ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಭಾಜನರಾದ ಹಾರಕೂಡ ಶ್ರೀಗಳಿಗೆ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿಂಚೋಳಿ: ಕರ್ನಾಟಕ ಸರ್ಕಾರ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಭಾಜನರಾಗಿರುವ ಹಾರಕೂಡ ಪೂಜ್ಯ ಶ್ರೀ ಡಾ.ಚನ್ನವೀರ ಶಿವಾಚಾರ್ಯರಿಗೆ ಚಿಂಚೋಳಿಯಲ್ಲಿ ನಡೆದ ಗುರು ಪೂರ್ಣಿಮೆಯಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ವತಿಯಿಂದ ಪೂಜ್ಯರಿಗೆ ಅಭಿನಂದನಾ ಪತ್ರ, ಸ್ಮರಣಿಕೆ ನೀಡಿ ಸತ್ಕರಿಸಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯಕ್ಕೆ ಹಾರಕೂಡ ಮಠದ ಸೇವೆ ಅಮೂಲ್ಯವಾಗಿದೆ. ಶ್ರೀ ಮಠದ ವತಿಯಿಂದ ಹಲವಾರು ಮೌಲಿಕ ಕನ್ನಡ ಗ್ರಂಥಗಳು ಹೊರಬಂದಿವೆ. ಶ್ರೀಗಳ ಕನ್ನಡ ಸೇವೆ ಗುರುತಿಸಿ, ಜಿ.ಪಿ.ರಾಜರಾತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ನೀಡಿರುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಾ.ಮಲ್ಲಿಕಾರ್ಜುನ ಪಾಲಮೂರ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಐನೋಳ್ಳಿ, ಕದಳಿ ವೇದಿಕೆಯ ತಾಲೂಕು ಅಧ್ಯಕ್ಷೆ ಗೀತಾರಾಣಿ ಐನೋಳ್ಳಿ, ಶಾಮಲಾ ಮಠಪತಿ, ವೀರೇಶ ಎಂಪಳ್ಳಿ, ಸುಭಾಷ್ ಸೀಳಿನ, ವೀರಣ್ಣ ಗಂಗಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
