Oplus_0

ವರಮಹಾಲಕ್ಷ್ಮೀ ಪೂಜೆ, ಧಾರ್ಮಿಕ ಸಮಾರಂಭ |  ಗ್ರಾಮೀಣ ಅಭಿವೃದ್ಧಿಯಲ್ಲಿ ಎಸ್‌ಕೆಡಿಆ‌‌ಡಿಪಿ ಪಾತ್ರ ಪ್ರಮುಖ: ಮಾಳಂಜೆ

ನಾಗಾವಿ ಎಕ್ಸಪ್ರೆಸ್ 

ಕಾಳಗಿ: ಕರ್ನಾಟಕದ ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ನ ಕಲಬುರಗಿ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜೆ ಹೇಳಿದರು.

ತಾಲೂಕಿನ ರಟಕಲ್ ಗ್ರಾಮದ ವಿರಕ್ತ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಚಿಂಚೋಳಿ ಹಾಗೂ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ರಟಕಲ್, ಕೋಡ್ಲಿ ವಲಯ ವತಿಯಿಂದ ಹಮ್ಮಿಕೊಂಡ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸಲು ಸ್ವಸಹಾಯ ಗುಂಪುಗಳು, ಸೂಕ್ಷ್ಮ ಸಾಲ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಸ್ವ ಉದ್ಯೋಗ, ಶಿಕ್ಷಣ ಮತ್ತು ಜ್ಞಾನವಿಕಾಸ, ಗ್ರಾಮೀಣ ವಸತಿ ಯೋಜನೆ, ಕೃಷಿ ಅಭಿವೃದ್ಧಿ, ನೈರ್ಮಲ್ಯ ಮತ್ತು ಆರೋಗ್ಯ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಸಬಲೀಕರಣದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತದೆ ಮತ್ತು ರಾಜ್ಯಾದ್ಯಂತ ಸಾವಿರಾರು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಹತ್ತು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿದರು. ರಟಕಲ್ ವಿರಕ್ತ ಮಠದ ಪೂಜ್ಯ ನೀಲಕಂಠ ಮರಿದೇವರು, ಪೂಜ್ಯ ರೇವಣಸಿದ್ದ ಶಿವಾಚಾರ್ಯರು, ಗೌರಿಗುಡ್ಡದ ಪೂಜ್ಯ ರೇವಣಸಿದ್ದ ಶರಣರು, ಕೋಡ್ಲಿಯ ಪೂಜ್ಯ ಬಸವಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.

ರಟಕಲ್‌ ಪಿಎಸ್‌ಐ ಶೀಲಾದೇವಿ, ಮುಖಂಡರಾದ ಬಸವರಾಜ ಚೊಕಾ, ಸಿದ್ದಯ್ಯ ಕಿಣ್ಣಿ, ಮಹಾದೇವಪ್ಪ ಭೀಮಳ್ಳಿ, ತರುಣ ಶೇಖರ ಬಿರಾದಾರ, ಮಲ್ಲಣ್ಣ ಭೈರಪ್ಪ, ರೈತ ಸಂಘದ ಕಾಳಗಿ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಮಲ್ಲಿನಾಥ್ ಮುಚ್ಚೆಟ್ಟಿ, ಹಿಂದೂ ಜಾಗೃತಿ ಸೇನೆಯ ತಾಲೂಕು ಅಧ್ಯಕ್ಷ ಶಂಕರ ಚೊಕಾ, ಶಿವರಾಜ ಭೀಮಳ್ಳಿ, ಮಲ್ಲಿಕಾರ್ಜುನ ಬೆಡಸೂರ, ಲಾಲ್ ಸಾಬ್‌ ಹೊಳಕುಂದ, ರಾಜೇಶ್ವರಿ ಕಟ್ಟಿಮನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್‌ನ ಯೋಜನಾಧಿಕಾರಿಗಳು, ಕೋಡ್ಲಿ ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಸ್ವಸಹಾಯ ಸಂಘಗಳ ಒಕ್ಕೂಟ ಸದಸ್ಯರು, ಇದ್ದರು. ಲಲಿತಾ ಪ್ರಾರ್ಥಿಸಿದರು. ಶಕುಂತಲಾ ನಿರೂಪಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!