ಸನ್ಮಾನ ಹಾಗೂ ಪ್ರೋತ್ಸಾಹದಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚಲಿದೆ: ನರಸಿಂಹ ಕುಲಕರ್ಣಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸನ್ಮಾನ ಹಾಗೂ ಪ್ರೋತ್ಸಾಹದಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ಅವರನ್ನು ಸಾಧನೆಯ ಹಾದಿಯತ್ತ ಕೊಂಡೊಯ್ಯುತ್ತದೆ ಎಂದು ಭಾರತೀಯ ಮಾನವ ಹಕ್ಕು ಪರಿಷತ್ ಜಿಲ್ಲಾಧ್ಯಕ್ಷ ನರಸಿಂಹ ಕುಲಕರ್ಣಿ ಹೇಳಿದರು.
ಪಟ್ಟಣದ ನಾಗಾವಿ ಗೋ ಶಾಲೆಯಲ್ಲಿ ಭಾರತೀಯ ಮಾನವ ಹಕ್ಕು ಪರಿಷತ್ ಮತ್ತು ನಾಗಾವಿ ಸೇವಾ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿ ಹಾಗೂ 5ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ತಾಲೂಕಿನಲ್ಲಿಯೇ ಅತ್ಯಧಿಕ ಅಂಕ ಪಡೆದ ಸರ್ಕಾರಿ ಪ್ರೌಢಶಾಲೆಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ತಲುಪಬೇಕು. ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ಮುಖ್ಯ. ಸ್ವಯಂ ಛಲ ಮತ್ತು ಗುರಿ ಇದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಿದ್ದರಾಜ ಹೂಗಾರ, ಶಿವಶರಣಪ್ಪ ಸುಲೇಗಾಂವ್, ವೀರಸಂಗಪ್ಪ ಸುಲೇಗಾಂವ್, ಯಮನಪ್ಪ ಬೋಸಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ರಕ್ಷಿತಾ, ಸುಚಿತ್ರಾ ಪ್ರಾರ್ಥಿಸಿದರು, ಸಂಜನಾ ನಾಟೀಕಾರ ಸ್ವಾಗತಿಸಿದರು, ಸಂತೋಷ ಹಾವೇರಿ ನಿರೂಪಿಸಿದರು.

