Oplus_0

ಪ್ರವಾಹದಲ್ಲಿ ಸಿಲುಕಿದ ನಾಯಿ ಮರಿಗಳನ್ನು ರಕ್ಷಿಸಿ ಮಾನವೀಯತೆ ಮೆರೆದ ಗುತ್ತೇದಾರ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ನಾಲವಾರ ವ್ಯಾಪ್ತಿಯ ಯಾದಗೀರ ಹೈವೇ ರಸ್ತೆಯ ಸಂಕನೂರ ಕ್ರಾಸ್ ಹತ್ತಿರದ ದಿವ್ಯಾ ಡಾಬಾ ನೀರಿನ ದಿಗ್ಬಂಧನಕ್ಕೆ ಒಳಗಾಗಿದೆ. ಇದರಲ್ಲಿ ಸಿಲುಕಿದ್ದ ನಾಯಿ ಮರಿಗಳನ್ನು ರಕ್ಷಿಸಿದ ಡಾಬಾ ಮಾಲಿಕ ರಾಜು ಗುತ್ತೇದಾರ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.

ಮಳೆಗೆ ಡಾಬಾ ಸಂಪೂರ್ಣ ಜಲಾವೃತಗೊಂಡಿದ್ದು, ಡಾಬಾದಲ್ಲಿ ಕಳೆದ ಕೆಲ ದಿನಗಳಿಂದ ನಾಯಿಯೊಂದು ಜನ್ಮ ನೀಡಿದ ಆರೇಳು ಮರಿಗಳು ನೀರಿನಲ್ಲಿ ಮುಳುಗಿ ಹೋಗುತ್ತಿದ್ದ ದೃಶ್ಯವನ್ನು ಗಮನಿಸಿದ ಡಾಬಾ ಮಾಲಿಕ ರಾಜು ಗುತ್ತೇದಾರ ತನ್ನ ಡಾಬಾದಲ್ಲಿನ ಆಹಾರಧಾನ್ಯ ಸೇರಿದಂತೆ ಇತರೆ ವಸ್ತುಗಳು ನಾಶವಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ನಿಯತ್ತಿನ ಪ್ರಾಣಿ ನಾಯಿಗಳನ್ನು ರಕ್ಷಿಸಿ ಅವುಗಳನ್ನು ನೀರಿನಿಂದ ಹೊರತೆಗೆದು ತನ್ನ ವಾಹನದಲ್ಲಿ ಕುಳ್ಳಿರಿಸಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!