ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಆಂಗ್ಲ ಶಾಲೆಯಲ್ಲಿ ಮಾಡುತ್ತಿರುವುದು ಖಂಡನೀಯ: ಇಂದೂರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಶೇಷಗಿರಿರಾವ್ ಹಿರಿಯ ಮತ್ತು ಪ್ರೌಢ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಸಿರಿನುಡಿ ಸಂಭ್ರಮ ಎಂಬ ಕಾರ್ಯಕ್ರಮ ಶನಿವಾರ ಆಯೋಜಿಸುವ ಮೂಲಕ ಕನ್ನಡ ಭಾಷೆಗೆ ಅವಮಾನ ಮಾಡಲಾಗುತ್ತಿದೆ ಇದು ಖಂಡನೀಯ ಎಂದು ಲೋಕ ರಕ್ಷಕ್ ಭ್ರಷ್ಟಾಚಾರ ವಿರೋಧಿ ಮಾನವ ಹಕ್ಕುಗಳ ತಾಲೂಕು ಅಧ್ಯಕ್ಷ ಮಲ್ಲು ಇಂದೂರ ತಿಳಿಸಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಂಸ್ಕೃತಿ ಬೆಳೆಸುವುದಕ್ಕೆ ಶ್ರಮಿಸಿದ ಮತ್ತು ಶ್ರಮಿಸುತ್ತಿರುವವರನ್ನು ಗುರುತಿಸಿ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ ನೀಡಿ ಸನ್ಮಾನಿಸಬೇಕು. ಅದನ್ನು ಬಿಟ್ಟು ಆಂಗ್ಲ ಭಾಷೆಯ ಉಪನ್ಯಾಸಕರಿಗೆ ಪ್ರಶಸ್ತಿ ನೀಡುತ್ತಿರುವುದು ಕನ್ನಡ ಭಾಷೆಗೆ ಮಾಡುವ ಅವಮಾನ ಇದನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಡೆಯನ್ನು ಖಂಡಿಸುತ್ತೇವೆ ಹಾಗೂ ಈ ಬಗ್ಗೆ ದೂರು ನೀಡುತ್ತೇವೆ ಎಂದು ಮಲ್ಲು ಇಂದೂರು ಕಮರವಾಡಿ ತಿಳಿಸಿದ್ದಾರೆ.

