ಕಾಳಗಿ ಕಸಾಪ ವತಿಯಿಂದ ಭೀಮ ಜ್ಞಾನ , ಯಾನ ವಿಶೇಷ ಕಾರ್ಯಕ್ರಮ, ಸಂವಿಧಾನದ ಗರಿಷ್ಠ ತಿಳುವಳಿಕೆ ಅಗತ್ಯ: ಹೋಳಕರ್
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಗಣರಾಜ್ಯವಾದ ನಂತರ ಭಾರತ ನಿರ್ಮಾಣವಾಗಲು ಕಾರಣವಾದ ಸಂವಿಧಾನದ ಬಗ್ಗೆ ಎಲ್ಲರಲ್ಲೂ ಹೆಮ್ಮೆ, ಗೌರವ, ಇರಬೇಕು, ಸಂವಿಧಾನದ ಗರಿಷ್ಠ ತಿಳುವಳಿಕೆ ಅಗತ್ಯ ಎಂದು ಕಲಬುರಗಿ ಸರಕಾರಿ ಮಹಾವಿದ್ಯಾಲಯದ ಪ್ರಾದ್ಯಾಪಕ ಡಾ. ಶ್ರೀಮಂತ ಬಿ.ಹೋಳಕರ್ ಹೇಳಿದರು.
ಪಟ್ಟಣದ ಕಾಳೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕಾಳಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ರವರ ಜಯಂತಿ ನಿಮಿತ್ತ ಹಮ್ಮಿಕೊಂಡ ಭೀಮ ಜ್ಞಾನ, ಯಾನ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ, ಭಾರತ ರತ್ನ ವಿಶ್ವ ಜ್ಞಾನಿ ಡಾ. ಬಾಬಸಾಹೇಬ ಅಂಬೇಡ್ಕರ್ ಹಾಗೂ ಭಕ್ತಿ ಭಂಡಾರಿ, ವಿಶ್ವಗುರು ಬಸವಣ್ಣನವರ ಹಾಗೂ ಇತರ ಮಹಾನ್ ಸತ್ಪುರುಷರ ತತ್ವಾದರ್ಶಗಳು, ಸಂದೇಶಗಳನ್ನು ವಿದ್ಯಾರ್ಥಿಗಳು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜಮುಖಿಯಾಗಿ ಬಾಳಬೇಕು ಎಂದು ಹೇಳಿದರು.
ಸ್ವಾತಂತ್ರ ಪೂರ್ವದ ಭಾರತ ಹಾಗೂ ಸ್ವಾತಂತ್ರ ನಂತರ ಭಾರತದ ಸ್ಥಿತಿಗತಿಗಳ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ಕಸಾಪ ಕಾಳಗಿ ತಾಲೂಕು ಅಧ್ಯಕ್ಷ ಸಂತೋಷ ಕುಡಳ್ಳಿ ಮಾತನಾಡಿ, ಶೋಷಿತ ಸಮುದಾಯದ ವಿಮೋಚನೆಗಾಗಿ ತಮ್ಮ ಜೀವನವೇ ತ್ಯಾಗ ಮಾಡಿ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ಸ್ಮರಿಸಿ ಅವರ ಚಿಂತನೆಗಳನ್ನು ಇಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅಂಬಾದಾಸ್ ಮದನೆ ಮಾತನಾಡಿದರು. ಕೋಡ್ಲಿಯ ಪೂಜ್ಯ ಬಸವಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾಳಗಿ ತಾಲೂಕಧ್ಯಕ್ಷ ಅನೀಲಕುಮಾರ ಗುತ್ತೇದಾರ, ಮಾಜಿ ಗ್ರಾ.ಪಂ ಅಧ್ಯಕ್ಷ ಪರಮೇಶ್ವರ ಮಡಿವಾಳ, ರಾಜೇಂದ್ರಬಾಬು ಹೀರಾಪೂರ, ಖಾಸಿಂ ಅಲಿ ಗೋಟೂರ್, ರಾಜಶೇಖರ ಪಾಟೀಲ್, ಪ್ರಕಾಶ ಮಠಪತಿ, ಸಪ್ನಾ ಮುಕರಂಬಿ, ಪಲ್ಲವಿ ನಾಟೇಕರ್, ಈರಮ್ಮ ರೆಡ್ಡಿ ಇದ್ದರು.
ಸುಚಿತ್ರಾ, ನಾಗವೇಣಿ ಪ್ರಾರ್ಥಿಸಿದರು, ಸಂಗೀತಾ ಬೊಮ್ಮಾಣಿ ಸ್ವಾಗತಿಸಿದರು, ಡಾ. ಮೀರಾಬಾಯಿ ಡಿ.ಕೆ ನಿರೂಪಿಸಿದರು, ಸತೀಶ್ಚಂದ್ರ ಸುಲೇಪೇಟ್ ವಂದಿಸಿದರು.