ಕನಕ ಗುರು ಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮಿಜಿಯವರ ನಿಧನಕ್ಕೆ ಕುರುಬ ಸಮಾಜ ತೀವ್ರ ಸಂತಾಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಜ್ ನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮಿಜಿಯವರು ಲಿಂಗೈಕ್ಯರಾಗಿರುವುದು ಕುರುಬ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ ಹಾಗೂ ಉದ್ಯಮಿ ಯಲ್ಲಾಲಿಂಗ ಪೂಜಾರಿ ಮುಗಟಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಮಸಮಾಜದ ನಿರ್ಮಾಣದ ಕನಸು ಕ೦ಡಿದ್ದ, ಶೋಷಿತ ವರ್ಗಗಳ ಧ್ವನಿಯಾಗಿ ಮತ್ತು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಯುವ ಸಮೂಹಕ್ಕೆ ಬೆಂಬಲವಾಗಿ ಆಶಿರ್ವಾದ ಮಾಡಿದ್ದ ಶ್ರೀಗಳು ಅಗಲಿರುವುದು ತುಂಬಾ ನೋವುಂಟು ಮಾಡಿದೆ. ಕುರಿಗಾಯಿಗಳ ಸಂಕಷ್ಟಕ್ಕೆ ಮಿಡಿದು ರಾಜ್ಯಾದ್ಯ೦ತ ಹೋರಾಟಕ್ಕೆ ಬೆಂಬಲವಾಗಿ ನಿ೦ತು ಕಾಯ್ದೆ ಜಾರಿಗೆ ಶ್ರಮಿಸಿದ ಸ್ವಾಮೀಜಿಗಳ ನಿಧನ ದಿಗ್ಭ್ರಮೆ ಮೂಡಿಸಿದೆ ಎಂದು ತಿಳಿಸಿದ್ದಾರೆ.

