ಧಾರವಾಡ: ಪ್ರಥಮ ರಾಜ್ಯಮಟ್ಟದ ಕವಿಪೀಠ ಸಮ್ಮೇಳನದ ಸರ್ವಾಧ್ಯಕ್ಷರ ಅದ್ದೂರಿ ಮೇರವಣಿಗೆ, ಸಾಂಸ್ಕೃತಿಕ ಸೊಗಡು ಸವಿದ ಕವಿಗಳು
ನಾಗಾವಿ ಎಕ್ಸಪ್ರೆಸ್
ಧಾರವಾಡ: ಇಡೀ ವಿಶ್ವದಲ್ಲಿಯೇ ಪ್ರಥಮ ಕವಿಪೀಠ ಮಹಾಸಮ್ಮೇಳನವು ಧಾರವಾಡದಲ್ಲಿ ಸೋಮವಾರ ನಡೆಯುತ್ತಿದ್ದು ಈ ಐತಿಹಾಸಿಕ ಸಮ್ಮೇಳನದ ಸರ್ವಾಧ್ಯಕ್ಷರಾದ ನಾಗಾವಿ ನಾಡು ದಂಡೋತಿಯ ಮಲ್ಲಿಕಾರ್ಜುನ ಗದಗಯ್ಯ ಭೃಂಗಿಮಠ ಅವರಿಗೆ ದಂಪತಿ ಸಮೇತ ಮೆರವಣಿಗೆ ನಡೆಸಲಾಯಿತು.
ಧಾರವಾಡದ ಮುಖ್ಯ ಬೀದಿಗಳಿಂದ ಹೊರಟ ಮೆರವಣಿಗೆ ಕರ್ನಾಟಕ ಮಹಾವಿದ್ಯಾಲಯದ ಆವರಣದಲ್ಲಿರುವ ಸೃಜನಾ ರಂಗ ಮಂದಿರಕ್ಕೆ ತಲುಪಿತು.
ಜನಪದ ಸಂಸ್ಖೃತಿಯ ಅನಾವರಣ ದೃಶ್ಯಗಳು ಮೆರವಣಿಗೆಯಲ್ಲಿ ಕಂಡು ಬಂದವು. ಪಾಲ್ಗೊಂಡ ಕವಿ ಸಾಹಿತಿಗಳು, ಮಹಿಳೆಯರು, ಯುವಕರು, ಹಿರಿಯರು ಜನಪದ ಕಲೆಯ ಋಚಿ ಸವಿದರು.
ದೇಶದ ನಾನಾ ಭಾಗಗಳಿಂದ ಬಂದ ಬುದ್ದಿಜೀವಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಚಕ್ಕಡಿ ಗಾಡಿಯ ಮೇಲೆ ಸಮ್ಮೇಳನಾಧ್ಯಕ್ಷರು ಕವಿಪೀಠ ಸಂಸ್ಕೃತಿಯ ಜನಕರಾದ ಭೃಂಗಿಮಠ ದಂಪತಿಗಳಿಗೆ ಮೆರವಣಿಗೆ ಮಾಡಿದರು. ಚಕ್ಕಡಿ ಗಾಡಿಗೆ ಮತ್ತು ಎತ್ತುಗಳಿಗೆ ಶೃಂಗರಿಸಿ ಮೆರಗು ನೀಡಿದ್ದು ವಿಶೇಷವಾಗಿತ್ತು.
ಮೆರವಣಿಗೆಯಲ್ಲಿ ಪರಿಷತ್ತಿನ ರಾಜ್ಯಾಧ್ಯಕ್ಷ ಮನೋಹರ ನಾಯಕ, ಪ್ರಧಾನ ಕಾರ್ಯದರ್ಶಿ ಗುಂಡು ಬಿರಾದಾರ, ಮುಂತಾದವರು ಪಾಲ್ಗೊಂಡಿದ್ದರು.