Oplus_131072

ರಾವೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವರಾಜ್ ಅಳ್ಳೋಳ್ಳಿ, ಉಪಾಧ್ಯಕ್ಷರಾಗಿ ಬಸವರಾಜ್ ಹಾಲಿನೂರ್ ಅವಿರೋಧ ಆಯ್ಕೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಮತಕ್ಷೇತ್ರದ ರಾವೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವರಾಜ್ ಅಳೋಳ್ಳಿ, ಉಪಾಧ್ಯಕ್ಷರಾಗಿ ಬಸವರಾಜ್ ಹಾಲಿನೂರ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.

ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಸುರೇಶ್ ಬೆಳ್ಳಗೋಳ, ದತ್ತಾತ್ರೇಯ ಕಾಳೇಕರ್, ಭೀಮಣ್ಣ ಕೆಸಬಳ್ಳಿ,  ಸಿದ್ದು ಗೋಗಿ, ಸರಸ್ವತಿ ಬಿ ಜಡಿ, ಮಲ್ಲಮ್ಮ ಯರಗಲ್, ಬಾಹುಬಲಿ ಜೈನ್, ವಿಜಯ್ ಕುಮಾರ್ ಗುದಗಲ್, ರಾಯಪ್ಪ ತಳವಾರ್ ಯರಗಲ್, ಹನುಮಂತರಾಯ ವಂತಟ್ಟಿ ಗಾಂಧಿನಗರ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮುಖಂಡರಾದ ಚೆನ್ನಣ್ಣ ಬಾಳಿ, ಡಾ. ಗುಂಡಣ್ಣ ಬಾಳಿ, ಅಣ್ಣಾರಾವ ಬಾಳಿ, ಗುರುನಾಥ್ ಗುದ್ಗಲ್ ಗೋವಿಂದ ಸಾಗರ್, ತಿಪ್ಪಣ್ಣ ವಗ್ಗರ್ ಮಾಳಪ್ಪ ಪೂಜಾರಿ ಕೊಳ್ಳಿ, ಶರಣು ಜ್ಯೋತಿ, ಸಾಹೇಬಗೌಡ ತಳವಾರ, ದೇವೇಂದ್ರ ತಳವಾರ, ಬಸವರಾಜ್ ಮಡ್ಡಿ, ರಾಮು ಸಕ್ಕರೆ, ಶಿವಲಿಂಗ ಕರ್ಜಗಿ, ಬಸವರಾಜ ಕೆರಳ್ಳಿ, ಮಲ್ಲಿಕಾರ್ಜುನ ಮುತ್ತಗಿ, ಶರಣಪ್ಪ ಸಣ್ಣಮೋ ಮಾಲಗತ್ತಿ, ಈಶ್ವರ್ ದೊಡ್ಡಮನಿ, ಬಸವರಾಜ್ ಅಳ್ಳೋಳ್ಳಿ, ಪುಂಡಲಿಕ್ ಕೇಸ್, ಬಳ್ಳಿ ರಾಜು ಫರ್ಥಾಬಾದ್, ವೆಂಕಣ್ಣ, ಗೋವಿಂದ ಜಡಿ, ಉಮಾಕಾಂತ್ ಮಠಪತಿ ಸೇರಿದಂತೆ ಇತರರು ಇದ್ದರು. ಫಲಿತಾಂಶ ಹೊರಬೀಳುತ್ತಿದ್ದಂತೆ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!