Oplus_0

ಚಿತ್ತಾಪುರದಲ್ಲಿ ಡಿ.28 ರಿಂದ ಶ್ರೀ ಗುಡ್ಡಾಪೂರ ಧಾನಮ್ಮ ದೇವಿಯ ಪೂರಾಣ ಪ್ರಾರಂಭ, ಜ.3 ರಂದು ಬನಶಂಕರಿ ದೇವಿಯ ಪಲ್ಲಕ್ಕಿ ಹಾಗೂ ಜಾತ್ರಾ ಮಹೋತ್ಸವ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯ ಆವರಣದಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್  ವತಿಯಿಂದ ಪರಮ ಪೂಜ್ಯರ ಸಾನಿಧ್ಯದಲ್ಲಿ ಡಿಸೆಂಬರ್ 28 ರಿಂದ ಜನವರಿ 1ರ ವರೆಗೆ ಶ್ರೀ ಗುಡ್ಡಾಪೂರ ಧಾನಮ್ಮ ದೇವಿಯ ಪೂರಾಣ ಕಾರ್ಯಕ್ರಮ ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ಮತ್ತು ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಸವರಾಜ ರಾಜೋಳ್ಳಿ, ಉಪಾಧ್ಯಕ್ಷ ರಾಜಶೇಖರ ಬಳ್ಳಾ ಅವರು ತಿಳಿಸಿದ್ದಾರೆ.

ಡಿ.30 ರಂದು ಸಂಜೆ 7.30 ಕ್ಕೆ ಉಡಿ ತುಂಬುವ ಕಾರ್ಯಕ್ರಮ, ಜನವರಿ 1 ರಂದು ಸಂಜೆ 7.30 ಕ್ಕೆ ಸಹಸ್ರ ದೀಪೋತ್ಸವ, ಜನವರಿ 3 ರಂದು ಸಾಯಂಕಾಲ 5 ಗಂಟೆಗೆ ಪಲ್ಲಕ್ಕಿ ಹಾಗೂ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜನವರಿ 2 ರಂದು ಬೆಳಿಗ್ಗೆ 6.30 ಕ್ಕೆ ಶ್ರೀ ಶಂಕ್ರಯ್ಯಸ್ವಾಮಿ ದೇವಾಂಗ ಮಠ ಕಾಳಗಿ ಗುರುಗಳ ನೇತೃತ್ವದಲ್ಲಿ ಶ್ರೀ ಬನಶಂಕರಿದೇವಿಗೆ ಮಹಾ ಮಸ್ತಾಭಿಷೇಕ ನಂತರ ಬೆಳಗ್ಗೆ 9 ಗಂಟೆಗೆ ಶ್ರೀ ಬಸವರಾಜ ರಾಜೋಳ್ಳಿ ಅವರ ಮನೆಯಿಂದ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ದೇವಸ್ಥಾನದ ವರೆಗೆ ಕುಂಭದ ಮೇರವಣಿಗೆ ಹಾಗೂ ಬೆಳಿಗ್ಗೆ 11 ಗಂಟೆಗೆ ಶ್ರೀ ಗುರುಲಿಂಗಪ್ಪ ಅಲ್ಲಂ ರವರ ಮನೆಯ ಬಾವಿಗೆ ಪೂಜೆ ಸಲ್ಲಿಸಿ ಗಂಗಸ್ಥಳ ಕಾರ್ಯಕ್ರಮ ನೆರವೇರುತ್ತದೆ. ನಂತರ ಹಲವಾರು ವಾಧ್ಯಮೇಳಗಳೊಂದಿಗೆ ಪುರವಂತರ ಸೇವೆಯೊಂದಿಗೆ ಶ್ರೀ ಚೌಡೇಶ್ವರಿದೇವಿಯ ಮುಖದ ಮೇರವಣಿಗೆಯು, ಪಟ್ಟಣದ ಮುಖ್ಯ ರಸ್ತೆಗಳಾದ ಹಳೆ ಕಪ್ಪಡ ಬಜಾರ ಚೌಕ್, ಮುಖ್ಯಬಜಾರ, ಸುಲ್ತಾನಪೂರ ಮನೆ ಪಕ್ಕದಿಂದ, ಪಾಲಪ್‌ ಗಲ್ಲಿ ಮುಖಾಂತರ ಹೊಳಿಕಟ್ಟಿ, ತೆಳಗೇರಿ ಶ್ರೀ ಮರುಳಸಿದ್ದೇಶ್ವರ ಗುಡಿ ಹತ್ತಿರದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನಕ್ಕೆ ತಲುಪುವುದು. ಮತ್ತು ಮಧ್ಯಾಹ್ನ 3 ಗಂಟೆಗೆ ಮುತ್ತೈದೆಯರ ಸೇವೆ ನಂತರ ಸದ್ಭಕ್ತರಿಗೆ ಪ್ರಸಾದವಿರುತ್ತದೆ. ದೇವಸ್ಥಾನದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವದವರೆಗೆ ಭಜನೆ ಕಾರ್ಯಕ್ರಮವು ಜರಗುವುದು.

ಜನವರಿ 3 ರಂದು ಬೆಳಿಗ್ಗೆ 6.30ಕ್ಕೆ ಶ್ರೀ ಬನಶಂಕರಿದೇವಿಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರ ಮಧ್ಯಾಹ್ನ 12.15ಕ್ಕೆ ಮುತ್ತೈದೆಯರ ಸೇವೆ ನಂತರ ಸದ್ಭಕ್ತರಿಗೆ ಪ್ರಸಾದ ವಿತರಣೆ ಸಾಯಂಕಾಲ 5 ಗಂಟೆಗೆ ಶ್ರೀ ಬನಶಂಕರಿದೇವಿಯ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಶ್ರೀ ಮನೋಹರ ವಿಶ್ವಕರ್ಮ ತಂಡದಿಂದ ಪುರವಂತರ ಸೇವೆಯೊಂದಿಗೆ ವಿವಿಧ ವಾದ್ಯಮೇಳಗಳೊಂದಿಗೆ ಹೊಳಿಕಟ್ಟಿ, ಪಾಲಪ್‌ ನಲ್ಲಿ, ಕಾಳಮ್ಮಗುಡಿ ಮುಖ್ಯಬಜಾರ, ಬಾಹಾರಪೇಟ ರಸ್ತೆಯ ಮೂಲಕ ಶ್ರೀ ಕಂಬಳೇಶ್ವರ ಮಠದ ಎದುರಿನಿಂದ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ತಲುಪಿ ವಿಶೇಷ ಮಹಾ ಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳುವುದು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ದೇವಿಯ ಸದ್ಭಕ್ತರು ಸಮಾಜ ಭಾಂದವರು ಕುಟುಂಬ ಸಮೇತ ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೋಳಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಎಂದು ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!