ಕಾಳಗಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ
ಗ್ರಾಮೀಣ ಪ್ರತಿಭೆಗಳಿಗೆ ದಸರಾ ಕ್ರೀಡಾಕೂಟ ಉತ್ತಮ ವೇದಿಕೆ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ : ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ದಸರಾ ಕ್ರೀಡಾಕೂಟ ಉತ್ತಮ ವೇದಿಕೆಯಾಗಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಇನ್ನಷ್ಟು ಸಾಧನೆ ಮಾಡಬಹುದು ಎಂದು ತಾಲೂಕು ಕ್ರೀಡಾಂಗಣ ವ್ಯವಸ್ಥಾಪಕ ಮಲ್ಲಿಕಾರ್ಜುನ ನೆಲ್ಲಿ ಹೇಳಿದರು.
ತಾಲೂಕಿನ ಕೊಡದೂರ ಗ್ರಾಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಪಂ ಕಾಳಗಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ದಸಾರ ಕ್ರೀಡಾಕೂಟ ಈ ನಾಡಿನ ಹೆಮ್ಮೆಯಾಗಿದ್ದು ಗ್ರಾಮೀಣ ಭಾಗದ ಯುವಕರ ಪ್ರತಿಭೆ ಗುರುತಿಸುವುದು ಈ ಕ್ರೀಡಾಕೂಟದಲ್ಲಿಯೇ ಎಂದು ಹೇಳಿದರು.
ಮುಖಂಡ ಗಣಪತರಾವ್ ಹಾಳಕಾಯಿ ಮಾತನಾಡಿ, ವ್ಯಕ್ತಿಗೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದೂ ಅಷ್ಟೇ ಮುಖ್ಯ. ಹಾಗಾಗಿ ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು. ಪ್ರತಿ ತಾಲ್ಲೂಕಿಗೆ ಒಂದು ಕ್ರೀಡಾಂಗಣ ಹಾಗೂ ಕ್ರೀಡಾ ತರಬೇತುದಾರರು ಬೇಕು, ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಪ್ರತಿಭಾ ಕಾರಂಜಿಗೆ ಪಾಲಕರು ಪ್ರೋತ್ಸಾಹ ನೀಡಿದಂತೆ ಕ್ರೀಡಾ ಸ್ಪರ್ಧೆಗಳಿಗೂ ಸಹಕಾರ ನೀಡಿದರೆ ಉತ್ತಮ ಕ್ರೀಡಾ ಪ್ರತಿಭೆ ಹೊರಬರಲು ಸಾಧ್ಯ ಎಂದರು.
ಶಿಕ್ಷಣ ಪ್ರೇಮಿ ಮಲ್ಲಪ್ಪ ದಿಗ್ಗಾಂವ ಮಾತನಾಡಿ, ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದರು. ಪ್ರೌಢ ಶಾಲೆ ಮುಖ್ಯಗುರು ಕೆ. ಹರಣಿ, ಸಿಆರ್.ಸಿ ಶಂಕರ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ ಮಲ್ಲಪ್ಪ ದಿಗ್ಗಾಂವ ಕ್ರೀಡಾ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ರೇಣುಕಾ ಕಿಶನ ರಾಠೋಡ, ಎಸ್.ಡಿ.ಎಮ್.ಸಿ ಅಧ್ಯಕ್ಷ ಚನ್ನಬಸಪ್ಪ ರುದನೂರ, ಉಪಾಧ್ಯಕ್ಷ ರಾಧಾಕೃಷ್ಣ ಮೇಲಕೇರಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಾಮರಾವ ಮೋಘಾ, ದೇವಿಂದ್ರ ಹುಣಚಿಕರ್, ಗ್ರಾಪಂ ಸದಸ್ಯ ಬಸವರಾಜ ಜೀವಣಗಿ, ಮಡಿವಾಳಪ್ಪ ಗುಂಡಗುರ್ತಿ, ಕೃಷ್ಣ ಮೇಲ್ಕೇರಿ, ಬಸವರಾಜ ಅರಣಕಲ್, ವೀರಣ್ಣ ನಿಂಗದಳ್ಳಿ, ಮುಖ್ಯಗುರು ರಾಮಾಂಜನಪ್ಪ, ದೈಹಿಕ ಶಿಕ್ಷಕರಾದ ಮಾಹಂತೇಶಸ್ವಾಮಿ ಕಂಠಿಮಠ, ಸತೀಶ್, ಶಿವಪುತ್ರಪ್ಪ, ಶಾಂತಕುಮಾರ, ಗೋವಿಂದ, ರೇವಣಸಿದ್ಧ, ಹಾಶಪ್ಪ, ಧನಂಜಯ್ಯ, ಸಿದ್ರಾಮ ಪಾಳ, ಮಲ್ಲಿಕಾರ್ಜುನ ಪಾಟೀಲ, ಶಫೀ ಹಲಚೇರಾ ಸೇರಿದಂತೆ ಅನೇಕರು ಇದ್ದರು.