Oplus_0

ರಾಜ್ಯ ಮಟ್ಟದ ಕವಿಪೀಠ ಮಹಾ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ, ಸರ್ವಾಧ್ಯಕ್ಷ ಭೃಂಗಿಮಠರ ಪರಿಚಯ

ನಾಗಾವಿ ಎಕ್ಸಪ್ರೆಸ್ 

ವಿಜಯಪುರ: ನಾಗಾವಿ ನಾಡಿನ ದಂಡೋತಿಯ ಮಲ್ಲಿಕಾರ್ಜುನ ಭೃಂಗಿಮಠ ಸರ್ವಾಧ್ಯಕ್ಷರಾದದ್ದಕ್ಕೆ ನಾಗಾವಿ, ನೃಪತುಂಗ, ಕಲ್ಯಾಣ ಕರ್ನಾಟಕಕ್ಕೆ ಹರ್ಷವನ್ನುಂಟು ಮಾಡಿದೆ.

ಕನ್ನಡದ ಪ್ರಥಮ ಗ್ರಂಥ ಕವಿರಾಜಮಾರ್ಗ ಹೀಗೆ ಹಲವಾರು ಪ್ರಥಮಗಳಿಗೆ ಗತಕಾಲದಲ್ಲಿ ನಮ್ಮ ನಾಡು ಪ್ರಸಿದ್ಧ ಈಗ ಮತ್ತೆ ಧಾರವಾಡದಲ್ಲಿ ಪ್ರಥಮ ರಾಜ್ಯ ಮಟ್ಟದ ಕವಿಪೀಠ ಮಹಾಸಮ್ಮೇನದ ಪ್ರಥಮ ಸರ್ವಾಧ್ಯಕ್ಷ ಎಂಬ ಹೆಗ್ಗಳಿಕೆ ನಾಗಾವಿ ನಾಡಿಗೆ ಬಂದಿದೆ.

ಸರ್ವಾಧ್ಯಕ್ಷರಾದ ಭೃಂಗಿಮಠ ಅವರು ದಂಡೋತಿಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣವನ್ನು ಚಿತ್ತಾಪುರದ ಸರಕಾರಿ ಪ್ರೌಢ ಶಾಲೆಯಲ್ಲಿ‌ 1988 ರಲ್ಲಿ ಮುಗಿಸಿದರು. ಮುಂದೆ ಎಂಎಸ್ಐ ಕಾಲೇಜಲ್ಲಿ‌ ಬಿ.ಎ. ಪದವಿ‌ ಆಭ್ಯಾಸ‌ಗೈದರು. ಎಸ್ಎಸ್ಎಲ್ ಕಾನೂನು‌ ಮಹಾವಿದ್ಯಾಲಯದಲ್ಲಿ ಎಲ್ಎಲ್.ಬಿ ಓದಿ ಕಲಬುರಗಿ ವಿ.ವಿ.ಯ ಕಾನೂನು‌ ಪದವಿ ಪಡೆದರು. ಎಲ್.ಎಲ್.ಎಮ್ ಪದವಿಯನ್ನು‌ ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದರು.

ತಾಯಿ ಬಸಲಿಂಗಮ್ಮ ಗದಗಯ್ಯ ಭೃಂಗಿಮಠ ಇವರ ಮಗನಾಗಿ ಜನಿಸಿದ ಇವರಿಗೆ ಇಬ್ಬರು ಅಕ್ಕಂದಿರು, ಇಬ್ಬರು ತಂಗಿಯರು, ಒಬ್ನ ತಮ್ಮ ಇದ್ದಾರೆ.

ವಿದ್ಯಾರ್ಥಿ ದಿಸೆಯಿಂದಲೂ ಹೋರಾಟದ ಹಾದಿ ಹಿಡಿದ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ದಿನಕ್ಕೆ ಒಂದಿಲ್ಲ ಒಂದು‌ ಕವಿತೆ, ಲೇಖನ ಬರೆಯುವ ಅಥವಾ ವಿವಿಧ ಸಾಧಕರ ಮನೆಯ ಬಾಗಿಲಿಗೆ ಹೋಗಿ ಗೌರವಿಸುವ ಇವರು ಸಾವಿರಾರು ಕವಿತೆಗಳ, ನೂರಾರು ಬಿಡಿ ಲೇಖನಗಳ, ಕೆಲವು ಅಂಕಣಗಳ ಜನಕರಾಗಿದ್ದಾರೆ.

ಚಿತ್ತಾಪುರ ಪಟ್ಟಣದಿಂದ ಏಳು ಕಿ.ಮೀ.ದೂರಲ್ಲಿರುವ ದಂಡೋತಿ ಗ್ರಾಮದಲ್ಲಿ ಈ ಹಿಂದೆ ಅರ್ಜುನಪ್ಪ ಮಹಾರಾಜ ಎಂಬ ಜಾನಪದ ಕವಿಗಳು ಆಗಿ ಹೋಗಿದ್ದು ಸದಾ ನೆನಪಿಸುವ ಇವರು ಸ್ನೇಹ ಜೀವಿಯಾಗಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಇವರಿಗೆ ಹಲವಾರು ಪ್ರಶಸ್ತಿಗಳು ಗುರುತಿಸಿಕೊಂಡು ಬಂದಿವೆ. ಧಾರವಾಡದಲ್ಲಿ ಇದೇ 24 ರಂದು ನಡೆಯಲಿರುವ ಪ್ರಥಮ‌ ರಾಜ್ಯಮಟ್ಟದ ಕವಿಪೀಠ ಮಹಾ ಸಮ್ಮೇಳನದ ಸರ್ವಾಧ್ಯಕ್ಷರಾಗುವ ಮಟ್ಟಿಗೆ ಬೆಳೆದು ನಿಂತ ನಾಗಾವಿ ನಾಡಿನ ಈ ಸಿರಿ ನಮಗೆ ಗರಿ.

ಕಲಬುರಗಿ- ವಿಜಯಪುರ ಎರಡೂ ಕಡೆ ವಕಾಲತ್ತು ಮಾಡುವ ಇವರು ವಕಾಲತ್ತಿನಲ್ಲಿ ಛಾಪು ಮೂಡಿಸಿ ಜನರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕವಿ ಬೇಂದ್ರೆ ಅವರ ನೆಲ್ಲಕ್ಕೂ ಸಿದ್ದೇಶ್ವರ ಶ್ರೀಗಳ ವಿಜಯಪುರಕ್ಕೂ, ನಾಗಾವಿ, ನೃಪತುಂಗ, ಕಲ್ಯಾಣ ಕರ್ನಾಟಕಕ್ಕೂ ಉತ್ತಮ ಸಾಹಿತ್ಯ ಸಂಬಂಧದ ಬೆಸುಗೆ ಬೆಸೆದ ಭೃಂಗಿಮಠ ಅವರೊಬ್ಬ ಸ್ನೇಹ ಜೀವಿಯಾಗಿದ್ದಾರೆ.

ಕಲಬುರಗಿಯ ಹೈಕೋರ್ಟ ಪೀಠ ಸ್ಥಾಪನೆಯ ಚಳುವಳಿಯಲ್ಲಿ ಅಮರಣ ಉಪವಾಸ ಕುಳಿತ ಪ್ರಥಮ ವ್ಯಕ್ತಿಯೂ ಇವರಾಗಿದ್ದಾರೆ. ವಿಜಯಪುರದ ಬ್ರಾಡ್ಗೇಜ್ ಹೋರಾಟಕ್ಕೆ ಧ್ವನಿಯಾಗಿ ತಮ್ಮ ಸಾಹಿತ್ಯ, ಸಾಮಾಜಿಕ ಸೇವೆಯ ಮೂಲಕ ಹೋರಾಟದ ಕಿಚ್ಚು ಹೊತ್ತಿಸಿ ಜನಮನದ ಧನಿಯಾಹಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!