Oplus_0

ಚಿತ್ತಾಪುರದಲ್ಲಿ ಅಧಿಕ ಮಾಸದ ವಿಶೇಷ ಪೂಜಾ ಕಾರ್ಯಕ್ರಮ, 501 ದಂಪತಿಗಳಿಂದ ಸಹಸ್ರ ಲಿಂಗಾರ್ಚನೆ, ಕಾಶಿ ಗಂಗಾ ಆರತಿ | ಯಾವುದು ಇದ್ದಂಗೆ ಇರುವುದಿಲ್ಲ: ತಾಳಿಕೋಟಿ ಶ್ರೀ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸಮಾಜದಲ್ಲಿ ಯಾವುದು ಇದ್ದಂಗೆ ಇರುವುದಿಲ್ಲ ಬದಲಾವಣೆ ಆಗುತ್ತಿರುತ್ತದೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು ಹೇಳಿದರು.

ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವೇದಮೂರ್ತಿ ಕರಬಸಯ್ಯ ಶಾಸ್ತ್ರೀ ಅವರು ಭಾನುವಾರ ಆಯೋಜಿಸಿದ್ದ ಅಧಿಕ ಮಾಸದ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ, 501 ದಂಪತಿಗಳಿಂದ ಸಹಸ್ರ ಲಿಂಗಾರ್ಚನೆ, ಗಿರಿಜಾ ಕಲ್ಯಾಣ, ಕಾಶಿ ಗಂಗಾ ಆರತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜ ಅಥವಾ ಮನುಷ್ಯ ಸದಾ ಬದಲಾವಣೆ ಆಗುತ್ತಿರುತ್ತಾನೆ, ಹೀಗಾಗಿ ಒಳ್ಳೆಯದು ನೆನಪಿಟ್ಟುಕೊಂಡು ಕೆಟ್ಟದನ್ನು ಮರೆತು ಬಿಡಬೇಕು ಅಂದಾಗ ಮಾತ್ರ ಮನಸ್ಸು ಹಗುರವಾಗಿ ಶಾಂತಿ ಲಭಿಸಲಿದೆ ಎಂದು ಹೇಳಿದರು.

ಕೊಟ್ಟಿದ್ದನ್ನು ಮರೆಯಬಾರದು ಆದರೆ ಕೆಟ್ಟದ್ದನ್ನು ಮರೆತು ಬಿಡಬೇಕು, ಇರುವಷ್ಟು ದಿನ ಸುಖ ಸಂತೋಷದಿಂದ ಇರಬೇಕು. ಜೀವನದಲ್ಲಿ ಸಾವು ಮತ್ತು ದುಃಖ ಬರೋದೇ, ಹೀಗಾಗಿ ಗಟ್ಟಿಯಾಗಿ ನಿಲ್ಲಬೇಕು. ಸಾವು ಕಟ್ಟಿಟ್ಟ ಬುತ್ತಿ ನೆನಪು ಇಟ್ಟುಕೊಳ್ಳಬೇಕು ಮರೆಯಬಾರದು ಎಂದು ನುಡಿದರು.

ದಾಂಪತ್ಯದ ಜೀವನದಲ್ಲಿ ಕಷ್ಟಗಳು, ಸಮಸ್ಯೆಗಳು ಬರುವುದು ಸಹಜ ಹೀಗಾಗಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.

ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಜಗತ್ತಿನ ಕಣ್ಣು ತೆರೆಸಿದ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಚಿಕ್ಕ ವಯಸ್ಸಿನಲ್ಲಿ ತಮ್ಮ ವಿಚಾರಗಳ ಮೂಲಕ ಕನ್ನಡ ನಾಡಿಗೆ ಚಿರಪರಿಚಿತರಾಗಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ಇವರ ಖ್ಯಾತಿ ಎಲ್ಲೆಡೆ ಪಸರಿಸಿದೆ ಎಂದು ಬಣ್ಣಿಸಿದರು.

ಚಿತ್ತಾಪುರ ಪಟ್ಟಣದಲ್ಲಿ ಅಲ್ಪ ಸಮಯದಲ್ಲಿ ಸಾವಿರಾರು ದಂಪತಿಗಳನ್ನು ಹಾಗೂ ಜನರನ್ನು ಒಂದೆಡೆ ಸೇರಿಸಿ ಅಭೂತಪೂರ್ವ ಕಾಶಿ ಗಂಗಾ ಆರತಿ ಕಾರ್ಯಕ್ರಮ ಆಯೋಜಿಸಿ ಯಶಸ್ವಿ ಕಂಡ ವೇದಮೂರ್ತಿ ಕರಬಸಯ್ಯ ಶಾಸ್ತ್ರೀ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನಿತಾ ಡಾ. ಮಹಾಂತಗೌಡ ಪಾಟೀಲ ಭಾಗೋಡಿ, ಸುವರ್ಣ ಅನಿಲಕುಮಾರ ಸಾಹು ವಡ್ಡಡಗಿ ಚಿತ್ತಾಪುರ, ಪ್ರಿಯಾಂಕಾ ರಮೇಶ ಹಡಪದ ಚಿತ್ತಾಪುರ ಅವರಿಂದ ತುಲಾಭಾರ ಸೇವೆ ನಡೆಯಿತು. ಶ್ರೀ ಋಗ್ವದ ವೈಧಿಕ ಪುರೋಹಿತರ ಟ್ರಸ್ಟ್ ಅಧ್ಯಕ್ಷ ಶಿವಕುಮಾರ ಎಸ್. ಹಿರೇಮಠ ಸೇಡಂ, ವೃಷಬೇಂದ್ರ ಶಾಸ್ತ್ರೀಗಳು ಕಾಚವಾರ, ತೋಟಯ್ಯ ಶಾಸ್ತ್ರೀಗಳು ಪತ್ರಿ ಕರದಾಳ, ವಿನೋದ್ ಶಾಸ್ತ್ರಿ ಮಠಪತಿ ರುದ್ರಾರಂ ಅವರಿಂದ ಪೂಜಾ ಕಾರ್ಯ ನಡೆಯಿತು.

ಮೀನಾಕ್ಷಿ ರಾಜಶೇಖರ ಯದಲಾಪೂರ ಚಿತ್ತಾಪುರ ಅವರಿಂದ ಗಂಗಾ ಆರತಿ ಸೇವೆ ಹಾಗೂ ಸವಿತಾ ಜಗನ್ನಾಥ ರಾಠೋಡ ಕಲಬುರಗಿ, ಬಸವರಾಜ ಪೋಲಿಸ ಪಾಟೀಲ (ದಳಪತಿ) ಭಾಗೋಡಿ ಅವರಿಂದ ಬಾಗಿನ ಸೇವೆ ಮತ್ತು ಜಯಲಕ್ಷ್ಮೀ ಶಿವರೆಡ್ಡಿಗೌಡ ಪಾಲಪ ಚಿತ್ತಾಪುರ, ಸೈಯದ್ ಅಮೀನ್ ಉದ್ದೀನ್ ಚಿತ್ತಾಪುರ ಅವರಿಂದ ದಾಸೋಹ ಸೇವೆ ನಡೆಯಿತು.

ಜನರ ಗಮನ ಸೆಳೆದ ಕಾಶಿ ಗಂಗಾ ಆರತಿ: 

ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ರಾತ್ರಿ ಹೊನ್ನಕಿರಣಗಿ ಶ್ರೀ ಮಠದ ಶಾಲಾ ವಿದ್ಯಾರ್ಥಿನಿಯರಿಂದ ಅತ್ಯಾಕರ್ಷಕವಾಗಿ ಕಾಶಿ ಗಂಗಾ ಆರತಿ ನಡೆಯಿತು. ನೆರೆದ ಜನರ ಗಮನ ಸೆಳೆಯಿತು. ವಿವಿಧ ಪಕ್ಷಗಳ, ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಇದಕ್ಕೂ ಮುನ್ನ ರಾತ್ರಿ ಶಿವಶಂಕರ ಶಿವಾಚಾರ್ಯರು, ಸೋಮಶೇಖರ ಶಿವಾಚಾರ್ಯರು ಡಾ.ಚನ್ನಬಸವ ಶರಣರು ಇವರ ತುಲಾಭಾರ ನಡೆಯಿತು ಹಾಗೂ 251 ಮುತ್ತೈದೆಯರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಹೊನ್ನಕಿರಣಗಿ ಶ್ರೀ ಚಂದ್ರಗುಂಡ ಶಿವಾಚಾರ್ಯರು, ಪಾಳಾ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಅಳ್ಳೋಳ್ಳಿ ಶ್ರೀ ಸಂಗಮನಾಥ ಮಹಾಸ್ವಾಮಿಗಳು, ದಂಡೋತಿ ಶ್ರೀ ಬಾಲಯೋಗಿನಿ ಜಯಶ್ರೀ ಮಾತಾಜಿ, ದಿಗ್ಗಾಂವ ಕಂಚಗಾರಹಳ್ಳದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು, ಮಾಲಗತ್ತಿ ಶ್ರೀ ಡಾ. ಚನ್ನಬಸವ ಶರಣರು ದಿವ್ಯ ಸಾನಿಧ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಸಿ. ಭಂಕಲಗಿ, ದೇವಸ್ಥಾನದ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಎಮ್ ದೇಶಮುಖ, ಶಿವಶರಣಯ್ಯ ಸ್ವಾಮಿ ಪುರದಯ್ಯನ ಮಠ, ಕರಣಯ್ಯ ಶಾಸ್ತ್ರಿಗಳು ಸ್ಥಾವರಮಠ, ಸೋಮನಾಥ ಶಾಸ್ತ್ರಿಗಳು ಮಾದನ ಹಿಪ್ಪರಗಾ, ಬಸವರಾಜ್ ಪಿ. ಬೊಮ್ಮನಳ್ಳಿ, ನಾಗರಾಜ ರೇಷ್ಮಿ, ರಮೇಶ್ ಬೊಮ್ಮನಳ್ಳಿ, ದೇವಿಂದ್ರಪ್ಪ ಸಜ್ಜನಶೆಟ್ಟಿ, ದಶರಥ ದೊಡ್ಡಮನಿ, ಸುರೇಶ ಅಲ್ಲೂರ ಚಿತ್ತಾಪುರ, ರಾಜಶೇಖರ ಸಿಂಪಿ ಚಿತ್ತಾಪುರ, ಮಾರುತಿರಾವ್ ಪೂಜಾರಿ ಚಿತ್ತಾಪುರ, ಬಸವರಾಜ ಬಿ. ಪಾಟೀಲ ಮಾಡಗಿ, ಅಂಬರೀಷ್ ಸುಲೇಗಾಂವ ಸೇರಿದಂತೆ ಇತರರು ಇದ್ದರು. ವೀರೇಶ ಶಾಸ್ತ್ರೀಗಳು ಮಲಕೂಡ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!