳನ್ನು ಓದಿ ವಚನದಲ್ಲಿ ಅಡಗಿರುವಂತಹ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಶಹಾಬಾದಿನಲ್ಲಿ ವಚನೋತ್ಸವ ಸಮಿತಿ ಶರಣರ ವಚನಗಳನ್ನು ಮನೆ-ಮನೆಗಳಲ್ಲಿ ವಚನ ಸಾಹಿತ್ಯದ ಜ್ಞಾನವನ್ನು ಪ್ರಸಾರ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ಸಾಹಿತಿ ಮರಲಿಂಗ ಪೂಜಾರಿ ಮಾತನಾಡಿ, 12 ನೇ ಶತಮಾನದ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ವಿಶ್ವ ಸಾಹಿತ್ಯಕ್ಕೆ ಕನ್ನಡ ಕೊಡುಗೆಯಾಗಿ ವಚನ ಸಾಹಿತ್ಯ ನೀಡಿದರು ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಮುಕುಟಪ್ರಾಯವಾಗಿದೆ ಹಾಗೂ ಕನ್ನಡ ಉಳಿವಿಗೆ ವಚನ ಸಾಹಿತ್ಯವೇ ಮೂಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಚನೋತ್ಸವ ಸಮಿತಿಯ ಸಂಚಾಲಕ ಗಿರಿಮಲ್ಲಪ್ಪ ವಳಸಂಗ ರವರು 1000 ವಾರದ ವಚನವಾಗಿರುವ ಗಂಡ ಭೇರುಂಡನೆಂಬ ಪಕ್ಷಿಗೆ ತಲೆ ಎರಡು, ದೇಹವೋಂದೇ ಎಂಬ ಚನ್ನಬಸವಣ್ಣನವರ ವಚನದ ವಿಶ್ಲೇಷಣೆ ಮಾಡಿದರು. ನಂತರ ಮಕ್ಕಳಿಂದ, ಯುವಕರಿಂದ ಶರಣ ಶರಣೆಯರಿಂದ ವಚನ ಪಠಣ ಮತ್ತು ವಚನಗಾಯನ ನಡೆಯಿತು. ನಂತರ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ ರಾಜಶಿವಯೋಗಿ ಸ್ವಾಮಿಗಳಿಂದ ಆರ್ಶಿವಚನ ನಡೆಯಿತು. ಬಸವ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.

ಕಾರ್ಯಕ್ರದಲ್ಲಿ ಶರಣರಾದ ದೇವಿಂದ್ರಪ್ಪ ರಾಮನ್, ಸುಭಾಷ್ ಡೆಂಗಿ, ಬಸವರಾಜ ಕುಂಬಾರ, ಸುಭಾಷ್ ತುಪ್ಪದ, ಶಿವರಾಜ ಹಡಪದ, ಮಹಾನಂದಿ ಪಾರಾ, ಬಸವರಾಜ ಪಾಟೀಲ್, ಶರಣಪ್ಪ ಕೊಡದೂರ, ಶರಣಪ್ಪಾ ಸೂರಾ, ರಮೇಶ ಜೋಗನಕರ್, ಅಣವೀರ ದ್ಯಾಮ, ಭಿಮಾಶಂಕರ ಹಡಪದ, ರಾಜಶೇಖರ ಹಡಪದ, ಸಿದ್ದು ಬೆಳಮಗಿ, ಸಂತೋಷ ಪಾಟೀಲ, ಪ್ರಕಾಶ ವಳಸಂಗ, ಮಹಾಂತಗೌಡ, ಅಣ್ಣರಾಯ ಹುಗಿ, ಸಂಜು ಪಾರಾ, ಸುಧೀರ ಪಾಟೀಲ್, ದೂಳಪ್ಪಾ ಹಡಪದ, ಅರುಣ ಜಾಯಿ, ಶರಣೆಯರಾದ ವಿಜಯಲಕ್ಷ್ಮೀ ರಾಮನ್, ಶ್ರೀಮತಿ ಧಾನೇಶ್ವರಿ ವಳಸಂಗ, ಗುರುಬಾಯಿ ತುಪ್ಪದ, ಲಕ್ಷ್ಮೀ ತುಪ್ಪದ, ಪದ್ಮಾವತಿ ತುಪ್ಪದ, ಭವಾನಿ ಮಾಡಿಯಾಳ, ಶಾರದಾ ಪಾಟೀಲ್, ಜಯಶ್ರೀ ಪಾಟೀಲ್, ಸರಸ್ವತಿ ತುಪ್ಪದ, ವಿಜಯಲಕ್ಷ್ಮೀ ವೀರಶೇಟ್ಟಿ, ವೀರಮ್ಮಾ ದ್ಯಾಮ, ಕವಿತಾ ಜಂಬಿಗಿ, ಈರಮ್ಮಾ ಸೂರಾ ಸೇರಿದಂತೆ ಇತರರು ಇದ್ದರು.

ನಾಗೇಶ ತುಪ್ಪದ್ ಪ್ರಾರ್ಥಿಸಿದರು, ವಿಶ್ವನಾಥ ಹಡಪದ ಸ್ವಾಗತಿಸಿದರು, ಕುಪೇಂದ್ರ ತುಪ್ಪದ್ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!