ಸೇಡಂ ಪಟ್ಟಣದಲ್ಲಿ ಬಿಜೆಪಿ ಮುಖಂಡರಿಂದ ಸನ್ಮಾನ | ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಶಕ್ತಿಮೀರಿ ಪ್ರಯತ್ನ: ಬೆಣ್ಣೂರಕರ್
ನಾಗಾವಿ ಎಕ್ಸಪ್ರೆಸ್
ಸೇಡಂ: ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆ ಇನ್ನಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ, ಇದಕ್ಕೆ ಪಕ್ಷದ ಹಿರಿಯರು ಸೇರಿದಂತೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ಮನವಿ ಮಾಡಿದರು.
ಪಟ್ಟಣದ ಮಾಜಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ್ ಅವರ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷದ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟು ಜಿಲ್ಲಾ ಮಟ್ಟದ ಪ್ರಧಾನ ಕಾರ್ಯದರ್ಶಿಯಂತಹ ಗುರುತರವಾದ ಜವಾಬ್ದಾರಿ ನೀಡಿದ್ದಾರೆ, ಇದನ್ನು ನಾನು ಅಷ್ಟೇ ಬದ್ಧತೆ ಹಾಗೂ ಪ್ರಾಮಾಣಿಕವಾಗಿ ನಿಭಾಯಿಸಿ ಪಕ್ಷಕ್ಕೆ ಹಾಗೂ ಪಕ್ಷದ ನಾಯಕರಿಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ್ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಮೂಲಕ ಪಕ್ಷದ ಸಂಘಟನೆಗೆ ಶ್ರಮಿಸಿ ನಮ್ಮ ಮಾರ್ಗದರ್ಶನ ಸದಾ ಇರುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಘನತೆ ಗೌರವ ಮತ್ತಷ್ಟು ಹೆಚ್ಚಿಸಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಹಾದಿಮನಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಂದ್ರ ಪೂಜಾರಿ, ಚಿತ್ತಾಪುರ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ಮುಖಂಡರಾದ ರಾಮು ಕಣೆಕಲ್, ಶಿವುಕುಮಾರ್ ತೊಟ್ನಳ್ಳಿ, ಮಲ್ಲಿಕಾರ್ಜುನ ದಳಪತಿ ಹುಳಗೋಳ, ತಮ್ಮಣ್ಣ ಮುಧೋಳ್, ರಾಜಕುಮಾರ್ ಕಟ್ಟಿ, ಲಕ್ಷ್ಮಣ್ ಮಂತ್ರಿ ಕೊಡ್ಲಾ, ಸಿದ್ದು ಉಡಿಗಿ, ಸಾಗರ್ ಕಲಕಮ್, ವಿಷ್ಣು ಉಡುಗಿ, ಸಿದ್ದಲಿಂಗ ಗೌತಮ್, ಮಹಾವೀರ ಅಳ್ಳೋಳ್ಳಿ, ರವೀಂದ್ರ ನಾಯಕ್, ನಾಗು ಶೆಟ್ಟಿ ಹುಡಾ, ಲಾಲಪ್ಪ ಕಟ್ಟಿಮನಿ, ಹನುಮಂತ ಭರತನೂರು, ನಾಗಪ್ಪ ಯಾಡಗ, ಶಂಕರ್ ತರನಳ್ಳಿ, ಮುನಿಯಪ್ಪ ಬಿಜ್ಜನಳ್ಳಿ, ವಸಂತ್ ಕುಮಾರ್, ಜೈ ಪ್ರಕಾಶ್ ರಾಥೋಡ್, ರವಿ ಹಾಬಾಳ ಸೇರಿದಂತೆ ಇತರರು ಇದ್ದರು.

