Oplus_0

ಐಟಿಎಫ್ ಮಹಿಳಾ ಓಪನ್ ಟೆನ್ನಿಸ್ ಟೂರ್ನಿಯ ಡಬಲ್ಸ್ ನಲ್ಲಿ ಗೆದ್ದ ಜೋಡಿಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ರೋಫಿ ವಿತರಣೆ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಟಿಎಫ್ ಮಹಿಳಾ ಓಪನ್ ಟೆನ್ನಿಸ್ ಟೂರ್ನಿಯ ಡಬಲ್ಸ್ ನಲ್ಲಿ ಗೆದ್ದ ವೈಷ್ಣವಿ ಹಾಗೂ ಅಂಕಿತಾ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟ್ರೋಫಿ ನೀಡಿ ಗೌರವಿಸಿದರು.

ಈ‌ ಸಂದರ್ಭದಲ್ಲಿ ರನ್ನರ್ಸ್ ಅಪ್ ಆಗಿದ್ದ ಜೋಡಿ ಆಕಾಂಕ್ಷ ಹಾಗೂ ಸೋಹಾ ಸಾದಿಕ್ ಅವರನ್ನೂ ಕೂಡಾ ಸಚಿವರು ಗೌರವಿಸಿದರು.

ಈ‌ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಅಂತರಾಷ್ಟ್ರೀಯ ಮಟ್ಟದ ಟೆನ್ನಿಸ್ ಫೆಡರೇಷನ್ ಅಡಿಯಲ್ಲಿ ಕಲಬುರಗಿಯಲ್ಲಿ ಪಂದ್ಯಾವಳಿ ಆಯೋಜಿಸಿರುವ ಖುಷಿ ತಂದಿದೆ ಎಂದರು.

ಮಹಾನಗರ ಪಾಲಿಕೆಯ ಮಹಾಪೌರ ವರ್ಷಾ ರಾಜೀವ್ ಜಾನೆ, ಜಿಡಿಎ ಅಧ್ಯಕ್ಷ ಮಜರ್ ಆಲಂ ಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಪೊಲೀಸ್ ಕಮೀಷನರ್ ಡಾ ಶರಣಪ್ಪ ಢಗೆ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ‌ ಕಮೀಷನರ್ ಅವಿನಾಶ್ ಶಿಂಧೆ, ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಹಲವರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!