ಕಲಬುರಗಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳಲ್ಲಿ ಚಿತ್ತಾಪುರ ಮತಕ್ಷೇತ್ರದ ನಾಲ್ವರಿಗೆ ಅವಕಾಶ | ಪಕ್ಷದ ಸಂಘಟನೆಗೆ ಮತ್ತಷ್ಟು ಬಲ: ಸಜ್ಜನಶೆಟ್ಟಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಲಬುರಗಿ ಗ್ರಾಮಾಂತರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಪದಾಧಿಕಾರಿಗಳಲ್ಲಿ ಚಿತ್ತಾಪುರ ಮತಕ್ಷೇತ್ರದ ನಾಲ್ಕು ಜನ ಮುಖಂಡರಿಗೆ ಅವಕಾಶ ಸಿಕ್ಕಂತಾಗಿದೆ.

ಶರಣು ಜ್ಯೋತಿ ರಾವೂರ, (ಉಪಾಧ್ಯಕ್ಷರು), ಬಸವರಾಜ ಬೆಣ್ಣೂರಕರ್ (ಪ್ರಧಾನ ಕಾರ್ಯದರ್ಶಿ), ಗಿರೀಶ್ ಭಜಂತ್ರಿ ಅಳ್ಳೋಳ್ಳಿ, (ಕಾರ್ಯದರ್ಶಿ) ಚಂದ್ರಶೇಖರ ಪರಸರೆಡ್ಡಿ (ವಕ್ತಾರರು) ಅವರಿಗೆ ಅವಕಾಶ ಒದಗಿಬಂದಿದೆ.

ಶರಣು ಜ್ಯೋತಿ ರಾವೂರ ಅವರು ಈ ಮೊದಲು ಚಿತ್ತಾಪುರ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಂಘಟನೆ ಚತುರತೆ ಗಮನಿಸಿ ಜಿಲ್ಲಾ ಅಧ್ಯಕ್ಷರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ.

ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಅವರು ಈಗಾಗಲೇ ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಜಿಲ್ಲೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಇವರ ಸಂಘಟನಾ ಶಕ್ತಿಯನ್ನು ಪರಿಗಣಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಅಳ್ಳೋಳ್ಳಿಯ ಗಿರೀಶ್ ಭಜಂತ್ರಿ ಅವರು ಬಿಜೆಪಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಟ ಜಿಲ್ಲಾ ಸಂಚಾಲಕರಾಗಿ ಹಾಗೂ ಚಿತ್ತಾಪುರ ಮಂಡಲದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಪ್ರಸ್ತುತ ಜಿಲ್ಲಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.

ನಾಲವಾರದ ಚಂದ್ರಶೇಖರ ಪರಸರೆಡ್ಡಿ ಈಗಾಗಲೇ ಕೇಂದ್ರ ಸರ್ಕಾರದ ಮೀನುಗಾರಿಕೆ ನಿಗಮದ ನಿರ್ದೇಶಕರಾಗಿ ಹಾಗೂ ಜಿಲ್ಲಾ ಬಿಜೆಪಿ ವಕ್ತಾರರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ ಹೀಗಾಗಿ ಇವರ ಪಕ್ಷ ನಿಷ್ಠೆಯ ಸೇವೆ ಗುರುತಿಸಿ ಮತ್ತೊಂದು ಅವಧಿಗೆ ಜಿಲ್ಲಾ ವಕ್ತಾರ ರನ್ನಾಗಿ ಆಯ್ಕೆ ಮಾಡಲಾಗಿದೆ.

ಚಿತ್ತಾಪುರ ಬಿಜೆಪಿ ಸಂಘಟನೆಗೆ ಮತ್ತಷ್ಟು ಬಲ ಬಂದಿದೆ: ಸಜ್ಜನಶೆಟ್ಟಿ 

ಬಿಜೆಪಿ ಜಿಲ್ಲಾ ಪದಾಧಿಕಾರಿಗಳಲ್ಲಿ ಚಿತ್ತಾಪುರ ಮತಕ್ಷೇತ್ರದ ನಾಲ್ಕು ಜನರಿಗೆ ಅವಕಾಶ ಸಿಕ್ಕಿರುವುದು ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ಬಂದಂತಾಗಿದೆ ನಮಗೂ ಕೂಡ ವೈಯಕ್ತಿಕ ಸಂತೋಷವನ್ನುಂಟು ಮಾಡಿದೆ ಎಂದು ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ನಾಗಾವಿ ಎಕ್ಸಪ್ರೆಸ್ ಗೆ ತಿಳಿಸಿದ್ದಾರೆ.

ಜಿಲ್ಲಾ ಪದಾಧಿಕಾರಿಗಳ ಸ್ಥಾನಕ್ಕೆ ಯಾರೂ ಅರ್ಜಿ ಹಾಕಿಲ್ಲ. ಪಕ್ಷ ಇವರ ಕ್ರಿಯಾಶೀಲತೆ ಹಾಗೂ ಸಂಘಟನೆ ಚತುರತೆಯನ್ನು ಗುರುತಿಸಿ ಜವಾಬ್ದಾರಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!