ಮಾದಿಗ ದಂಡೋರ ಕರ್ನಾಟಕ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಮಾಪಣ್ಣ ಹದನೂರು ನಿಧನಕ್ಕೆ ಅಯ್ಯಪ್ಪ ರಾಮತೀರ್ಥ ತೀವ್ರ ಸಂತಾಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಾದಿಗ ಸಮುದಾಯ ಹಿರಿಯ ಮುಖಂಡ ಹಾಗೂ ಮಾದಿಗ ದಂಡೋರದ ಕರ್ನಾಟಕ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಮಾಪಣ್ಣ ಹದನೂರು ಅಣ್ಣಾಜಿಯವರು ಇನ್ನಿಲ್ಲ, ಎಂಬ ಸುದ್ದಿ ಕೇಳಿ ನನಗೆ ತುಂಬಾ ಅಘಾತವಾಗಿದೆ ಎಂದು ಮಾದಿಗ ಸಮಾಜದ ಮುಖಂಡ ಹಾಗೂ ಸಮಾಜ ಸೇವಕ ಅಯ್ಯಪ್ಪ ರಾಮತೀರ್ಥ ತೀವ್ರ ಸಂತಾಪ ಸೂಚಿಸಿದ್ದಾರೆ.
ಹೈದರಾಬಾದಿನಲ್ಲಿ ಶನಿವಾರ ನಡೆದ ಗ್ಲೋಬಲ್ ಮಾದಿಗ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ನಾನು, ಅಣ್ಣಾಜಿ ಅವರ ಸಾವಿನ ಸುದ್ದಿ ತಿಳಿದು ಬಹಳ ದುಃಖವಾಯಿತು. ಮಾಪಣ್ಣ ಹದನೂರು ಅಣ್ಣನವರು ಸಮಾಜದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು ಎಸ್ಸಿ. ಒಳ ಮೀಸಲಾತಿ ಹೋರಾಟಕ್ಕಾಗಿ ಇಡೀ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದರು ಎಂದು ಸ್ಮರಿಸಿದರು.
ಅವರ ಜೊತೆ ಆಗಾಗ ನಾನು ಕೂಡ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದೆ. ನನಗೆ ಅವರು ಸ್ಪೂರ್ತಿಯಾಗಿದ್ದರು. ನಮ್ಮ ಭಾಗದ ಮಾದಿಗ ಸಮುದಾಯದ ಹಿರಿಯ ಮುಖಂಡ ಹೋರಾಟಗಾರ ಕಳೆದುಕೊಂಡಿದ್ದು ಮಾದಿಗ ಸಮುದಾಯಕ್ಕೆ ಅಪಾರ ನಷ್ಟವಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಅವರು ಅನಾರೋಗ್ಯದ ಸುದ್ದಿ ತಿಳಿದು ನಾನು ನಮ್ಮ ವಿಧಾನ ಪರಿಷತ್ತು ವಿರೋಧ ಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ರವರು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಹಾಗೂ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಯವರು ಅಣ್ಣಾಜಿಯ ಯೋಗ ಕ್ಷೇಮ ವಿಚಾರಿಸಲು ಮನೆಗೆ ಭೇಟಿ ನೀಡಿದ್ದೆವು.ನನಗೆ ಅದೇ ಅವರ ಕಡೆಯ ಭೇಟಿಯಾಗಿತ್ತು ಎಂದು ತಿಳಿಸಿದ್ದಾರೆ.
ಆಗಾಗ ದೂರವಾಣಿಯಲ್ಲಿ ನನ್ನ ಜೊತೆ ಮಾತನಾಡುತ್ತಿದ್ದ ಅವರು, ಇಷ್ಟು ಬೇಗ ವಿಧಿಯ ಕರೆಗೆ ಓಗೊಟ್ಟರು ಎನ್ನುವುದು ನಾನು ಊಹಿಸಿರಲಿಲ್ಲ.ಅಗಲಿದ ಹಿರಿಯ ಚೇತನಕ್ಕೆ ಆ ಭಗವಂತ ಚಿರಶಾಂತಿಯನ್ನು ದಯಪಾಲಿಸಲಿ ಹಾಗೂ ಅವರ ಕುಟುಂಬ ವರ್ಗಕ್ಕೂ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.