ವಿಶ್ವಶಾಂತಿಗಾಗಿ ಹಾಗೂ ಸನ್ನತ್ತಿಯ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಹಾಗೂ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೈಗೊಂಡ ಸನ್ನತಿ ಪಂಚಶೀಲ ಪಾದಯಾತ್ರೆ 35 ನೇ ದಿನಕ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಶ್ವಶಾಂತಿಗಾಗಿ ಹಾಗೂ ಸನ್ನತ್ತಿಯ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಹಾಗೂ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಬಿಕ್ಕು ಹಾಗೂ ಬಿಕ್ಕುಣಿ ಸಂಘ, ಸನ್ನತಿ ಪಂಚಶೀಲ ಪಾದಯಾತ್ರೆ ಸಂಘಟನಾ ಸಮಿತಿ, ರಾಜ್ಯದ ಸಮಸ್ತ ದಲಿತ ಸಂಘಟನೆಗಳು, ಎಲ್ಲಾ ಬೌದ್ಧ ಸಂಘ ಸಂಸ್ಥೆಗಳು ಮತ್ತು ಬುದ್ಧ ವಿಹಾರ ಸಮಿತಿಗಳು ಇವರ ಸಹಯೋಗದಲ್ಲಿ ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತ್ತಿಯಿಂದ ಬೆಂಗಳೂರು ವಿಧಾನಸೌಧದ ವರೆಗೆ ಹಮ್ಮಿಕೊಂಡಿದ್ದ ಸನ್ನತ್ತಿ ಪಂಚಶೀಲ ಪಾದಯಾತ್ರೆ 35 ನೇ ದಿನಕ್ಕೆ ಕಾಲಿಟ್ಟಿದೆ.
ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂದ್ರದ ಬುದ್ಧ ವನ ಮಾದರಿಯಲ್ಲಿ 200 ಎಕರೆ ಪ್ರದೇಶದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟದ ಸೇವನ್ನಿ ಸ್ಟಾರ್ ಪ್ರವಾಸಿ ತಾಣವನ್ನಾಗಿ ಮಾಡಲು 500 ಕೋಟಿ ಅನುದಾನ ನಿಗದಿಪಡಿಸಬೇಕು. ಮತ್ತು ಇದಕ್ಕೆ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸನ್ನತಿ ಅಭಿವೃದ್ಧಿ ಮಂಡಳಿಯನ್ನು ಪುನಶ್ಚೇತನಗೊಳಿಸಬೇಕು. ಪ್ರತಿ ವರ್ಷ ಫೆಬ್ರವರಿ 12 ರಂದು ಸಾಮ್ರಾಟ್ ಅಶೋಕ ಸನ್ನತಿ ಉತ್ಸವವನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕು.
ಕರ್ನಾಟಕ ಬೌದ್ಧ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಈ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯದಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಪ್ರಾರಂಭಿಸಬೇಕು ಮತ್ತು ಅದಕ್ಕಾಗಿಯೇ ಕನಿಷ್ಠ 1000 ಕೋಟಿ ಅನುದಾನವನ್ನು ಮೀಸಲಿಡಬೇಕು.
ಭಗವಾನ್ ಬುದ್ಧರ ಜಯಂತಿ ಬುದ್ಧ ಪೂರ್ಣಿಮಾ ದಿನದಂದು ಸಾರ್ವತ್ರಿಕ ರಜೆ ನೀಡಬೇಕು .ರಾಜ್ಯದ ಪ್ರತಿ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಲ್ಲಿ ಬುದ್ಧ ವಿಹಾರ ನಿರ್ಮಾಣ ಮಾಡಲು ಕನಿಷ್ಠ 5 ರಿಂದ 10 ಎಕರೆ ಜಮೀನು ಕಾಯ್ದಿರಿಸಬೇಕು. ಆಸಕ್ತ ಬೌದ್ಧ ಸಂಘ ಸಂಸ್ಥೆಗಳಿಗೆ ಭೂಮಿ ಮಂಜೂರಾತಿ ನೀಡಬೇಕು.
ಕರ್ನಾಟಕ ರಾಜ್ಯದಲ್ಲಿ ದೊರೆತಿರುವ ಸಾಮ್ರಾಟ್ ಅಶೋಕರ ಎಲ್ಲ ಸ್ಥಳಗಳ ಶೀಲಾ ಶಾಸನಗಳನ್ನು ಸಂರಕ್ಷಿಸಲು ಮತ್ತು ಹೆಚ್ಚಿನ ಅಭಿವೃದ್ಧಿ ಪಡಿಸಲು ವಿಶೇಷ ಯೋಜನೆ ರೂಪಿಸಬೇಕು. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿಶ್ವ ವಿಖ್ಯಾತ ಬದ್ದ ಮಲಗಿದ ಬೆಟ್ಟದ ಸಗರಾದ್ರಿ ಪಾರಂಪರಿಕ ತಾಣ ಮತ್ತು ಪರಿಸರ ಸಂರಕ್ಷಣ ಉದ್ಯಾನವನದ ಥೀಮ್ ಪಾರ್ಕ್ ಯೋಜನೆಗೆ 50 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಬೇಕೆಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸುನ್ನತಿಯಿಂದ ಬೆಂಗಳೂರು ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪೂಜ್ಯ ಬಂತೆ ಬೋಧಿದತ್ತ ಥೇರೋ ತಿಳಿಸಿದ್ದಾರೆ.
ಬಿಕ್ಕು ಸಂಘ, ಬಿಕ್ಕುನಿಯರ ಸಂಘ, ಉಪಾಸಕ ಉಪಾಸೀಕ ಸೇರಿ, ಪೂಜ್ಯ ಬಂತೆ ಬೋಧಿದತ್ತ ಥೇರೋ ಅವರ ಸಾನಿಧ್ಯದಲ್ಲಿ ಪೂಜ್ಯ ಬಂತೆ ಅಜಪಾಲ, ಪೂಜ್ಯ ಬಂತೇ ಯಸ, ಬಾಬುರಾವ್ ಭೂತಾಳೆ ಮದರಕಿ, ಪಾಲಿ ಶಿಕ್ಷಕ ರಣಧೀರ ಹೊಸಮನಿ ಕನಕನಹಳ್ಳಿ, ಶಿವರಾಮ್ ಸಿರಿಗೆರಿ, ಮಹೇಶ್ ಮೈಸೂರ್, ಸಂಜಯ್ ದೋರನಹಳ್ಳಿ , ಸಿದ್ದು ಜೇವರ್ಗಿ, ಈರಣ್ಣ ಟಿ ಯಸ್ ಕೂಡ್ಲೂರು ಪಾದಯಾತ್ರೆಯಲ್ಲಿ ಇದ್ದರು.