ರಾವೂರ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ | ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ: ಶಂಕರ ಡಾಂಗೆ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಬದುಕಲು ಇರುವುದೊಂದೇ ಭೂಮಿ ಇಂತಹ ಭೂಮಿಯಲ್ಲಿ ನಾವು ಉಸಿರಾಡಲು ಪರಿಸರವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಚಿತ್ತಾಪುರ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರ ಡಾಂಗೆ ಹೇಳಿದರು.

ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಏನ್. ಸಿ. ಸಿ ಘಟಕದ ಹಾಗೂ ಇಕೋ ಕ್ಲಬ್ ವತಿಯಿಂದ ನಡೆದ ವಿಶ್ವ ಪರಿಸರ ದಿನದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಪರಿಸರ ಮಾನವರ ಸ್ವಾರ್ಥಕ್ಕಾಗಿ ನಾಶವಾಗುತ್ತಿದೆ. ಹಸಿರು ವಾತಾವರಣ ಮಾಯವಾಗುತ್ತಿದೆ. ಹಲವು ರೀತಿಯ ಮಾಲಿನ್ಯಗಳು ಪರಿಸರವನ್ನು ಹಾಳುಮಾಡುತ್ತೀವೆ. ಇಂತಹ ಅನೇಕ ಸವಾಲುಗಳನ್ನು ಎದುರಿಸಬೇಕಾದರೆ ಪರಿಸರದಲ್ಲಿ ಮರಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು.

ಪ್ರತಿಯೊಬ್ಬರೂ ಕನಿಷ್ಠ ಇಂದು ಮರವಾದರೂ ಬೆಳೆಸಬೇಕು. ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಹೆಚ್ಚಿನ ಜಾಗೃತಿಯನ್ನು ಮಕ್ಕಳಿಗೆ ಮತ್ತು ಜನಸಮುದಾಯಕ್ಕೆ ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.

ಶಿಕ್ಷಕ ಸಿದ್ದಲಿಂಗ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನೂರು ಸಸಿಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಹಾಗೆಯೇ ಮನೆಯಲ್ಲಿ ಸಸಿ ನೆಡಲು ಜಾಗವಿರುವ ಮಕ್ಕಳಿಗೆ ಹಣ್ಣಿನ ಸಸಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರಾವೂರ ಸಿಆರ್ ಪಿ ಅಂಬಾದಾಸ್, ಮುಖ್ಯಗುರು ವಿದ್ಯಾಧರ ಖಂಡಾಳ, ದೈಹಿಕ ಶಿಕ್ಷಕ ಶಿವಕುಮಾರ್ ಸರಡಗಿ, ಇಕೋ ಕ್ಲಬ್ ಸಂಯೋಜಕಿ ಸುಗುಣಾ ಕೊಳಕುರ, ಎನ್ ಸಿಸಿ ಅಧಿಕಾರಿ ಶರಣು ಸಜ್ಜನ್, ಸೋಮಶೇಖರ್ ಬಾಳಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಈರಣ್ಣ ಹಳ್ಳಿ, ರೇಖಾ ಪಾಟೀಲ್, ನಾಗವೇಣಿ ಫರತಾಬಾದ ಸೇರಿದಂತೆ ಏನ್ ಸಿಸಿ ಕೆಡೆಟ್ ಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!