ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವಮಾನಿಸಿದ ಶಾಸಕ ಶರಣಗೌಡ ಕಂದಕೂರ ದುರಹಂಕಾರ ಖಂಡಿಸಿ ನಾಳೆ ಪ್ರತಿಭಟನೆ: ನೀರಟಿ
ನಾಗಾವಿ ಎಕ್ಸಪ್ರೆಸ್
ಗುರುಮಠಕಲ್: ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಪ್ರಸ್ತುತ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರಿಗೆ ಅವಮಾನಿಸಿರುವ ಶಾಸಕ ಶರಣಗೌಡ ಕಂದಕೂರ ಅವರ ದುರಹಂಕಾರ ಹಾಗೂ ಸರ್ವಾಧಿಕಾರ ಖಂಡಿಸಿ ಸೆ.15 ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಡಾ ಮಾಜಿ ನಿರ್ದೇಶಕ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಜಯಕುಮಾರ್ ನೀರಟಿ ತಿಳಿಸಿದ್ದಾರೆ.
ಪಟ್ಟಣದ ಸಿಹಿ ನೀರು ಬಾವಿ ಇಂದ ಬಸವೇಶ್ವರ ವೃತ್ತದ ವರೆಗೆ ಬೆಳಗ್ಗೆ 11 ಘಂಟೆಗೆ ಪ್ರತಿಭಟನೆ ಮೆರವಣಿಗೆ ಮಾಡಲಾಗುವುದು. ಶಾಸಕ ಶರಣಗೌಡ ಕಂದಕೂರ ಅವರು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರಿಗೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಏಕೆ ವಚನದಲ್ಲಿ ಅವನು ಎಂಎಲ್ಎ ನಾ, ನಾನು ಎಂಎಲ್ಎ ನಾ ಅಂತ ಅವರು ದರ್ಪ ತೋರಿಸಿದ್ದಾರೆ. ಒಬ್ಬ ಹಿಂದುಳಿದ ವರ್ಗಗಳ ನಾಯಕರು ಹಾಗೂ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಇರುವ ಚಿಂಚನಸೂರ ಅವರಿಗೆ ಕೀಳಾಗಿ ಕಂಡ ಶಾಸಕರ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆ ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಹಿಂದುಳಿದ ನಾಯಕರು, ಕೋಲಿ ಸಮಾಜದ ಮುಖಂಡರು ಈ ಒಂದು ಪ್ರತಿಭಟನೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
