ಲಾಡ್ಲಾಪೂರ ಎಲ್ಲಾಂಬಿಕಾ ದೇವಿಯ ದೇವಸ್ಥಾನ ಉದ್ಘಾಟನೆ | ಯುವಕರು ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಬದುಕು ಸುಂದರ: ಹಲಕರ್ಟಿ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಯುವಕರು ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಬದುಕು ಸುಂದರವಾಗಿರುತ್ತದೆ ಎಂದು ಹಲಕರ್ಟಿ ಕಟ್ಟಿಮನಿ ಹಿರೇಮಠದ ಅಭಿನವ ಶ್ರೀ ಮುನೀಂದ್ರ ಶಿವಾಚಾರ್ಯ ಹೇಳಿದರು.
ತಾಲೂಕಿನ ಲಾಡ್ಲಾಪೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಎಲ್ಲಾಂಬಿಕಾ ದೇವಿಯ ದೇವಸ್ಥಾನ ಉದ್ಘಾಟನೆ ಹಾಗೂ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಯುವಕರು ದುಶ್ಚಟಗಳಿಂದ ದೂರವಿರಬೇಕು. ಇಲ್ಲವಾದರೆ ಬದುಕು ಕತ್ತಲೆ ಕೋಣೆಯಂತಾಗುತ್ತದೆ. ಗ್ರಾಮಸ್ಥರು ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು. ಅಜ್ಞಾನದಿಂದ ವಿಜ್ಞಾನದ ಕಡೆ ಸಾಗಬೇಕಾದರೆ ಅಕ್ಷರ ಜ್ಞಾನ ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ಧಾನ, ಧರ್ಮ, ಪರೋಪಕಾರ ಮಾಡುವ ಮನಸ್ಥಿತಿ ಇದ್ದವರ ಸಂಸಾರ ಶಿಖರಕ್ಕೆರುತ್ತದೆ. ಜಗತ್ತಿನಲ್ಲಿ ಅತ್ಯಂತ ಸುಂದರ ಬದುಕು ಸಾಗಿಸುತ್ತಿರುವ ನಾವುಗಳು ದೇವರ ಸ್ಮರಣೆ ಅಷ್ಟೇ. ಧಾರ್ಮಿಕ ನಂಬಿಕೆಗಳ ಮೇಲೆ ಬೆಟ್ಟದಷ್ಟು ಭಕ್ತಿ ಇಟ್ಟಿರುವ ಲಾಡ್ಲಾಪುರ ಗ್ರಾಮಸ್ಥರು ಮನಃಶಾಂತಿ, ಪರಸ್ಪರ ಪ್ರೀತಿ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಮಾಜ ಸೇವಕಿ ಶಾಂತಿಯಮ್ಮ ಮಾತನಾಡಿ, ಹೆತ್ತ ತಂದೆ, ತಾಯಿ ಹಾಗೂ ಗುರು ಹಿರಿಯರನ್ನು ಗೌರವಿಸುವುದನ್ನು ನಾವು ಮೊದಲು ಕಲಿಯಬೇಕು. ಸುಸಂಸ್ಕೃತ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಮಕ್ಕಳ ಮೇಲಿನ ಪ್ರೀತಿ ವಿಶ್ವಾಸ ಸಹ ಹೆಚ್ಚಾಗುತ್ತದೆ. ಸಾಧನೆ ಮಾಡದೆ ಹೋದರೆ ಜೀವನ ವ್ಯರ್ಥ ನಮ್ಮ ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸಬೇಕು ಎಂದು ಕಿವಿಮಾತು ಹೇಳಿದರು.
ಅತ್ಯಂತ ಸುಂದರ ಬದುಕಿನಲ್ಲಿ ಸಮಾಜಕ್ಕೆ ಬೆಳಕಾಗಿ ನಿಲ್ಲುವ ವ್ಯಕ್ತಿತ್ವ ನಾವು ಹೊಂದಬೇಕು. ಪೋಷಕರಾದವರು ನಿಮ್ಮ ಮಕ್ಕಳಿಗೆ ಶಿಕ್ಷಣ ಒಂದೇ ಬೆಳಕಾಗಿದೆ. ನಮ್ಮ ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ ಸಹ ಮಕ್ಕಳನ್ನು ಶಿಕ್ಷಣದಿಂದ ವೆಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಮುಖಂಡ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಗ್ರಾಮದ ಮುಖಂಡರಾದ ವಿಶ್ವನಾಥ ಗಂಧಿ, ದೊಡ್ಡಪ್ಪಗೌಡ ಪೊ. ಪಾಟೀಲ, ಈರಣ್ಣ ಎನ್.ಮಲ್ಕಂಡಿ, ಸೋಮಶೇಖರ ಹಲಕರ್ಟಿ, ಮರಲಿಂಗಪ್ಪ ದರಲಿಂಗಪ್ಪ ಚಟ್ಟಿ, ಆನಂದ ಮುಕ್ತೇದಾರ, ಉಮರ್ ಪಟೇಲ್, ಭೀಮರಾಯ ಚೂರಿ, ಸಾಬಣ್ಣ ಕುಂಬಾರಳ್ಳಿ, ಭಾಗಪ್ಪ ನಾಲ್ನೋಡಿ, ಬಾರಿ ದಂಡಬಾ, ಸಾಬಣ್ಣ ಹತ್ತಿಕುಣಿ, ಸಾಬಣ್ಣ ಮುಸ್ಲಾ, ಸಾಯಣ್ಣ ಗೋಡಗ, ಶೇಖಪ್ಪ ಗೊಡಗ, ನಾಗಪ್ಪ ಗೊಡಗ, ದೇವಸ್ಥಾನದ ಅರ್ಚಕ ಶಿವಶರಣಪ್ಪ ದಂಡಬಾ ಸೇರಿದಂತೆ ಇತರರು ಇದ್ದರು.
ವಿದ್ಯಾರ್ಥಿನಿ ಐಶ್ವರ್ಯ ಪ್ರಾರ್ಥನಾ ಗೀತೆ ಹಾಡಿದರು. ಸ್ಥಳೀಯ ಕೆಪಿಎಸ್ಸಿ ಶಾಲೆಯ ವಿದ್ಯಾರ್ಥಿಗಳು ಭರತ್ಯ ನಾಟ್ಯ ಪ್ರದರ್ಶಿಸಿ ವೇದಿಕೆಯ ಗಮನ ಸೆಳೆದರು. ಗ್ರಾಪಂ ಮಾಜಿ ಅಧ್ಯಕ್ಷ ಸಾಬಣ್ಣ ಆನೇಮಿ ಸ್ವಾಗತಿಸಿದರು, ಮುಖಂಡ ಶಾಂತಕುಮಾರ ಎಣ್ಣೆ ನಿರೂಪಿಸಿ, ವಂದಿಸಿದರು.

