Oplus_0

ನಾಗಾವಿ ಎಕ್ಸಪ್ರೆಸ್ 2026 ಕ್ಯಾಲೆಂಡರ್ ಬಿಡುಗಡೆ | ನಾಗಾವಿ ಎಕ್ಸ್‌ಪ್ರೆಸ್ ದಿನಪತ್ರಿಕೆ ಕಡಿಮೆ ಅವಧಿಯಲ್ಲಿ ಓದುಗರ ವಿಶ್ವಾಸ ಗಳಿಸಿದೆ: ಹಿರೇಮಠ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಸತ್ಯ, ನಿಷ್ಠೆ ಮತ್ತು ನೈತಿಕತೆಯ ಮೇಲೆ ನಿಂತಿರುವ ಪತ್ರಿಕೋದ್ಯಮವೇ ಸಮಾಜದ ನಿಜವಾದ ಧ್ವನಿಯಾಗಬಲ್ಲದು ಈ ನಿಟ್ಟಿನಲ್ಲಿ ನಾಗಾವಿ ಎಕ್ಸ್‌ಪ್ರೆಸ್ ದಿನಪತ್ರಿಕೆ ಕಡಿಮೆ ಅವಧಿಯಲ್ಲಿ ಓದುಗರ ವಿಶ್ವಾಸ ಗಳಿಸಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ಬಜಾಜ್ ಮಿನಿ ಸಭಾಂಗಣದಲ್ಲಿ ನಡೆದ ನಾಗಾವಿ ನಾಡಿನ ಜನರ ಜೀವನಾಡಿ ನಾಗಾವಿ ಎಕ್ಸಪ್ರೆಸ್ ಕನ್ನಡ ದಿನಪತ್ರಿಕೆಯ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳು ಕೇವಲ ಸುದ್ದಿಯನ್ನು ಪ್ರಕಟಿಸುವ ಸಾಧನಗಳಷ್ಟೇ ಅಲ್ಲ, ಸಮಾಜದ ಸಮಸ್ಯೆಗಳನ್ನು ಸರ್ಕಾರ ಮತ್ತು ಆಡಳಿತದ ಗಮನಕ್ಕೆ ತರುವ ಸೇತುವೆಯಾಗಬೇಕು. ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕಿದೆ. ನಿಷ್ಪಕ್ಷಪಾತ ಬರವಣಿಗೆ, ನೈತಿಕತೆ ಮತ್ತು ಜವಾಬ್ದಾರಿಯುತ ವರದಿಗಳಿಂದ ಮಾತ್ರ ಮಾಧ್ಯಮಗಳ ಮೇಲೆ ಜನರ ವಿಶ್ವಾಸ ಉಳಿಯುತ್ತದೆ ಎಂದು ಹೇಳಿದರು.

ಕಾಶಿನಾಥ ಗುತ್ತೇದಾರ ಅವರು ಬರೆದ ಪುಸ್ತಕಗಳ ಮೂಲಕ ತಾಲೂಕು ಮಟ್ಟದ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಸಂಸ್ಕೃತಿಪರ ಚಟುವಟಿಕೆಗಳ ಕುರಿತು ಜನರಿಗೆ ಮಾಹಿತಿ ನೀಡುವ ಪ್ರಯತ್ನ ನಡೆಯುತ್ತಿದೆ. ಇಂತಹ ಕಾರ್ಯಗಳಲ್ಲಿ ಸ್ಥಳೀಯ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಹಿರೇಮಠ ಅವರು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, ಒಂದು ಉತ್ತಮ ಪತ್ರಿಕೆ ಸಮಾಜಕ್ಕೆ ಕನ್ನಡಿ ಇದ್ದಂತೆ. ಸರಳ ಭಾಷೆ, ಸುಂದರ ಶಬ್ದ ಬಳಕೆ, ಗಟ್ಟಿ ವಿಷಯ ಮತ್ತು ಮನಸ್ಸಿಗೆ ತಲುಪುವ ವಿಶ್ಲೇಷಣಾತ್ಮಕ ಬರಹದಿಂದಲೇ ಓದುಗರನ್ನು ಸೆಳೆಯಬಹುದು. ನಿರ್ಭಯವಾಗಿ ಒತ್ತಡಕ್ಕೆ ಒಳಗಾಗದೆ ಸತ್ಯ ಬರೆಯಬೇಕು. ಇಂತಹ ಸತ್ಯನಿಷ್ಠ ಪತ್ರಿಕೋದ್ಯಮಕ್ಕೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ. ಕಾಶಿನಾಥ ಅವರ ಸುದ್ದಿಗಳು ನಾನು ನಿತ್ಯ ಓದುತ್ತೇನೆ ಅವರ ಸುದ್ದಿಗಳು ಮನಮುಟ್ಟುವ ಹಾಗೆ, ಇದ್ದುದು ಇದ್ದ ಹಾಗೆ ಬರೆಯುವ ಕೌಶಲ್ಯ ಅವರಲ್ಲಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಮಾತನಾಡಿ, ಸ್ವಲ್ಪ ಅವಧಿಯಲ್ಲೇ ನಾಗಾವಿ ಎಕ್ಸ್‌ಪ್ರೆಸ್ ದಿನಪತ್ರಿಕೆ ಜನಮನ ಗೆದ್ದಿರುವುದು ಶ್ಲಾಘನೀಯ. ಪ್ರಾದೇಶಿಕ ಸುದ್ದಿಗಳಿಗೆ ಆದ್ಯತೆ ನೀಡಿ ಗ್ರಾಮೀಣ ಧ್ವನಿಯನ್ನು ಎತ್ತಿ ಹಿಡಿಯುವ ಕೆಲಸ ಮುಂದುವರಿಯಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು

ಕ್ಯಾಲೆಂಡರ್ ಬಿಡುಗಡೆಗೆ ಭವ್ಯ ವೇದಿಕೆ, ಭಾರಿ ಸ್ಪಂದನೆ:

ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಸ್ಪಂದನೆ ದೊರಕಿತು. ತೊಗರಿ ಮಂಡಳಿ ಅಧ್ಯಕ್ಷ ಮಹೀಮೂದ್ ಸಾಹೇಬ್ ಅವರು ನಾಗಾವಿ ಎಕ್ಸ್‌ಪ್ರೆಸ್ 2026ನೇ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು. ಸಂಪಾದಕ ಕಾಶಿನಾಥ ಗುತ್ತೇದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದಿವ್ಯಸಾನಿಧ್ಯ ವಹಿಸಿದ್ದ ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನಮಠ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರು ಮಾತನಾಡಿದರು.

ದಿಗ್ಗಾಂವ ಕಂಚಗಾರಹಳ್ಳದ ಶ್ರೀ ಮಲ್ಲಯ್ಯ ಸ್ವಾಮಿ ಸ್ಥಾವರಮಠ, ಪಿಎಲ್‌ ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿಕರ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಡಾ.ಮಹಾಂತಗೌಡ ಪಾಟೀಲ ಭಾಗೋಡಿ ಅವರು ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ರವೀಂದ್ರ ಸಜ್ಜನಶೆಟ್ಟಿ, ಅಯ್ಯಪ್ಪ ರಾಮತೀರ್ಥ, ಮಲ್ಲಿಕಾರ್ಜುನ ಎಮ್ಮೆನೋರ್, ವಿಠಲ್ ನಾಯಕ, ವೀರಣ್ಣ ಯಾರಿ, ಮಲ್ಲಯ್ಯ ಗುತ್ತೇದಾರ, ಸುರೇಶ್ ಗುತ್ತೇದಾರ, ಸಂತೋಷ ಗುತ್ತೇದಾರ, ಬಸವರಾಜ ಪಾಟೀಲ ದಳಪತಿ, ಆನಂದ ಪಾಟೀಲ ನರಿಬೋಳ, ತಮ್ಮಣ್ಣ ಡಿಗ್ಗಿ, ಸೈಯ್ಯದ್ ನಿಜಾಮುದ್ದೀನ್ ಚಿಸ್ತಿ, ದಶರಥ ದೊಡ್ಡಮನಿ, ಅಂಬರೀಷ್ ಮರಗೋಳ, ನಾಗು ಮರಗೋಳ, ವಿಠಲ್ ಕಟ್ಟಿಮನಿ, ಶಾಂತಕುಮಾರ್ ಎಣ್ಣಿ, ಗುಂಡು ಐನಾಪೂರ, ಸಾಬಣ್ಣ ಅಣೆಬಿ, ಪ್ರಭು ಹಲಕರ್ಟಿ, ಶರಣು ಜ್ಯೋತಿ, ದೇವು ಯಾಬಾಳ, ಶಿವಕುಮಾರ ಯಾಗಾಪುರ, ಸಾಬಣ್ಣ ಭರಾಟೆ, ನಾಗರೆಡ್ಡಿ ಗೋಪಸೇನ್, ವಿಜಯಕುಮಾರ್ ಲೊಡ್ಡೆನೋರ, ಭೀಮಾಶಂಕರ ಹೊಳಿಕಟ್ಟಿ, ಸಿದ್ದು ಪೂಜಾರಿ, ಮೌನೇಶ್ ಭಂಕಲಗಿ, ರವಿ ಸೂಲಹಳ್ಳಿ, ಶಾಮರಾಯ ಸಂಗಾವಿ, ಸುಭಾಷ್ ಬೆನಕನಳ್ಳಿ, ಮಹ್ಮದ್ ಇಬ್ರಾಹಿಂ, ಪ್ರಲ್ಹಾದ ವಿಶ್ವಕರ್ಮ, ಗುಂಡು ಮತ್ತಿಮುಡು, ಮಹೇಶ್ ಬಾಳಿ, ವಿಜಯಕುಮಾರ್ ಹರವಾಳ, ದೇವಿಂದ್ರ ಕುಮಸಿ, ಜಗನ್ನಾಥ ಕಾಶಿ, ಭರತ್ ಹುಂಡೇಕಾರ, ಮಲ್ಲಿನಾಥ ಇಟಗಿ, ಪಂಕಜಗೌಡ, ಸುರೇಶ್ ಬೆನಕನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಶರಣು ಗೊಬ್ಬುರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಪ್ಪ ನಂದೂರಕರ್ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು, ಸಿದ್ದಲಿಂಗ ಬಾಳಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!