ಗುರು ಪೂರ್ಣಿಮಾ ದಿನದ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ | ಮುಖ್ಯಗುರು ವಿಜಯಕುಮಾರ್ ಭಟ್ ಅವರ ನಿಸ್ವಾರ್ಥ ಸೇವೆ ಶ್ಲಾಘನೀಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದೇವಜಿ ನಾಯಕ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇತಿಹಾಸದಲ್ಲಿ ವಿಶೇಷವಾದ ದಿನ ಎಂದರು ತಪ್ಪಾಗದು ಗುರು ಪೂರ್ಣಿಮೆಯ ನಿಮಿತ್ತ ಗ್ರಾಮದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಶಾಲೆಯ ಮುಖ್ಯ ಗುರು ವಿಜಯಕುಮಾರ್ ಹರಿಭಟ್ ಅವರು ಯಾವುದೇ ನಿರೀಕ್ಷೆಯಿಲ್ಲದೆ, ತಮ್ಮ ಸ್ವಂತ ಹಣದಿಂದ ಶಾಲೆಗೆ ಬಣ್ಣ ಬಳಿಸಿ, ಆಕರ್ಷಕ ಗೋಡೆ ಬರಹಗಳನ್ನು ಮಾಡಿಸಿ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಊರಿನ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಬ್ಬ ನಿಜವಾದ ಶಿಕ್ಷಕನು ಪಾಠ ಹೇಳುವುದಷ್ಟೇ ಅಲ್ಲ, ಶಾಲೆಯನ್ನು ಮಕ್ಕಳಿಗೆ ಪ್ರೇರಣೆಯ ಕೇಂದ್ರವನ್ನಾಗಿ ರೂಪಿಸುತ್ತಾನೆ ಎಂಬುದನ್ನು ಅವರು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಈ ಸೇವಾ ಮನೋಭಾವ, ಶಾಲೆಯ ಮೇಲಿನ ಪ್ರೀತಿ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಇರುವ ಕಾಳಜಿ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮದ ಎಲ್ಲರ ಪರವಾಗಿ ಅವರ ಈ ನಿಸ್ವಾರ್ಥ ಸೇವೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ. ಅವರು ಸದಾ ಆರೋಗ್ಯದಿಂದ, ಸಂತೋಷದಿಂದ ಇನ್ನಷ್ಟು ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇವೆ. ಶಾಲೆ ಸುಂದರವಾದರೆ ಮಕ್ಕಳ ಮನಸ್ಸು ಅರಳುತ್ತದೆ, ಉತ್ತಮ ನಾಯಕತ್ವ ಇದ್ದರೆ ಶಾಲೆಯ ಭವಿಷ್ಯ ಬೆಳಗುತ್ತದೆ. ಎನ್ನುವುದಕ್ಕೆ ಮುಖ್ಯ ಗುರುಗಳೇ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಎಸ್ಡಿಎಂಸಿ ಅಧ್ಯಕ್ಷ ಕುಮಾರ ಜಾಧವ, ಪ್ರಮುಖರಾದ ಢಾಕು ರಾಠೋಡ, ಹೀರಾ ಮಹಾರಾಜ್, ಪರಶುರಾಮ ರಾಠೋಡ, ಪ್ರಭು ರಾಠೋಡ, ಸೋಮ್ಲಾ ಜಾಧವ, ವಿಠಲ, ಬಾಬು, ನಿಲೇಶ್, ಅನೀಲ್ ಜಾಧವ, ಬಸವರಾಜ ಪಾಟೀಲ ಹಾಗೂ ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
“ದೇವಾಪುರ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ವಿಜಯಕುಮಾರ್ ಭಟ್ ರವರ ನಿಸ್ವಾರ್ಥ ಸೇವೆ ಬಹುಶ ನಮ್ಮ ಕಲಬುರಗಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದ್ದಾರೆ. ಇಂತಹ ಶಿಕ್ಷಕರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಕೊಟ್ಟರೂ ಕಡಿಮೆ ಇದರಿಂದ ಪ್ರಶಸ್ತಿಗೆ ಹೆಚ್ಚು ಗೌರವ ಲಭಿಸಲಿದೆ. ಸರ್ಕಾರಿ ಶಾಲಾ ಮಕ್ಕಳ ಅಭಿವೃದ್ಧಿಗೆ ಇಂತಹ ಶಿಕ್ಷಕರ ಸೇವೆ ಅತ್ಯಗತ್ಯವಿದೆ”.-ಭೀಮಾಶಂಕರ ಇಂದೂರ ಕಮರವಾಡಿ.

