Oplus_0

ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧದ ಲಂಚದ ಆರೋಪಗಳು ಸತ್ಯಕ್ಕೆ ದೂರ: ಮಾರುತಿ ಹುಳಗೋಳಕರ್

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ವಿರುದ್ಧದ ಲಂಚದ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಮಾರುತಿ ಹುಳಗೋಳಕರ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ತಿಮ್ಮಾಪುರ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಬಿಜೆಪಿಯಿಂದ ನಡೆಯುತ್ತಿರುವ ಹುನ್ನಾರವಾಗಿದೆ, ಸಚಿವರ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವರು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಅವರ ವಿರುದ್ಧದ ಆರೋಪಗಳು ಆಧಾರರಹಿತ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ನಿವಾಸಿ ಲಕ್ಷ್ಮೀನಾರಾಯಣ ಎಂಬುವವರು ಮೈಕ್ರೋ ಬ್ರಿವರ್ ಮ್ಯಾನಿಫ್ಯಾಕ್ಚರ್ ಯೂನಿಟ್ ಪ್ರಾರಂಭಿಸಲು ಸಲುವಾಗಿ ಪರವಾನಗಿ ಪಡೆಯಲು ಅಬಕಾರಿ ಅಧಿಕಾರಿ ಡಿ.ಸಿ ಜಗದೀಶ್ ನಾಯ್ಕ್, ಸೂಪರಡೇಂಟ್ ತಮ್ಮಣ್ಣ ರವರನ್ನು ಸಂಪರ್ಕಿಸಿ ವಿಚಾರಿಸಿದಾಗ ಸದರಿಯವರುಗಳು ಪರವಾನಿಗೆಗೆ ಸುಮಾರು ರೂ 1.50 ಕೋಟಿ ಆಗುತ್ತೆ ಎಂದು ತಿಳಿಸಿ ನಂತರ ಅದರಲ್ಲಿ ಯಾರ್ ಯಾರಿಗೆ ಎಷ್ಟು ಪಾಲು ಎಂದು ವಿಚಾರಿಸದ ಸಂದರ್ಭದಲ್ಲಿ ಲಂಚ ಪಡೆಯುವ ಆಸೆಯಿಂದ ದುರದ್ದೇಶ ಪೂರಕವಾಗಿ ತಪ್ಪಾಗಿ ಸಚಿವರ ಮತ್ತು ಅವರ ಪುತ್ರನ ಹೆಸರನ್ನು ಅನಾವಶ್ಯಕವಾಗಿ ಎಳೆದು ತಂದು ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!