ಸೇಡಂ ಇಂದಿರಾ ಕ್ಯಾಂಟಿನ್ ಉದ್ಘಾಟನೆ, ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಕಾಳಜಿಯ ಹೆಜ್ಜೆಯಾಗಿದೆ: ಶರಣಪ್ರಕಾಶ ಪಾಟೀಲ
ನಾಗಾವಿ ಎಕ್ಸಪ್ರೆಸ್
ಸೇಡಂ: ಬಡವರಿಗೆ, ಹಸಿದವರಿಗೆ ಮೂರು ಹೊತ್ತು ಹೊಟ್ಟೆ ತುಂಬಾ ಊಟವನ್ನು ಅತ್ಯಂತ ಕಡಿಮೆ ದರದಲ್ಲಿ ದೊರಕಿಸಿ ಕೊಡುವ ರಾಜ್ಯದ ಜನಪ್ರಿಯ ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿಯ ಹೆಜ್ಜೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ಮಹಾತ್ಮ ಬಸವೇಶ್ವರ ವೃತ್ತದ ಬಳಿ 2024-25ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನುದಾನದಲ್ಲಿ (ಅಂದಾಜು ಮೊತ್ತ 127.00 ಲಕ್ಷ ರೂ) ಸೇಡಂ ಪುರಸಭೆ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ಜನರಿಗೆ, ಅದರಲ್ಲೂ ಶ್ರಮಿಕರು, ಹಸಿದವರ ಹೊಟ್ಟೆಗೆ ಅನ್ನವನ್ನು ನೀಡುವ ಮಹೋನ್ನತವಾದ ಕಾರ್ಯ ಈ ಇಂದಿರಾ ಕ್ಯಾಂಟೀನ್ ದಾಗಿದೆ ಎಂದರು.
ನನ್ನ ಮತಕ್ಷೇತ್ರದ ಸೇಡಂ ಪಟ್ಟಣದ ಸಾರ್ವಜನಿಕ ಸೇವೆಗಾಗಿ ಈಗ ಸೇಡಂ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಿಮ್ಮ ಇಂದಿರಾ ಕ್ಯಾಂಟೀನ್ ತಲೆ ಎತ್ತಿ ನಿಂತಿದೆ ಎಂದರು. ಈ ಸಂದರ್ಭದಲ್ಲಿ ಸೇಡಂ ಪುರಸಭೆ ಅಧಿಕಾರಿಗಳು, ನಾಗರೀಕರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

