Oplus_131072

ಚಿತ್ತಾಪುರ ಅಬಕಾರಿ ಉಪ ನಿರೀಕ್ಷಕರಿಗೆ ಮನವಿ | ಮಾಲಗತ್ತಿ ಗ್ರಾಮದಲ್ಲಿ ಮಧ್ಯ ಮಾರಾಟ ನಿಷೇಧಿಸುವಂತೆ ಗ್ರಾಮಸ್ಥರ ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಮತಕ್ಷೇತ್ರದ ಮಾಲಗತ್ತಿ ಗ್ರಾಮದಲ್ಲಿ ಸಂಪೂರ್ಣವಾಗಿ ಮಧ್ಯ ಮಾರಾಟ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಚಿತ್ತಾಪುರ ಅಬಕಾರಿ ಉಪ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಈಶ್ವರ ಮುಗುಳನಾಗಾಂವ ಮಾತನಾಡಿ, ಕಳೆದ 2019 ರಿಂದ 2022 ವರೆಗೆ ಗ್ರಾಮದಲ್ಲಿ ಸಂಪೂರ್ಣ ಮಧ್ಯ ಮಾರಾಟ ನಿಷೇಧ ಗ್ರಾಮವೆಂದು ಗ್ರಾಮಸ್ಥರು ಸೇರಿ ನಿರ್ಧರಿಸಿದ್ದರಿಂದ ಇಲ್ಲಿಯವರೆಗೆ ಗ್ರಾಮದಲ್ಲಿ ಮಧ್ಯ ಮಾರಾಟ ಸಂಪೂರ್ಣ ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೆ ಗ್ರಾಮದಲ್ಲಿ ಕಿರಾಣಿ ಅಂಗಡಿ, ಹೊಟೇಲ್, ಕೆಲ ಮನೆಗಳಲ್ಲಿ, ಕಾಳ ಸಂತೆಯಲ್ಲಿ  ಮಧ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಸಾರ್ವಜನಿಕರ, ಕುಟುಂಬಗಳ ನೆಮ್ಮದಿ ಹಾಳಾಗುತ್ತಿದೆ. ವಿಶೇಷವಾಗಿ ಯುವಕರು ಕುಡಿತದ ಚಟಕ್ಕೆ ಬಿದ್ದು, ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದರು.

ಬಡ ದುಡಿಯುವ ವರ್ಗದ ಯುವಕರು ಕುಡಿತದ ಚಟಕ್ಕೆ ಬಲಿಯಾಗಿ, ತಾವೂ ದುಡಿದ ಹಣವನ್ನು ಕುಡಿತಕ್ಕೆ ವೆಚ್ಚ ಮಾಡುತ್ತಿರುವುದರಿಂದ ಕುಟುಂಬದ ಮೇಲೆ, ಮಕ್ಕಳ ಮೇಲೆ ಕಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಕುಟುಂಬದ ನೆಮ್ಮದಿ ಹಾಳಾಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸದ ಮೇಲು ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಗ್ರಾಮದ ಎಲ್ಲಾ ಸಮುದಾಯದವರು ಒಂದಾಗಿ, ಮಾಲಗತ್ತಿ ಗ್ರಾಮವನ್ನು ಮಧ್ಯ ಮಾರಾಟ ನಿಷೇದ ಗ್ರಾಮವಾಗಿ ಪರಿವರ್ತಿಸುವ ಮೂಲಕ ಗ್ರಾಮದಲ್ಲಿ ಸಾಮಾಜಿಕ ಕೌಟುಂಬಿಕ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ವಾನುಮತದಿಂದ ಮಧ್ಯ ಮಾರಾಟ ನಿಷೇದ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಅದ್ದರಿಂದ ಗ್ರಾಮಸ್ಥರ ನಿರ್ಣಯಕ್ಕೆ ಬೆಂಬಲವಾಗಿ ನಿಂತು, ಗ್ರಾಮದ ಮನೆ, ಹೊಟೇಲ್, ಕಿರಾಣಿ ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮ್ಮ ನಿರ್ಣಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಹದಿನೈದು ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಿಂಗಣ್ಣ ಮುದಕಪಗೋಳ, ಈರಣ್ಣ ಮದರಿ, ರವಿ ಯರಗೋಳ, ಮಲ್ಲಿಕಾರ್ಜುನ ಸಣಮೋ, ಶಿವಾನಂದ ಅಲ್ಲೂರ, ಸೂರ್ಯಕಾಂತ ನಾಲವಾರ, ಹಣಮಂತ ತಳವಾರ, ಶಿವಮೂರ್ತಿ ಯರಗಲ್, ನಾಗೇಂದ್ರ ಬುರ್ಲಿ, ರಮೇಶ್ ತಳವಾರ, ಸುದರ್ಶನ್ ಎಂಟಿಮನ, ಬಸವರಾಜ ಹಾಲಿನ್, ಭೀಮಾಶಂಕರ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!