ಒಳ ಮೀಸಲಾತಿ ಕೈಬಿಡುವಂತೆ ಆಗ್ರಹಿಸಿ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮಾಜಗಳ ವತಿಯಿಂದ ಬೆಳಗಾವಿ ಸುವರ್ಣ ಸೌಧದ ಎದುರು ಬೃಹತ್ ಸಮಾವೇಶ
ನಾಗಾವಿ ಎಕ್ಸಪ್ರೆಸ್
ಬೆಳಗಾವಿ: ಒಳ ಮೀಸಲಾತಿ ಕೈಬಿಡುವಂತೆ ಆಗ್ರಹಿಸಿ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮಾಜಗಳ ವತಿಯಿಂದ ಬೆಳಗಾವಿ ಸುವರ್ಣ ಸೌಧದ ಎದುರು ಮಂಗಳವಾರ ಬೃಹತ್ ಸಮಾವೇಶ ನಡೆಯಿತು.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಕೈಬಿಡಬೇಕೆಂದು ಹಾಗೂ ಕರ್ನಾಟಕ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಶ್ರೀ ನಾಗಮೋಹನ್ ದಾಸ್ ಇವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದ್ದು ಎರಡೇ ತಿಂಗಳಲ್ಲಿ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಒಪ್ಪಿಸಲು ಆದೇಶವನ್ನು ನೀಡಿರುತ್ತಾರೆ, ಆದರೆ ಸರ್ವೋಚ್ಚ ನ್ಯಾಯಾಲಯವು ನೀಡಿದ ಆದೇಶದ ಅನುಸಾರ ಆಯೋಗವು (ಎಂಪೆರಿಕಲ್ ಡೇಟಾ) ಪ್ರಾಯೋಗಿಕ ದತ್ತಾಂಶವನ್ನು ಪ್ರತಿ ಮನೆಗೆ ತೆರಳಿ ಪಡೆದುಕೊಳ್ಳಲು ತಿಳಿಸಿರುತ್ತಾರೆ ಅದರಂತೆ ಪ್ರಾಯೋಗಿಕ ದತ್ತಾಂಶ ಮನೆ ಮನೆಗೆ ತೆರಳಿ ಪಡೆಯಬೇಕು ಎಂದು ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಿತ್ತಾಪುರ ಬಂಜಾರ ಸಮಾಜದ ಮುಖಂಡರಾದ ಭೀಮಸಿಂಗ್ ಚವ್ಹಾಣ, ಅರವಿಂದ್ ಚವ್ಹಾಣ, ಚಂದು ಜಾಧವ, ಗೋಪಾಲ ರಾಠೋಡ, ಶಾಮ್ ಪವಾರ, ಸುಭಾಶ್ಚಂದ್ರ ರಾಠೋಡ, ನಾರಾಯಣ ಪವಾರ, ಹೀರು ಬಿ ರಾಠೋಡ, ಜಗದೀಶ್ ಡಿ. ಚವ್ಹಾಣ, ಪ್ರವೀಣ್ ಪವಾರ, ರಾಕೇಶ್ ಪವಾರ, ದೇವಿದಾಸ್ ಚವ್ಹಾಣ, ವಿಜಯಕುಮಾರ್ ಚವ್ಹಾಣ, ರವಿ ಜಾಧವ ಸೇರಿದಂತೆ ಧರ್ಮ ಗುರುಗಳು, ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮಾಜಗಳ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.