ಕಂಬಳೇಶ್ವರ ಮಠಕ್ಕೆ ಫೆ.23 ರಂದು ಕೊಪ್ಪಳ ಗವಿಮಠದ ಶ್ರೀಗಳು ಭೇಟಿ: ಸೋಮಶೇಖರ ಶಿವಾಚಾರ್ಯರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇದೇ ಫೆ.23 ರಂದು ಮಧ್ಯಾಹ್ನ 12 ಗಂಟೆಗೆ ಕಂಬಳೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ತಿಳಿಸಿದ್ದಾರೆ.
ಅಂದು ಕಂಬಳೇಶ್ವರ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆಯಲಿದ್ದಾರೆ ನಂತರ ಸೋಮಶೇಖರ ಶಿವಾಚಾರ್ಯರು ಗವಿಮಠದ ಶ್ರೀಗಳಿಗೆ ನಾಗಾವಿ ನಾಡಿನ ಪುಸ್ತಕಗಳು ನೀಡಿ ಸತ್ಕರಿಸಿ ಗೌರವಿಸಲಿದ್ದಾರೆ.
ಹೀಗಾಗಿ ತಾಲೂಕಿನ ಭಕ್ತಾದಿಗಳು ಹಾಗೂ ಗಣ್ಯರು ಆಗಮಿಸಿ ಗವಿಸಿದ್ದೇಶ್ವರ ಸ್ವಾಮೀಜಿ ಅವರ ದರ್ಶನಾಶೀರ್ವಾದ ಪಡೆದು ಪುನೀತರಾಗಬೇಕು ಎಂದು ಮನವಿ ಮಾಡಿದ್ದಾರೆ

