ಚಿತ್ತಾಪುರದಲ್ಲಿ ಪೂರ್ವಭಾವಿ ಸಭೆ | ಐತಿಹಾಸಿಕ ಪಾದಯಾತ್ರೆ ಯಶಸ್ವಿಗೆ ಸಮಾಜದ ಮುಖಂಡರು ವೈಯಕ್ತಿಕ ಭಿನ್ನಾಭಿಪ್ರಾಯಗಳು ಬದಿಗಿಟ್ಟು ಕೈಜೋಡಿಸಿ: ಗುತ್ತೇದಾರ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಜನವರಿ 6 ರಿಂದ ನಡೆಯಲಿರುವ ಐತಿಹಾಸಿಕ ಪಾದಯಾತ್ರೆ ಯಶಸ್ವಿಗೆ ಸಮಾಜದ ಮುಖಂಡರು ವೈಯಕ್ತಿಕ ಭಿನ್ನಾಭಿಪ್ರಾಯಗಳು ಬದಿಗಿಟ್ಟು ಎಲ್ಲರೂ ಒಗ್ಗೂಡಿ ಕೈಜೋಡಿಸಬೇಕು ಎಂದು ಕಲ್ಯಾಣ ಕರ್ನಾಟಕ ಈಡಿಗರ ಹೋರಾಟ ಸಮಿತಿ ಅಧ್ಯಕ್ಷ ಸತೀಶ್ ಗುತ್ತೇದಾರ ಕರೆ ನೀಡಿದರು.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಜನವರಿ 6 ರಿಂದ ಕರದಾಳದಿಂದ ನಡೆಯಲಿರುವ ಐತಿಹಾಸಿಕ ಪಾದಯಾತ್ರೆ ನಿಮಿತ್ತ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುವುದು ಸಹಜ ಹೀಗಾಗಿ ಅವುಗಳನ್ನು ಮೆಟ್ಟಿನಿಂತು ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗೂಡುವುದು ಅವಶ್ಯಕತೆ ಇದೆ ಎಂದರು.
ಮಾಧ್ಯಮ ಸಂಚಾಲಕ ಡಾ.ಸದಾನಂದ ಪೆರ್ಲ ಮಾತನಾಡಿ, ಈಡಿಗ ಬಿಲ್ಲವ, ನಾಮಧಾರಿ, ಧೀವರ, ತೀಯ ಸೇರಿದಂತೆ 26 ಪಂಗಡಗಳನ್ನು ಹೊಂದಿದ ಸಮಾಜದ 18 ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 2026 ಜನವರಿ 6ನೇ ತಾರೀಖಿನಿಂದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಕರದಾಳದಿಂದ ಬೆಂಗಳೂರು ವರೆಗೆ ಪೀಠಾಧಿಪತಿ ಡಾ. ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಐತಿಹಾಸಿಕ ಪಾದಯಾತ್ರೆಗೆ (700 ಕಿ.ಮಿ 41 ದಿನ) ಸಮಾಜ ಬಾಂಧವರು ಎಲ್ಲರೂ ಒಗ್ಗಟ್ಟಾಗಿ ಬೆಂಬಲಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ನಾಗಯ್ಯ ಗುತ್ತೇದಾರ ಕರದಾಳ ಮಾತನಾಡಿ, ಈಡಿಗ ಸಮಾಜದ ಸಂಘಟನೆಗೆ ಹಗಲಿರುಳು ಶ್ರಮಿಸುತ್ತಿರುವ ಕರದಾಳ ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿಗಳಿಗೆ ನಾವೆಲ್ಲರೂ ಸಹಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಸಂಘಟನೆಗೆ ನಾನು ಸದಾ ಸಿದ್ಧವಿದ್ದು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಭೂದಾನಿ ಸುರೇಶ್ ಗುತ್ತೇದಾರ ಕರದಾಳ, ಮುಖಂಡರಾದ ಮೋಹನ್ ಮುಸ್ತಾಜರ್, ದೇವಪ್ಪ ನಂದೂರಕರ್, ಅಶೋಕ್ ಗುತ್ತೇದಾರ ವಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುಣ್ಯ ಸ್ಮರಣೆ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನಗಳು ಸಲ್ಲಿಸಲಾಯಿತು.
ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾದೇವ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಡೇಚೂರ, ಹಿರಿಯ ಮುಖಂಡರಾದ ಕುಪೇಂದ್ರ ಗುತ್ತೇದಾರ, ಅಂಬಯ್ಯ ಗುತ್ತೇದಾರ, ಕಲಬುರಗಿ ತಾಲೂಕು ಅಧ್ಯಕ್ಷ ಮಹೇಶ್ ಗುತ್ತೇದಾರ, ಬಿ.ಎಂ.ರಾವೂರ ವೇದಿಕೆಯಲ್ಲಿದ್ದರು.
ಮುಖಂಡರಾದ ಶ್ರೀಶೈಲ್ ಗುತ್ತೇದಾರ, ಸುನೀಲ್ ಗುತ್ತೇದಾರ, ಮಲ್ಲಯ್ಯ ಗುತ್ತೇದಾರ, ದೀಪಕ್ ಗುತ್ತೇದಾರ ವಾಡಿ, ಸಂತೋಷ ಗುತ್ತೇದಾರ ವಾಡಿ, ಸಣ್ಣಕಾಶಣ್ಣ ಕರದಾಳ, ಲಕ್ಷ್ಮೀಕಾಂತ ಬೆಳಗೇರಿ, ಸಂಗಯ್ಯ ಗುತ್ತೇದಾರ, ಉಮೇಶ್ ಗುತ್ತೇದಾರ, ಅಮೃತ್ ಗುತ್ತೇದಾರ, ಶಾಂತಯ್ಯ ತರಕಸಪೇಟ್, ರಕ್ಷಿತ್ ಗುತ್ತೇದಾರ, ಬಸವರಾಜ ಗುತ್ತೇದಾರ ಕರದಾಳ, ಸಿದ್ದಯ್ಯ ಗುತ್ತೇದಾರ, ಸಾಬಯ್ಯ ಭಂಕಲಗಿ, ನಾರಾಯಣ ಮೊಗಲಾ, ರಾಜು ಆಲೂರ, ಬಸವರಾಜ ದ್ಯಾವನೂರು, ಶರಣಬಸ್ಸು ಸಾತನೂರು, ನರಸಯ್ಯ ಗುತ್ತೇದಾರ, ವಿಶ್ವಾರಾಧ್ಯ ಕರದಾಳ, ಚಂದ್ರಯ್ಯ ಕರದಾಳ, ಸುಭಾಷ್ ಕರದಾಳ ಸೇರಿದಂತೆ ಇತರರು ಇದ್ದರು. ಕಾಶಿನಾಥ ಗುತ್ತೇದಾರ ನಿರೂಪಿಸಿದರು.

