Oplus_0

ಜ.೧೯ ರಂದು ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳು ಬಳ್ಳಾರಿಗೆ ಆಗಮನ

ನಾಗಾವಿ ಎಕ್ಸಪ್ರೆಸ್

ಬಳ್ಳಾರಿ: ಇಲ್ಲಿನ ಸಂಗನಕಲ್ಲು ರಸ್ತೆಯಲ್ಲಿರುವ ಶೃಂಗೇರಿ ಶಂಕರ ಮಠದ ಆವರಣದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶೃಂಗೇರಿಯ ಶ್ರೀ ಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳಿ ವಿರಾಜಮಾನರಾದ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಹಾಗೂ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಪರಮಾನುಗ್ರಹದಿಂದ ನೂತನವಾಗಿ ನಿರ್ಮಿಸಲ್ಪಟ್ಟ ಅತ್ಯಾಧುನಿಕ ಭಾರತಿ ತೀರ್ಥ ಸಭಾ ಭವನ ಹಾಗೂ ಕಲ್ಯಾಣ ಮಂಟಪ ಶುಭಾರಂಭಕ್ಕೆ ಶೃಂಗೇರಿ ಜಗದ್ಗುರುಗಳು ಜನೆವರಿ ೧೯ರಂದು ಸಂಜೆ ಬಳ್ಳಾರಿಗೆ ಆಗಮಿಸಲಿದ್ದಾರೆ. ಜ.೧೯, ೨೦ ಮತ್ತು ೨೧ ರಂದು ಮೂರು ದಿನಗಳ ಕಾಲ ಬಳ್ಳಾರಿ ನಗರದಲ್ಲಿ ವಾಸ್ತವ್ಯ ಹೂಡಲಿರುವ ಶ್ರೀಗಳ ಕಾರ್ಯಕ್ರಮಗಳನ್ನು ವಿದ್ವತ್ಪೂರ್ಣವಾಗಿ ಹಮ್ಮಿಕೊಳ್ಳುವ ಉದ್ದೇಶದಿಂದ ಭಕ್ತರು ಶೃಂಗೇರಿ ಜಗದ್ಗುರುಗಳನ್ನು ಸ್ವಾಗತಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಭಾನುವಾರ ಸಂಜೆ ಶ್ರೀಮಠದ ಆವರಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸಂಚಾಲಕರಾದ ಬಿ.ಕೆ.ಬಿ.ಎನ್.ಮೂರ್ತಿ ಅವರು ಕಲ್ಯಾಣ ಮಂಟಪದ ಉ ದ್ಘಾಟನೆಗೆ ಸಮಿತಿಯಿಂದ ಮೊದಲ ಪೂರ್ವಭಾವಿ ಸಭೆ ಆಯೋಜಿಸಿದ್ದು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಗದ್ಗುರುಗಳ ಆಪ್ತ ವಲಯದ ಶಮಂತ್ ಮತ್ತು ಶೃಂಗೇರಿ ಮಠದ ಆಡಳಿತ ಮಂಡಳಿಯ ತಂಡದ ಮಹೋದಯರು ಶನಿವಾರದಂದು ಇಲ್ಲಿನ ಶಂಕರಮಠಕ್ಕೆ ಆಗಮಿಸಿ ಮಠದ ಪರಂಪರೆಯAತೆ ಕಾರ್ಯಕ್ರಮಗಳನ್ನು ಆಯೋಜಿಸಲು ಕೆಲವೊಂದು ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಅವರ ಮಾರ್ಗದರ್ಶನದಂತೆ ಸಮಿತಿಯ ಎಲ್ಲ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಸಮಸ್ತ ಭಕ್ತರೊಂದಿಗೆ ಚರ್ಚಿಸಿ ಸನಾತನ ಪದ್ಧತಿಯಂತೆ ಲೋಕ ಕಲ್ಯಾಣಾರ್ಥವಾಗಿ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಲೌಕಿಕ ಕಾರ್ಯಕ್ರಮಗಳನ್ನು ಆಯೋಜಿಸಲು ರೂಪುರೇಷೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಜ.೧೮ರಂದು ಶ್ರೀಗಳು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ಬ್ರಾಹ್ಮಣ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಹಿಂದೂಪುರಕ್ಕೆ ತೆರಳಲಿದ್ದಾರೆ. ಜ.೧೯ ರಂದು ಆಂಧ್ರಪ್ರದೇಶದ ಹಿಂದೂಪುರದಿAದ ನೇರವಾಗಿ ಬಳ್ಳಾರಿಗೆ ಆಗಮಿಸಲಿದ್ದಾರೆ. ಜ.೧೯ ರಂದು ಸಂಜೆ ಬಳ್ಳಾರಿ ಪುರ ಪ್ರವೇಶ ಮಾಡಲಿದ್ದು ನಗರದ ಪುರಾಣಿಕ್ ಹೆಲ್ತ್ ಮಾರ್ಟ್ನಿಂದ ಶಂಕರಮಠದ ವರೆಗೆ ಶ್ರೀಗಳನ್ನು ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಿಸಲಾಗುವುದು. ಜ.೨೦ ಮತ್ತು ೨೧ ರಂದು ಭಿಕ್ಷಾವಂದನೆ ಸ್ವೀಕರಿಸಲಿರುವ ಶ್ರೀಗಳು ಬಳಿಕ ಭಕ್ತರ ಆಹ್ವಾನದ ಮೇರೆಗೆ ಗಂಗಾವತಿ, ಹೊಸಪೇಟೆ, ರಾಯಚೂರು, ಬೀದರ್, ಹೈದ್ರಾಬಾದ್ ಗೆ ತೆರಳಿ ಬಳಿಕ ಉತ್ತರ ಭಾರತದ ಹಲವಾರು ಪ್ರಾಂತ್ಯಗಳಿಗೆ ತೆರಳಲಿದ್ದಾರೆ.

ಮೂರು ದಿನದ ಕಾರ್ಯಕ್ರಮಗಳು: ಜ.೧೯ ರಂದು ಸಂಜೆ ಬಳ್ಳಾರಿ ಪುರ ಪ್ರವೇಶ ಮಾಡಲಿರುವ ಶ್ರೀಗಳನ್ನು ಭಕ್ತರು ಕುಂಭಕಳಶದೊAದಿಗೆ ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ಅಂದು ನೇರವಾಗಿ ಶ್ರೀಮಠಕ್ಕೆ ಆಗಮಿಸಲಿರುವ ಶ್ರೀಗಳು ಶ್ರೀ ಶಾರದಾಂಬಾ ದರ್ಶನ ಪಡೆದು ಬಳಿಕ ತಮ್ಮ ಅಮೃತ ಕರಗಳಿಂದ ಅತ್ಯಾಧುನಿಕವಾಗಿ ನಿರ್ಮಾಣಗೊಂಡಿರುವ ಕಲ್ಯಾಣ ಮಂಟಪ ಉದ್ಘಾಟನೆ ನೆರವೇರಿಸಲಿದ್ದಾರೆ. ಇದಕ್ಕೂ ಪೂರ್ವದಲ್ಲಿ ವಿಪ್ರ ಮಹೋದಯರು ಪುರೋಹಿತರ ಮತ್ತು ಅರ್ಚಕರ ನೇತೃತ್ವದಲ್ಲಿ ಗಣ ಹೋಮ, ವಾಸ್ತು ಶಾಂತಿ, ಗೋ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಿದ್ಧಾರೆ. ನಂತರದಲ್ಲಿ ಶ್ರೀಗಳು ಚಂದ್ರಮೌಳೇಶ್ವರ ಸ್ವಾಮಿಯ ಪೂಜೆಯನ್ನು ವಿದ್ಯುಕ್ತವಾಗಿ ನೆರವೇರಿಸಲಿದ್ದಾರೆ.

ಜ.೨೦ ಕೋಟೆ ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ: ನಗರದ ಐತಿಹಾಸಿಕ ಪ್ರಸಿದ್ಧಿ ಪಡೆದ, ಹಂಡೆ ಬಾಲದ ಹನುಮಪ್ಪ ನಾಯಕರ ಆರಾಧ್ಯ ದೈವ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಲಿರುವ ಶ್ರೀಗಳು ದೇವರ ದರ್ಶನ ಪಡೆದು ಲೋಕ ಕಲ್ಯಾಣಾರ್ಥ ಪ್ರಾರ್ಥಿಸಲಿದ್ದಾರೆ. ಅಲ್ಲಿಂದ ಸಭಾಪತಿ ಬೀದಿಯಲ್ಲಿರುವ ಹಳೆಯ ಶಂಕರಮಠಕ್ಕೆ ತೆರಳಿದ್ದಾರೆ. ಈವೇಳೆ ಸಾರ್ವಜನಿಕರಿಗೆ ದರ್ಶನ ನೀಡಲಿರುವ ಶ್ರೀಗಳು ಭಕ್ತರಿಂದ ಭಿಕ್ಷಾ ವಂದನೆ ಸ್ವೀಕರಿಸಲಿದ್ದಾರೆ. ಸಂಜೆಯ ಹೊತ್ತು ಶ್ರೀಮಠದಲ್ಲಿ ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಮತ್ತು ವಿಪ್ರರಿಂದ ಶ್ರೀ ಆದಿಶಂಕರಾಚಾರ್ಯ ವಿರಚಿತ ಕಲ್ಯಾಣ ವೃಷ್ಟಿತ್ಸವ, ನಕ್ಷತ್ರ ಮಾಲಾ ಸ್ತೋತ್ರ ಮತ್ತು ಲಕ್ಷಿö್ಮÃ ಕರಾವಲಂಬನ ಸ್ತೋತ್ರಗಳ ಪಠಣ ಜರುಗಲಿದೆ. ನಂತರ ಶ್ರೀಗಳಿಂದ ಅನುಗ್ರಹ ಆಶೀರ್ವಚನ ಹಾಗೂ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ಪೂಜೆ ಜರುಗಲಿದೆ. ಇದೇವೇಳೆ ಆದಿಶಂಕರಾಚಾರ್ಯ ವಿರಚಿತ ಶ್ಲೋಕಗಳ ೨೦ ಸಾವಿರ ಪುಸ್ತಕಗಳ ವಿತರಣೆ ಮಾಡಲಾಗುತ್ತದೆ.

ಜ.೨೧ ಭಕ್ತರ ಮನೆಗಳಿಗೆ ಭೇಟಿ: ಶೃಂಗೇರಿ ಜಗದ್ಗುರುಗಳು ನಗರದ ಭಕ್ತರ ಮನೆಗಳಿಗೆ ತೆರಳಲಿದ್ದಾರೆ. ಭಕ್ತರಿಂದ ಸೇವೆ ಸ್ವೀಕರಿಸಿ ಶಿಷ್ಯ ವೃಂದಕ್ಕೆ ಗುರೂಪದೇಶ ಮಾಡಲಿದ್ದಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಭಕ್ತರಿಗೆ ದರ್ಶನ ನೀಡಲಿರುವ ಶ್ರೀಗಳು ಭಕ್ತರಿಗೆ ಹಾಗೂ ಶಿಷ್ಯ ವರ್ಗದವರಿಗೆ ಫಲ, ಮಂತ್ರಾಕ್ಷತೆ ನೀಡಲಿದ್ದಾರೆ. ಶೃಂಗೇರಿಯಿAದ ಶ್ರೀಗಳೊಂದಿಗೆ ೬೦ ಜನರ ಆಸ್ತಿಕ ತಂಡವು ಆಗಮಿಸಲಿದ್ದು, ಬಳ್ಳಾರಿಯ ಭಕ್ತ ಜನರು ಶ್ರೀಗಳ ಅಖಂಡ ಆಶೀರ್ವಾದ ಮತ್ತು ಅನುಗ್ರಹಕ್ಕೆ ಪಾತ್ರರಾಗುವಂತೆ ಬಿ.ಕೆ.ಬಿ.ಎನ್.ಮೂರ್ತಿ ಅವರು ಕೋರಿದರು.

ವಿವಿಧ ಸಮಿತಿಗಳ ರಚನೆ: ಇಡೀ ಭಾರತವನ್ನು ನಾಲ್ಕು ಬಾರಿ ಸುತ್ತಿ ಭಾರತೀಯ ಸನಾತನ ಧರ್ಮದ ಔನ್ನತ್ಯವನ್ನು ಎತ್ತಿ ಹಿಡಿದ ಜಗದ್ಗುರು ಆದಿಶಂಕರಾಚಾರ್ಯರಿAದಾಗಿ ಇಂದು ಭಾರತ ಜಗದ್ಗುರುವಿನ ಸ್ಥಾನ ಅಲಂಕರಿಸಿದೆ. ಆದಿಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಶ್ರೀ ಶಾರದಾಂಬಾ ಮಠದಿಂದ ಇಂದು ಲೋಕ ಕಲ್ಯಾಣವಾಗಿದೆ. ಅದರಂತೆ ಬಳ್ಳಾರಿಯಲ್ಲಿಯೂ ಕೂಡ ಶತಮಾನಗಳಿಂದಲೂ ಶ್ರೀ ಶಂಕರಮಠವು ಲೋಕ ಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ತನ್ನಿಮಿತ್ತ ಕಳೆದ ಒಂದು ದಶಕದಿಂದ ಸಂಗನಕಲ್ಲು ರಸ್ತೆಯ ಶ್ರೀಮಠದಲ್ಲಿ ಶ್ರೀ ಶಾರದೆಯನ್ನು ಪೂಜಿಸಿ ಆರಾಧಿಸುವ ಮೂಲಕ ಧಾರ್ಮಿಕತೆಯನ್ನು ಭಕ್ತರಲ್ಲಿ ಮೂಡಿಸುತ್ತಿದೆ. ಇದೀಗ ನೂತನವಾಗಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದ್ದು ಮೂರು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತನ್ನಿಮಿತ್ತ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಧಾರ್ಮಿಕ ಹಾಗೂ ಪರಂಪರೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಜನರಲ್ಲಿ ಭಕ್ತಿ ಭಾವನೆಗಳನ್ನು ತುಂಬುವ ಉದ್ದೇಶದಿಂದ ಹಲವಾರು ಕಾಂiÀiðಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ತಂತ್ರಜ್ಞಾನ, ವೈದ್ಯಕೀಯ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಭಕ್ತರಿಗಾಗಿ ಊಟ, ಉಪಹಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಂತಕ್ಕ ಅವರ ನೇತೃತ್ವದಲ್ಲಿ ಆದಿಶಂಕರಾಚಾರ್ಯರ ಶ್ಲೋಕಗಳ ಪಠಣ ವ್ಯವಸ್ಥೆ ಮಾಡಲಾಗಿದೆ. ಗುರುಗಳ ಪರಿವಾರ, ಪೂಜಾ ವಿಧಿ ವಿಧಾನಗಳು, ಪಾರ್ಕಿಂಗ್ ವ್ಯವಸ್ಥೆ, ಊಟ, ಉಪಹಾರ ವ್ಯವಸ್ಥೆ, ನೀರು ಹಾಗೂ ತಾಂತ್ರಿಕ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ವಿವಿಧ ತಂಡಗಳನ್ನು ರಚಿಸಲಾಗಿದೆ. ಭಕ್ತರಿಂದ ಗುರುಗಳ ಪಾದ ಪೂಜೆ, ಭಿಕ್ಷಾ ವಂದನೆ ಒಳಗೊಂಡAತೆ ಅನೇಕ ಕಾರ್ಯಕ್ರಮಗಳನ್ನು ಈ ಮೂರು ದಿನಗಳ ಕಾಲ ಆಯೋಜಿಸಿದ್ದು ಬಳ್ಳಾರಿಯನ್ನು ಶಕ್ತಿ ಕೇಂದ್ರ ಹಾಗೂ ಭಕ್ತಿ ಕೇಂದ್ರವನ್ನಾಗಿಸುವಲ್ಲಿ ಶ್ರೀಗಳ ಆಗಮನ ಪ್ರಮುಖ ಪಾತ್ರವಹಿಸಲಿದೆ ಎಂದು ಬಿ.ಕೆ.ಬಿ.ಎನ್.ಮೂರ್ತಿ ಅವರು ಹೇಳಿದರು.

ಹೊಸಪೇಟೆಯ ಸಮಾಜ ಸೇವಕರಾದ ಪಂತರ್ ಜಯಂತ್ ಅವರು ಮಾತನಾಡಿ, ಬಳ್ಳಾರಿಯಲ್ಲಿ ಅದ್ದೂರಿಯಾಗಿ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಎಲ್ಲ ಸಮುದಾಯಗಳ ಜನರು ಆಗಮಿಸಿ ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಬೇಕು. ಸನಾತನ ಪದ್ಧತಿಯಂತೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಭಕ್ತರ ಮನೆಗಳಿಗೆ ತೆರಳಿ ಶ್ರೀಗಳು ಅನುಗ್ರಹ ಸಂದೇಶ ನೀಡಬೇಕೆಂಬ ಆಶಯ ವ್ಯಕ್ತಪಡಿಸಿದರು.

ಈ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಡಾ.ಸುಧಾಕರ್, ವಕೀಲರಾದ ವೈ.ರಂಗನಾಥ್, ಸತ್ಯಮೂರ್ತಿ, ಪ್ರಸನ್ನ ಕಾರ್ಯಕ್ರಮದ ರೂವಾರಿಗಳಾದ ಜೆ.ಮೋಹನ್ ಶಾಸ್ತಿç, ವಿ.ಮುರಳಿ, ಆರ್.ಶ್ರೀಧರ್, ಮುರಾರಿ, ಕಿರಣ್, ರವಿ ಶಾಸ್ತಿç, ಸತೀಶ್ ದೇಸಾಯಿ, ಎ.ನಾಗರಾಜ್, ಶ್ರೀನಿವಾಸ ದೇಸಾಯಿ, ನಿವೃತ್ತ ಎಎಸ್‌ಐ ಪದ್ಮನಾಭ, ವ್ಯವಸ್ಥಾಪಕರಾದ ನಟರಾಜ್, ಪುರೋಹಿತರಾದ ಗುರುರಾಜ್ ಮತ್ತು ಚಂದ್ರಶೇಖರ್, ಮಹಿಳಾ ಪ್ರತನಿದಿಗಳಾದ ಕೆ.ವಿಜಯಲಕ್ಷ್ಮೀ, ಶೈಲಜಾ ಧಾರವಾಡಕರ್ ಮತ್ತು ಎಂ.ಆರ್.ವಿಜಯಲಕ್ಷ್ಮೀ ಇನ್ನಿತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!