ರಟಕಲ್ ಸರ್ಕಾರಿ ಪ್ರೌಢ ಶಾಲೆಯ ಬೇಜವಾಬ್ದಾರಿ ಮುಖ್ಯ ಶಿಕ್ಷಕರನ್ನು ಹಾಗೂ ಬಿಸಿಯೂಟ ಸಿಬ್ಬಂದಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಿಂಚಿನ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ರಟಕಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸರಿಯಾದ ಸಮಯಕ್ಕೆ ಮಧ್ಯಾಹ್ನದ ಬಿಸಿಯೂಟ ಹಾಕದ ಹಾಗೂ ಹುಳ, ಕಸಕಡ್ಡಿಯಿಂದ ಕೂಡಿದ ಬಿಸಿಯೂಟ ಹಾಕುತ್ತಿದ್ದ ಬಿಸಿಯೂಟ ಸಿಬ್ಬಂದಿಗಳನ್ನು ಹಾಗೂ ದಿನನಿತ್ಯ ಶಾಲೆಗೆ ಸರಿಯಾದ ಸಮಯಕ್ಕೆ ಬಾರದ ಬೇಜವಾಬ್ದಾರಿ ಮುಖ್ಯಶಿಕ್ಷಕರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮದ ಮುಖಂಡರು ಹಾಗೂ ಶಾಲಾ ಮಕ್ಕಳು ಒಗ್ಗೂಡಿ ಮಂಗಳವಾರ ಮಿಂಚಿನ ಪ್ರತಿಭಟನೆ ನಡೆಸಿದರು.
ಮುಖ್ಯಶಿಕ್ಷಕರು ಹಾಗೂ ಬಿಸಿಯೂಟ ಸಿಬ್ಬಂದಿಗಳ ನಡುವೆ ಜಗಳದಿಂದಾಗಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿಲ್ಲ ಹೀಗಾಗಿ ಸರ್ಕಾರದ ಯೋಜನೆಯಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ ರೈತ ಸೇನೆ ತಾಲೂಕ ಅಧ್ಯಕ್ಷ ವೀರಣ್ಣ ಗಂಗಾಣಿ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದೆ ಎಂದು ಪರೀಕ್ಷೆಗೆ ಕೂಡಿಸದ ಕಾರಣ ಆ ಮಕ್ಕಳು ಸರ್ಕಾರದ ನಿಯಮದಂತೆ ಮತ್ತೇ ಪರೀಕ್ಷೆ ಕೂಡಲು ಆಗಮಿಸಿದ ಮಕ್ಕಳಿಂದ ಫೀಸ್ ಎಂದು ಹೇಳುವ ಮೂಲಕ ಸಾವಿರಾರು ರೂಪಾಯಿ ಹಣ ವಸೂಲಿ ಮಾಡಿರುತ್ತಾರೆ. ಇದಕ್ಕೆ ಸಾಕ್ಷಿ ಫೋನ್ ಪೇ ಮತ್ತು ಕೈಯಿಂದ ತೆಗೆದುಕೊಂಡ ಹಣವೇ ಸಾಕ್ಷಿ ಮತ್ತು ಮಕ್ಕಳು ಪೋಷಕರೇ ಸಾಕ್ಷಿ. ಮುಖ್ಯಶಿಕ್ಷಕರು ದಿನ ನಿತ್ಯ ಮಕ್ಕಳು ಶಾಲೆಗೆ ಬಾರದೆ ಇರುವುದರಿಂದ ಫೀಸ್ ಕಟ್ಟಲು ಮಕ್ಕಳು ಪರದಾಡಿದರು. ಈ ಕುರಿತು ಫೋನಿನ ಮುಖಾಂತರ ಮಾತನಾಡಿದರೆ ಕಲಬುರಗಿಗೆ ಬಂದು ಪೀಸು ಕಟ್ಟಿ ಎಂದು ಹೇಳಿರುತ್ತಾರೆ. ಇದು ಸರ್ಕಾರಿ ಶಾಲೆಯಾ ಅಥವಾ ಅವರ ಖಾಸಗಿ ಶಾಲೆಯಾ ಅರ್ಥವಾಗ್ತಾ ಇಲ್ಲ ಮತ್ತು ಸಹ ಶಿಕ್ಷಕರು ಬಂದಿರುವುದಿಲ್ಲ. ಇನ್ನೂ ಬಹಳ ವಿದ್ಯಾರ್ಥಿಗಳು ಪರೀಕ್ಷೆಗೆ ಕೂಡುವವರಿದ್ದಾರೆ. ಆದರೆ ಮಕ್ಕಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಿ ಇವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಪರೀಕ್ಷೆಗೆ ಕೂಡದೆ ವಂಚಿತರಾದ ಮಕ್ಕಳಿಗೆ ಮತ್ತೇ ಅನುವು ಮಾಡಿಕೊಡಬೇಕು. ಹಲವು ಬಾರಿ ಫೋನ್ ಮುಖಾಂತರ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಶಿಕ್ಷಕರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಮಕ್ಕಳು ಮತ್ತು ಪೋಷಕರನ್ನು ಒಗ್ಗೂಡಿಸಿ ರಾಜ್ಯ ಹೆದ್ದಾರಿ ತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ತಾಲೂಕು ರೈತ ಸೇನೆ ಎಚ್ಚರಿಸಿದೆ.
ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಭಾಗ ಅದುವೇ ಕಲಬುರಗಿ, ಕಲಬುರಗಿ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಅದುವೇ ಚಿಂಚೋಳಿ ತಾಲೂಕು. ಇಂತಹ ತಾಲೂಕಿನಲ್ಲಿ ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಫೇಲಾದ ಕಾರಣ ಇಂತಹ ಬೇಜವಾಬ್ದಾರಿ ಶಿಕ್ಷಕರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಬಿಜೆಪಿ ಒಬಿಸಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮರಗುತ್ತಿ ಒತ್ತಾಯಿಸಿದ್ದಾರೆ.
ರಟಕಲ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಿಸಿ ಊಟದ ಸಮಸ್ಯೆಯಿಂದ ಮಕ್ಕಳು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮುಖ್ಯಶಿಕ್ಷಕರು ಪ್ರತಿನಿತ್ಯ ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲ, ಸರಿಯಾದ ಸಮಯಕ್ಕೆ ಬಿಸಿ ಊಟ ನೀಡುವುದಿಲ್ಲ ಮತ್ತು ನೀಡಿದಾಗ ಊಟದಲ್ಲಿ ಹುಳ, ನುಸಿ, ನೋಣ, ಜಿಟ್ಟಿ ಬಂದಿವೆ ಇಂತಹ ಉಣ್ಣಲು ಯೋಗ್ಯವಲ್ಲದ ಊಟ ಊಟ ಮಾಡು ಎಂದು ಹೇಳುತ್ತಾರೆ ಈ ಕುರಿತು ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಗಮನಕ್ಕೆ ತರಲಾಗಿದೆ ನಾಳೆ ಶಾಲೆಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ ಎಂದು ವೀರಣ್ಣ ಗಂಗಾಣಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಬಡಾ, ಕಲ್ಯಾಣರಾವ ತಳಕೇರಿ, ಬಸ್ಸು ತಳವಾರ, ವಿರೇಶ್ ಬುಕ್ಕಟಗಿ, ಲಲಿತಾಬಾಯಿ ವಾಡೇದ್, ವಿಜಯಕುಮಾರ್ ಜಡಗಿ, ಶರಣು ಸೀಗಿ, ಶಂಕರ ಚೋಕಾ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

