Oplus_0

ಚಿತ್ತಾಪುರ ವಾಲ್ಮೀಕಿ ಭವನ ದುರಸ್ತಿಗೋಳಿಸಿ ವಾಲ್ಮೀಕಿ ಸಮಾಜಕ್ಕೆ ಒಪ್ಪಿಸಲು ಭೀಮರಾಯ ದೋರಿ ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾ ಹಿಂದುಗಡೆ ನಿರ್ಮಾಣವಾದ ವಾಲ್ಮೀಕಿ ಭವನವನ್ನು ಕೂಡಲೇ ದುರಸ್ತಿಗೊಳಿಸಿ, ಸ್ವಚ್ಛತೆ ಮಾಡಿ ವಾಲ್ಮೀಕಿ ಸಮಾಜಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿ ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ ಅವರಿಗೆ ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾಯ ಬಿ ದೋರಿ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

ಸದರಿ ವಾಲ್ಮೀಕಿ ಭವನದ ನಿರ್ಮಾಣ ಮಾಡುವ ಸಲುವಾಗಿ ಕರ್ನಾಟಕ ಭೂಸೇನಾ ನಿಗಮದ ವತಿಯಿಂದ 1 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣ ಮಾಡಿದ್ದು ಮಾಹಿತಿ ಇರುತ್ತದೆ. ಆದರೆ ಒಂದು ಕೋಟಿಯ ಭವನ ಇಲ್ಲವೆಂದು ಶಂಖೆ ಇರುತ್ತದೆ ಕಾರಣ ಟೆಂಡರವಾಗಿರುವ ಆದೇಶ ಪ್ರತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

10 ವರ್ಷಗಳಿಂದ ಸ್ಥಗೀತಗೊಂಡಿರುವ ವಾಲ್ಮೀಕಿ ಭವನವನ್ನು ಮುತುವರ್ಜಿವಹಿಸಿ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗನೇ ಮಾಡಿಸಿ, ಪ್ರಮುಖವಾಗಿ ಸದರಿ ಭವನ ಸುತ್ತಳತೆ ಕಡಿಮೆ ಇರುತ್ತದೆ ಎಂದು ಅನುಮಾನವಿದೆ ಹೀಗಾಗಿ ಸರಕಾರದಿಂದ ಮಂಜೂರಾತಿಯಾಗಿರುವ 100/100 ಅಳತೆ ಹೊಂದಿರುವ ಶ್ರೀ ವಾಲ್ಮೀಕಿ ಭವನವನ್ನು 1 ತಿಂಗಳ ಒಳಗಡೆ ಕಾಮಗಾರಿಯನ್ನು ಪೂರ್ಣಗೊಳಿಸಿ. ನಮ್ಮ ಮಹರ್ಷಿ ವಾಲ್ಮೀಕಿ ಸಮಾಜ ತಾಲೂಕು ಅಧ್ಯಕ್ಷರಿಗೆ ಹಸ್ತಾಂತರ ಮಾಡಬೇಕು, ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ, ಈ ಮನವಿ ಸ್ವೀಕೃತಗೊಂಡ ದಿನದಿಂದ 1 ತಿಂಗಳ ಒಳಗಡೆ ಕಾಮಗಾರಿಯು ಪೂರ್ಣಗೊಳ್ಳದೆ ಇದ್ದ ಪಕ್ಷದಲ್ಲಿ ನಮ್ಮ ಸಮುದಾಯು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಾಬಣ್ಣ ಮುಸ್ಲಾ, ರಾಜು ದೋರಿ, ಅಂಬಣ್ಣ ಬೊಮ್ಮನಹಳ್ಳಿ, ಹಣಮಂತ ಬೊಮ್ಮನಹಳ್ಳಿ, ಮೌನೇಶ್ ಲಾಡ್ಲಾಪೂರ, ಸಾಬಣ್ಣ ಲಾಡ್ಲಾಪೂರ, ರಾಮು ಮುಸ್ಲಾ, ಭೀಮರಾಯ ಲಾಡ್ಲಾಪೂರ, ಸಾಬಣ್ಣ ಕುಂಬಾರಹಳ್ಳಿ, ಹಣಮಂತ ಗಲಿಗಿನ್, ಅಮೃತ್ ಶಾಮನೂರ, ಮಹಾದೇವ ಬೊಮ್ಮನಹಳ್ಳಿ, ಉಮೇಶ್ ದೋರಿ, ವೆಂಕಟೇಶ್ ಬಳಿಚಕ್ರ, ಜಗದೇವ ಚಾಮನೂರ, ಚಂದ್ರು ಇಟಗಾ, ಭಾಗಣ್ಣ ದೋರಿ, ಸಾಯಬಣ್ಣ ವಾಡಿ, ದೇವಪ್ಪ ಕುಂಬಾರಹಳ್ಳಿ, ನಿಂಗಣ್ಣ ಚಾಮನೂರ, ಹಣಮಂತ ದಿಗ್ಗಾಂವ, ಶರಣು ವಾಡಿ, ಭೀಮಾಶಂಕರ ದಿಗ್ಗಾಂವ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!