Oplus_0

ಸೂಲಹಳ್ಳಿ ಗ್ರಾಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಗ್ರಾಮದಲ್ಲಿ ಆರ್ಯ ಈಡಿಗ ಸಮಾಜದ ವತಿಯಿಂದ ಮಹಾನ್ ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ ಮಾಡಲಾಯಿತು. ಸಮಾಜದ ಹಿರಿಯ ಮುಖಂಡ ಶಂಕರಗೌಡ ರಾವೂರಕರ್ ಲೀಡರ್ ಅವರು ಭಾವಚಿತ್ರ ಅನಾವರಣ ಮಾಡಿ ಗೌರವ ನಮನಗಳು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಮಾಜದ ಜನರು ಒಗ್ಗೂಡಿ ನಾರಾಯಣ ಗುರುಗಳ ಜಯಂತಿ ಆಚರಣೆ ಮಾಡಿರುವುದು ತುಂಬಾ ಸಂತೋಷವಾಗಿದೆ. ಇದೇ ರೀತಿ ಚಿತ್ತಾಪುರ ಪಟ್ಟಣದಲ್ಲಿ ಸೆ.11 ರಂದು ಅದ್ದೂರಿಯಾಗಿ ನಡೆಯಲಿರುವ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಶ್ರೀ ವೇದ ಮೂರ್ತಿ ದೊಡ್ಡಯ್ಯ ಸ್ವಾಮಿ ಅವರು ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಸಿಂಗ್ ಚವ್ಹಾಣ, ಉಪಾಧ್ಯಕ್ಷ ರಾಮು ಗಡ್ಡಿಮನಿ, ಜಯಂತಿ ಸಮಿತಿ ಅಧ್ಯಕ್ಷ ಆನಂದ ರಾವೂರಕರ್, ಮುಖಂಡರಾದ ನಾಗಯ್ಯ ಗುತ್ತೇದಾರ ಕರದಾಳ, ಕಾಶಿನಾಥ ಗುತ್ತೇದಾರ, ಸುನೀಲ್ ಗುತ್ತೇದಾರ ವಾಡಿ, ಮಲ್ಲಯ್ಯ ಗುತ್ತೇದಾರ, ದೀಪಕ್ ಗುತ್ತೇದಾರ, ಸಂತೋಷ ಗುತ್ತೇದಾರ, ಅಶೋಕ ಗುತ್ತೇದಾರ, ರಾಮು ಗಡ್ಡಿಮನಿ, ರವಿ ಟಿ ಗುತ್ತೇದಾರ, ವೀರೇಶ್ ಗುತ್ತೇದಾರ, ರಾಜು ಗುತ್ತೇದಾರ, ಸುರೇಶ್ ಗುತ್ತೇದಾರ, ಆನಂದ್ ಗುತ್ತೇದಾರ, ನಾಗಯ್ಯ ಗುತ್ತೇದಾರ, ಮೈ ಪಾಲ್ ರೆಡ್ಡಿ ಗುತ್ತೇದಾರ, ಶಿವಯ್ಯ ಗುತ್ತೇದಾರ, ಸಿದ್ದು ಗುತ್ತೇದಾರ, ದೀಪಕ್ ಗುತ್ತೇದಾರ, ದೇವಪ್ಪ ನಂದೂರಕರ್, ಭೀಮಾಶಂಕರ್ ಗುತ್ತೇದಾರ, ಬಸವರಾಜ ಹಡಪದ,  ಶಿವಗೌಡ, ರವಿ ಕದ್ದರಗಿ, ದೇವೇಂದ್ರಪ್ಪ ಪಡಶೆಟ್ಟಿ, ಭೀಮರಾಯ ಅಲ್ಲೂರ, ಶರಣು ಸುಬೇದಾರ್, ಬಸವರಾಜ್ ದೊಡ್ಡಮನಿ, ಲೋಕೇಶ್ ದೊಡ್ಡಮನಿ ಸೇರಿದಂತೆ ಇತರರು ಇದ್ದರು. ರವಿ ಗುತ್ತೇದಾರ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!