Oplus_0

ಚಿತ್ತಾಪುರ ಮುಂಗಾರು ಹಂಗಾಮಿಗೆ ಒಟ್ಟು 75390 ಹೆಕ್ಟರ್ ಬಿತ್ತನೆ ಗುರಿ: ಮಾನಕರೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: 2026-27 ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಚಿತ್ತಾಪುರ ವತಿಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವದಿಲ್ಲಾ, ಪ್ರಸ್ತುತ ಸಾಲಿನಲ್ಲಿ ಚಿತ್ತಾಪುರ ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 75390 ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರೆ ತಿಳಿಸಿದ್ದಾರೆ.

ಮುಖ್ಯ ಬೆಳೆವಾರು ಬಿತ್ತನೆ ಗುರಿ: 

ತೊಗರಿ ಮುಂಗಾರು ಬಿತ್ತನೆ ಕ್ಷೇತ್ರ ಗುರಿ 45395, ಹೆಸರು 14805, ಉದ್ದು 3185, ಹತ್ತಿ 9700, ಇತರೆ ಬೆಳೆಗಳು 2845 ಸೇರಿದಂತೆ ಒಟ್ಟು 75390 ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿದ್ದು,

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ಲಭ್ಯ: 

ಚಿತ್ತಾಪುರ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳಾದ ತೊಗರಿ, ಹೆಸರು, ಉದ್ದು ಹಾಗೂ ಸೊಯಾಬಿನ ಜಿತ್ತನೆ ಬೀಜಗಳು ಲಭ್ಯವಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಈ ಕೆಳಗಿನ ಅಂಶಗಳನ್ನು ಅನುಸರಿಸಲು ಮನವಿ: 

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರೈತರು ಡಿ.ಎ.ಪಿ ಹಾಗೂ ಯೂರಿಯಾಗಿಂತ ಕಾಂಪ್ಲೆಕ್ಷ ಗೊಬ್ಬರಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕು ಕಾಂಪ್ಲೆಕ್ಷ ಗೊಬ್ಬರ ಭೂಮಿಯ ಪಲವತ್ತತ್ತೆ ಸಮೊತೋಲನ ಕಾಪಾಡುತ್ತದೆ, ಪ್ರಸ್ತುತ ಸಾಲಿನಲ್ಲಿ ರೈತರು ರಸಗೊಬ್ಬರ ಖರೀದಿಸಲು ಎಫ್ಐಡಿ ಖಡ್ಡಾಯವಾಗಿರುತ್ತದೆ, ಆದ್ದರಿಂದ ಎಲ್ಲಾ ರೈತರು ಎಫ್ಐಡಿ ಮಾಡಿಸಿಕೊಳ್ಳಬೇಕು, ಎಲ್ಲಾ ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗು ಕೀಟನಾಶಕಗಳನ್ನು ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕು, ರೈತರು ಬಿತ್ತನೆಗೆ ಮುಂಚಿತವಾಗಿ ಕಡ್ಡಾಯವಾಗಿ ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು, ರೈತರು ಕಡ್ಡಾಯವಾಗಿ ಪರವಾನಿಗೆ ಹೊಂದಿದ ಅಧಿಕೃತ ಮಾರಾಟಗಾರರಿಂದ ಮಾತ್ರ ಕೃಷಿ ಪರಿಕರಗಳನ್ನು ಖರೀದಿಸಬೇಕು ಎಂದು ಮನವಿ ಮಾಡಿದ್ದಾರೆ.

“ರೈತ ಬಾಂಧವರು ತಾವು ರಸಗೊಬ್ಬರ ಖರೀದಿ ಮಾಡುವಾಗ ಯಾವುದೇ ಅಂಗಡಿಯವರು ನಿಗದಿತ ದರದಲ್ಲಿ ಹೆಚ್ಚಿನ ಹಣ ಕೇಳಿದಾಗ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ದೂರು ನೀಡಿ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು”.-ಸಂಜೀವಕುಮಾರ ಮಾನಕರೆ ಸಹಾಯಕ ಕೃಷಿ ನಿರ್ದೇಶಕರು ಚಿತ್ತಾಪುರ.

Spread the love

Leave a Reply

Your email address will not be published. Required fields are marked *

You missed

error: Content is protected !!