Oplus_131072

ಗುರುಪೂರ್ಣಿಮೆ ಪ್ರಯುಕ್ತ ಮಾಲಗತ್ತಿ ಪೂಜ್ಯರಿಗೆ ಗುರು ನಮನ ಸಲ್ಲಿಸಿದ ಭಕ್ತರು, ಗುರು ಜೀವನದ ಅವಿಭಾಜ್ಯ ಅಂಗ: ಚನ್ನಬಸವ ಶರಣರು 

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ತಾಲೂಕಿನ ಮಾಲಗತ್ತಿ ಸುಕ್ಷೇತ್ರದಲ್ಲಿ ಚನ್ನಬಸವ ಶರಣರ ನೇತೃತ್ವದಲ್ಲಿ ಗುರುವಾರ ಗುರುವಂದನಾ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಪೂಜ್ಯರು, ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್, ಮುಖಂಡರಾದ ಮಲ್ಲಿಕಾರ್ಜುನ ಇಟಗಿ, ಧರ್ಮರಾವ್ ಸಣಮೋ, ಶಿವಶರಣ ಬೀರಾಳ, ಸಿದ್ದಪ್ಪ ಆಲೂರು, ಚಂದ್ರಶೇಖರ್ ಜೈನ್, ಬಾಲಪ್ಪ ಪೂಜಾರಿ ಚನ್ನಗೊಂಡ, ಈಶ್ವರ್ ಮುಗುಳನಾಗಾಂವ, ಶರಣಪ್ಪ ಸಣಮೋ, ಕಾಶಿರಾಯ, ದೇವು ವಾಡಿ, ಫಕೀರಯ್ಯ ಸ್ವಾಮಿಗಳು ಗದಗ್, ಶ್ರೀಕಾಂತ್ ಸಣಮೋ, ಶರಣು ಸಾಲಹಳ್ಳಿ ಸೇರಿದಂತೆ ಗ್ರಾಮಸ್ಥರು, ತಾಯಿಂದಿರು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!