Oplus_0

ನಿರ್ದೇಶಕ ಸುನೀಲಕುಮಾರ ದೊಡ್ಡಮನಿ ಅವರಿಗೆ ಸನ್ಮಾನ | ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ: ದೊಡ್ಡಮನಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಸುಧಾರಣೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಡಿಸಿಸಿ ಹಾಗೂ ಅಪೆಕ್ಸ್  ಬ್ಯಾಂಕ್ ನೂತನ ನಿರ್ದೇಶಕ ಸುನೀಲಕುಮಾರ್ ದೊಡ್ಡಮನಿ ಹೇಳಿದರು.

ಪಟ್ಟಣದ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮೂರು ತಿಂಗಳಿಗೊಮ್ಮೆ ಸಹಕಾರ ಸಂಘಗಳ ಅಧ್ಯಕ್ಷರ ಸಭೆ ಕರೆದು ಕುಂದುಕೊರತೆಗಳು ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ರೈತರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಮೂಲಕ ರೈತರಿಗೆ ಸಾಲಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ನಾನು ರೈತ ಕುಟುಂಬದಿಂದ ಬಂದವನಾಗಿದ್ದು, ರೈತರ ಕಷ್ಟ ಮತ್ತು ಸಮಸ್ಯೆಗಳ ಬಗ್ಗೆ ಅರಿವು ಇದೆ. ಹೀಗಾಗಿ ರೈತಪರ ಸೇವೆ ಸಲ್ಲಿಸುವ ಅವಕಾಶ ಬಂದಿರುವುದು ನನ್ನ ಸೌಭಾಗ್ಯ. ಬ್ಯಾಂಕ್ ಗೆ ಯಾವುದೇ ಕೆಟ್ಟ ಹೆಸರು ತರುವ ಕೆಲಸ ಮಾಡದೇ ಬ್ಯಾಂಕ್ ನ ಘನತೆ ಇನ್ನಷ್ಟು ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದು ದೊಡ್ಡಮನಿ ಹೇಳಿದರು.

ಮಾಜಿ ನಿರ್ದೇಶಕ ಬಸವರಾಜ ಪಾಟೀಲ ಹೇರೂರು, ಮಾತನಾಡಿ, ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಸಹಕಾರ ಸಂಘಗಳನ್ನು ಬಲಿಷ್ಠ ಮಾಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶರಣಗೌಡ ಪಾಟೀಲ ಪೇಟಶಿರೂರು, ತಾಪಂ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಭಾಗೋಡಿ, ರೇವಣಸಿದ್ದಪ್ಪ ಸಾತನೂರು, ಮಲ್ಲಿಕಾರ್ಜುನ ಇವಣಿ, ಅಧ್ಯಕ್ಷತೆ ವಹಿಸಿದ್ದ  ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ  ಅವರು ಮಾತನಾಡಿದರು.

ತಾಪಂ ಮಾಜಿ ಸದಸ್ಯ ಬಸವರಾಜ ಹೊಸಳ್ಳಿ, ಉದ್ಯಮಿ ಯಲ್ಲಾಲಿಂಗ ಪೂಜಾರಿ ಮುಗಟಾ, ಜಗನ್ನಾಥ ಪೂಜಾರಿ, ಬಸವರಾಜ ಮದ್ರಕಿ, ರಾಮಲಿಂಗ ಬಾನರ್, ಶರಣು ಡೋಣಗಾಂವ, ದೇವು ಯಾಬಾಳ, ಶಿವರಾಜ್ ರಾವೂರ, ಗುರುನಾಥ್ ದೇಸಾಯಿ, ಈರಣ್ಣ ಈಸಬಾ ಹಲಕರ್ಟಿ, ರಮೇಶಗೌಡ ಕಂಠಿ, ರತನ್ ಕನ್ನಡಗಿ, ರವಿ ಸಾತನೂರು, ಲಕ್ಷ್ಮೀಕಾಂತ ಸಾಲಿ, ವಿಕಾಸ್ ಬಸುದೆ, ಮಲ್ಲಿಕಾರ್ಜುನ ಹಣಿಕೇರಾ, ಪೃಥ್ವಿರಾಜ್ ನಾಮದಾರ, ಅಬ್ದುಲ್ ರಶೀದ್ ದಂಡೋತಿ ಸೇರಿದಂತೆ ಶಾಖಾ ವ್ಯವಸ್ಥಾಪಕ ವಿ. ಬಿ. ಸದ್ಲಾಪೂರ, ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರೀಯಾ, ಸಿಬ್ಬಂದಿಗಳಾದ ಪವನಕುಮಾರ, ಮಹೇಂದ್ರಕುಮಾರ, ಸಿದ್ಧಮ್ಮ, ಜ್ಯೋತಿ ಜಾಧವ, ದಯಾನಂದ ಪಾಟೀಲ ಹಾಜರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!